ಇಂಡಿಯಾ ರೆಡ್‌ಗೆ ಸತತ ಎರಡನೆ ಜಯ

7
ಮಹಿಳಾ ಟ್ವೆಂಟಿ–20 ಚಾಲೆಂಜರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿ

ಇಂಡಿಯಾ ರೆಡ್‌ಗೆ ಸತತ ಎರಡನೆ ಜಯ

Published:
Updated:
Deccan Herald

ಬೆಂಗಳೂರು: ಪೂನಂ ರಾವುತ್‌ (25; 36ಎ, 2ಬೌಂ) ಮತ್ತು ಮೋನಾ ಮೆಷ್ರಮ್‌ (33; 35ಎ, 3ಬೌಂ) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಇಂಡಿಯಾ ರೆಡ್‌ ತಂಡ ಮಹಿಳಾ ಟ್ವೆಂಟಿ–20 ಚಾಲೆಂಜರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಇಂಡಿಯಾ ಗ್ರೀನ್‌ ತಂಡವನ್ನು ಎಂಟು ರನ್‌ಗಳಿಂದ ಮಣಿಸಿದೆ.

ದೀಪ್ತಿ ಶರ್ಮಾ ನೇತೃತ್ವದ ರೆಡ್‌ ತಂಡ ಟೂರ್ನಿಯಲ್ಲಿ ದಾಖಲಿಸಿದ ಸತತ ಎರಡನೆ ಗೆಲುವು ಇದಾಗಿದೆ. ಮೊದಲ ಪಂದ್ಯದಲ್ಲಿ ದೀಪ್ತಿ ಪಡೆ ಇಂಡಿಯಾ ಬ್ಲೂ ಸವಾಲು ಮೀರಿತ್ತು.

ಬೆಂಗಳೂರಿನ ಹೊರವಲಯದಲ್ಲಿರುವ ಆಲೂರಿನ ಮೂರನೆ ಮೈದಾನದಲ್ಲಿ ಗುರುವಾರ ಮೊದಲು ಬ್ಯಾಟ್‌ ಮಾಡಿದ ಇಂಡಿಯಾ ರೆಡ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 114ರನ್‌ ಪೇರಿಸಿತು. ಸಾಧಾರಣ ಗುರಿ ಬೆನ್ನಟ್ಟಿದ ಕರ್ನಾಟಕದ ವೇದಾ ಕೃಷ್ಣಮೂರ್ತಿ ನಾಯಕತ್ವದ ಇಂಡಿಯಾ ಗ್ರೀನ್‌ 19.4 ಓವರ್‌ಗಳಲ್ಲಿ 106ರನ್‌ಗಳಿಗೆ ಹೋರಾಟ ಮುಗಿಸಿತು.

ಮೊದಲು ಬ್ಯಾಟ್‌ ಮಾಡಿದ ರೆಡ್‌ ತಂಡಕ್ಕೆ ಪೂನಂ ಮತ್ತು ದೀಪ್ತಿ ಶರ್ಮಾ (19; 14ಎ, 2ಬೌಂ, 1ಸಿ) ಭದ್ರ ಅಡಿಪಾಯ ಹಾಕಿಕೊಟ್ಟರು. ಇವರು ಮೊದಲ ವಿಕೆಟ್‌ಗೆ 28 ಎಸೆತಗಳಲ್ಲಿ 33ರನ್‌ ದಾಖಲಿಸಿದರು. ಇವರು ಔಟಾದ ನಂತರ ಮೋನಾ, ತಂಡದ ಮೊತ್ತ ಹೆಚ್ಚಿಸಿದರು.

ಗುರಿ ಬೆನ್ನಟ್ಟಿದ ಗ್ರೀನ್‌ ತಂಡ ಶಿಖಾ ಪಾಂಡೆ ಹಾಕಿದ ಮೊದಲ ಓವರ್‌ನ ಮೂರನೆ ಎಸೆತದಲ್ಲಿ ಜೆಮಿಮಾ ರಾಡ್ರಿಗಸ್‌ (0) ವಿಕೆಟ್‌ ಕಳೆದುಕೊಂಡಿತು. ಸುಶ್ರೀ ಪ್ರಧಾನ (11; 15ಎ, 1ಬೌಂ), ವೇದಾ ಕೃಷ್ಣಮೂರ್ತಿ (27; 25ಎ, 4ಬೌಂ) ಮತ್ತು ಅರುಂಧತಿ ರೆಡ್ಡಿ (20; 14ಎ, 2ಸಿ) ನಡೆಸಿದ ಪ್ರಯತ್ನಕ್ಕೆ ಫಲ ಸಿಗಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ಇಂಡಿಯಾ ರೆಡ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 114 (ಪೂನಂ ರಾವುತ್‌ 25, ದೀಪ್ತಿ ಶರ್ಮಾ 19, ಮೋನಾ ಮೆಷ್ರಮ್‌ 33, ಟಿ.ಪಿ.ಕನ್ವರ್‌ 7, ತನುಶ್ರೀ ಸರ್ಕಾರ್‌ 6; ರಾಜೇಶ್ವರಿ ಗಾಯಕವಾಡ 16ಕ್ಕೆ2, ಕೃತಿಕಾ ಚೌಧರಿ 19ಕ್ಕೆ1, ಸುಶ್ರೀ ಪ್ರಧಾನ್‌ 19ಕ್ಕೆ4).

ಇಂಡಿಯಾ ಗ್ರೀನ್‌: 19.4 ಓವರ್‌ಗಳಲ್ಲಿ 106 (ಪ್ರಿಯಾ ಪೂನಿಯಾ 8, ಸುಶ್ರೀ ಪ್ರಧಾನ್‌ 11, ವೇದಾ ಕೃಷ್ಣಮೂರ್ತಿ 27, ಸಂಜೀವನ್‌ ಸಾಜನ 10, ಅರುಂಧತಿ ರೆಡ್ಡಿ 20, ಸುಷ್ಮಾ ವರ್ಮಾ 8, ಜೂಲನ್‌ ಗೋಸ್ವಾಮಿ 10; ಶಿಖಾ ಪಾಂಡೆ 11ಕ್ಕೆ2, ಏಕ್ತಾ ಬಿಷ್ಠ್‌ 29ಕ್ಕೆ1, ಟಿ.ಪಿ.ಕನ್ವರ್‌ 17ಕ್ಕೆ1, ದೀಪ್ತಿ ಶರ್ಮಾ 12ಕ್ಕೆ1, ತನುಶ್ರೀ ಸರ್ಕಾರ್‌ 8ಕ್ಕೆ1).

ಫಲಿತಾಂಶ: ಇಂಡಿಯಾ ರೆಡ್‌ ತಂಡಕ್ಕೆ 8ರನ್‌ ಗೆಲುವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !