ಚೆನ್ನೈ: ರವಿಚಂದ್ರನ್ ಅಶ್ವಿನ್ ಅವರ ಆಲ್‌ರೌಂಡ್ ಆಟದ (113 ರನ್, 6 ವಿಕೆಟ್) ನೆರವಿನಿಂದ ಭಾರತ ತಂಡವು ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಇಲ್ಲಿನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 280 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
515 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ನಾಲ್ಕನೇ ದಿನದಾಟದಲ್ಲಿ 62.1 ಓವರ್‌ಗಳಲ್ಲಿ 234 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ತವರು ಅಂಗಣದಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಅಮೋಘ ಶತಕ ಗಳಿಸಿದ್ದ ಅಶ್ವಿನ್, ಬೌಲಿಂಗ್‌ನಲ್ಲೂ ಆರು ವಿಕೆಟ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಅಶ್ವಿನ್ 21 ಓವರ್‌ಗಳಲ್ಲಿ 88 ರನ್ನಿಗೆ ಆರು ವಿಕೆಟ್ ಪಡೆದರು.
ಮೊದಲ ಇನಿಂಗ್ಸ್‌ನಲ್ಲಿ 86 ರನ್‌ಗಳ ಅಮೂಲ್ಯ ಇನಿಂಗ್ಸ್ ಕಟ್ಟಿದ ರವೀಂದ್ರ ಜಡೇಜ ಸಹ ಮೂರು ವಿಕೆಟ್ ಕಿತ್ತು ಗಮನ ಸೆಳೆದರು.
ಮೂರನೇ ದಿನದ ಅಂತ್ಯದಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ ಸಂಕಷ್ಟದಲ್ಲಿದ್ದ ಬಾಂಗ್ಲಾದೇಶ, ಇಂದು ತನ್ನ ಖಾತೆಗೆ 76 ರನ್ ಪೇರಿಸುವಷ್ಟರಲ್ಲಿ ಉಳಿದ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಯಕ ನಜ್ಮುಲ್ ಹುಸೇನ್ ಶಾಂತೊ ದಿಟ್ಟ ಹೋರಾಟ (82) ನೀಡಿದರು. ಶಕೀಬ್ ಅಲ್ ಹಸನ್ 25 ರನ್ ಗಳಿಸಿದರು.
ಇನ್ನುಳಿದಂತೆ ಲಿಟನ್ ದಾಸ್ (1), ಮೆಹದಿ ಹಸನ್ ಮಿರಾಜ್ (8), ತಸ್ಕಿನ್ ಅಹ್ಮದ್ (5) ಹಾಗೂ ಹಸನ್ ಮಹಮೂದ್ (7) ನಿರಾಸೆ ಮೂಡಿಸಿದರು.
ರವಿಚಂದ್ರನ್ ಅಶ್ವಿನ್
(ಪಿಟಿಐ ಚಿತ್ರ)
ಅಶ್ವಿನ್ (113), ಜಡೇಜ (86) ಹಾಗೂ ಯಶಸ್ವಿ ಜೈಸ್ವಾಲ್ (56) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಭಾರತ ಮೊದಲ ಇನಿಂಗ್ಸ್‌ನಲ್ಲಿ 376 ರನ್ ಗಳಿಸಿತು. ಬಾಂಗ್ಲಾ ಪರ ಹಸನ್ ಮಹಮೂದ್ ಐದು ವಿಕೆಟ್ ಗಳಿಸಿದರು.
ನಂತರ ಜಸ್‌ಪ್ರೀಮ್ ಬೂಮ್ರಾ (50ಕ್ಕೆ 4 ವಿಕೆಟ್) ದಾಳಿಗೆ ತತ್ತರಿಸಿದ ಬಾಂಗ್ಲಾದೇಶ 149ಕ್ಕೆ ಆಲೌಟ್ ಆಯಿತು. ಆ ಮೂಲಕ ಭಾರತ ಮೊದಲ ಇನಿಂಗ್ಸ್‌ನಲ್ಲಿ 227 ರನ್‌ಗಳ ಮುನ್ನಡೆ ಗಳಿಸಿತು.
ದ್ವಿತೀಯ ಇನಿಂಗ್ಸ್‌ನಲ್ಲಿ ಶುಭಮನ್ ಗಿಲ್ (119*) ಹಾಗೂ ರಿಷಭ್ ಪಂತ್ (109) ಶತಕಗಳ ನೆರವಿನಿಂದ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ಆ ಮೂಲಕ ಬಾಂಗ್ಲಾದೇಶಕ್ಕೆ 515 ರನ್‌ಗಳ ಬೃಹತ್ ಗೆಲುವಿನ ಗುರಿ ಒಡ್ಡಿತು.
ಸೆಪ್ಟೆಂಬರ್ 27ರಂದು ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವು ಕಾನ್ಪುರದಲ್ಲಿ ಆರಂಭವಾಗಲಿದೆ.
Victory by 2⃣8⃣0⃣ runs in the 1st Test in Chennai 🙌#TeamIndia take a 1⃣-0⃣ lead in the series 👏👏
— BCCI (@BCCI) September 22, 2024
Scorecard ▶️ https://t.co/jV4wK7BOKA #INDvBAN | @IDFCFIRSTBank pic.twitter.com/wVzxMf0TtV
Jadeja wraps things up in style! 😎
— BCCI (@BCCI) September 22, 2024
It's all over in Chennai 🙌#TeamIndia | #INDvBAN | @IDFCFIRSTBank pic.twitter.com/1ChxakWLfL
📽️ WATCH
— BCCI (@BCCI) September 22, 2024
The dismissal that completed five-wicket haul number 37 in Test Cricket for @ashwinravi99 👏👏#TeamIndia | #INDvBAN | @IDFCFIRSTBank pic.twitter.com/tDKMeNn33O
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.