ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಟುಂಬ ನಿಯಮ’ ಉಲ್ಲಂಘಿಸಿದ ಭಾರತೀಯ ಕ್ರಿಕೆಟಿಗ

Last Updated 20 ಜುಲೈ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಸಂದರ್ಭದಲ್ಲಿ ಭಾರತ ಕ್ರಿಕೆಟ್‌ ತಂಡದ ಪ್ರಮುಖ ಆಟಗಾರನೊಬ್ಬ, ಬಿಸಿಸಿಐನ ‘ಕುಟುಂಬ ನಿಯಮ’ ಉಲ್ಲಂಘಿಸಿರುವುದು ಬಯಲಿಗೆ ಬಂದಿದೆ.

ನಿಯಮದಂತೆ ಆಟಗಾರರಿಗೆ 15 ದಿನಗಳ ಮಟ್ಟಿಗೆ ಮಾತ್ರ ತಮ್ಮ ಪತ್ನಿಯರನ್ನು ಕರೆದೊಯ್ಯಲು ಅವಕಾಶವಿತ್ತು.

ಆದರೆ ಮೇಲೆ ತಿಳಿಸಿದ ಆಟಗಾರ ಪತ್ನಿಯನ್ನು ನಿಗದಿಗಿಂತ ಹೆಚ್ಚುವರಿ ಅವಧಿಗೆ ಉಳಿಸಿಕೊಳ್ಳಲು ಮನವಿ ಮಾಡಿದ್ದರು. ಆದರೆ ಈ ನಿಯಮ ರೂಪಿಸಿದ್ದ ಕ್ರಿಕೆಟ್‌ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಮೇ 3ರಂದು ಅವರ ಕೋರಿಕೆಯನ್ನು ತಳ್ಳಿಹಾಕಿತ್ತು.

ಆ ಆಟಗಾರ, ತಂಡದ ನಾಯಕ ಅಥವಾ ತರಬೇತುದಾರನ ಅನುಮತಿ ಪಡೆದುಕೊಳ್ಳದೇ ಪತ್ನಿಯ ಜೊತೆ ವಿಶ್ವಕಪ್‌ ಟೂರ್ನಿಯ ಪೂರ್ಣ ಅವಧಿಗೆ (ಏಳು ವಾರ) ಇಂಗ್ಲೆಂಡ್‌ನಲ್ಲೇ ಉಳಿದುಕೊಂಡಿದ್ದ ವಿಷಯ ಬೆಳಕಿಗೆ ಬಂದಿದೆ.

ಆಟಗಾರ ನಿಯಮ ಉಲ್ಲಂಘನೆ ಮಾಡಿದ್ದನ್ನು ಬಿಸಿಸಿಐ ಮೂಲವೊಂದು ಖಚಿತಪಡಿಸಿದೆ.

ಆಟಗಾರನನ್ನು ತಂಡದ ಆಡಳಿತಾತ್ಮಕ ಮ್ಯಾನೇಜರ್‌ ಸುನೀಲ್‌ ಸುಬ್ರಮಣ್ಯಂ ಏಕೆ ತಡೆದಿಲ್ಲ ಎಂಬ ಪ್ರಶ್ನೆ ಎದ್ದಿದೆ. ತಂಡದ ಮೇಲೆ ಕಣ್ಣಿಡುವುದು ಅವರ ಹೊಣೆಯಾಗಿತ್ತು.

ಸಿಒಎ ಈ ವಿಷಯದಲ್ಲಿ ಗಮನಹರಿಸಿ ವರದಿ ತರಿಸಿಕೊಳ್ಳುವ ವಿಶ್ವಾಸವಿದೆ ಎಂದು ಆ ಮೂಲ ತಿಳಿಸಿದೆ.

ಈ ಕುರಿತ ಪ್ರತಿಕ್ರಿಯೆಗೆ ಸುನೀಲ್‌ ಸುಬ್ರಮಣ್ಯಂ ಲಭ್ಯರಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT