ಕ್ರಿಕೆಟ್‌ ವಿಶ್ವಕಪ್‌ಗೆ ಇದೇ 15ರಂದು ಪ್ರಕಟವಾಗಲಿದೆ ಟೀಂ ಇಂಡಿಯಾ

ಶುಕ್ರವಾರ, ಏಪ್ರಿಲ್ 19, 2019
27 °C

ಕ್ರಿಕೆಟ್‌ ವಿಶ್ವಕಪ್‌ಗೆ ಇದೇ 15ರಂದು ಪ್ರಕಟವಾಗಲಿದೆ ಟೀಂ ಇಂಡಿಯಾ

Published:
Updated:

ನವದೆಹಲಿ: ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಆಡಲಿರುವ ಭಾರತದ 15 ಜನರ ತಂಡವನ್ನು ಇದೇ 15ರಂದು ಮುಂಬೈನಲ್ಲಿ ಪ್ರಕಟಿಸಲಾಗುವುದು ಎಂದು ಬಿಸಿಸಿಐ ಸೋಮವಾರ ತಿಳಿಸಿದೆ. 

ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ ನಿಯಮಾವಳಿಗಳ ಪ್ರಕಾರ ಏಪ್ರಿಲ್‌ 23 ಒಳಗಾಗಿ ಅರ್ಹ ದೇಶಗಳು ತಮ್ಮ ತಂಡದ ಪಟ್ಟಿಯನ್ನು ಸಲ್ಲಿಸಬೇಕು. ಅಲ್ಲದೆ, 15 ಮಂದಿ ಆಟಗಾರರ ಪಟ್ಟಿಯಲ್ಲಿ ಏನಾದರೂ ಬದಲಾವಣೆಗಳಿದ್ದರೆ ಟೂರ್ನಿ ಆರಂಭಕ್ಕೂ 7 ದಿನಗಳ ಮೊದಲು ಮಾಡಿಕೊಳ್ಳಲು ಅವಕಾಶಗಳಿವೆ. 

ಈ ಮೊದಲು, ವಿಶ್ವಕಪ್‌ನಲ್ಲಿ ಆಡಲಿರುವ ತಂಡ ಎರಡು ತಿಂಗಳಿಗೂ ಮೊದಲೇ 30 ಮಂದಿ ಆಟಗಾರರ ನಿರೀಕ್ಷಿತ ಪಟ್ಟಿಯನ್ನು ಘೋಷಣೆ ಮಾಡಬೇಕಾಗಿತ್ತು. ಆದರೆ, 2016ರ ಹೊಸ ನೀತಿಯಂತೆ ಈ ಹಿಂದಿನ ಸಂಪ್ರದಾಯವನ್ನು ಕೈಬಿಡಲಾಗಿದೆ. 

ಈ ಬಾರಿಯ ಕ್ರಿಕೆಟ್‌ ವಿಶ್ವಕಪ್‌ ಇದೇ ಮೇ ಮತ್ತು ಜುಲೈನಲ್ಲಿ ಇಂಗ್ಲೆಂಡ್‌ ಮತ್ತು  ವೇಲ್ಸ್‌ನಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದ್ದು, ಜೂನ್‌ ಐದರಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !