ಬುಧವಾರ, 22 ಏಪ್ರಿಲ್ 2026
×
ADVERTISEMENT

ಕುಟುಂಬದೊಂದಿಗೆ ಟಿ20 ವಿಶ್ವಕಪ್‌ ಟ್ರೋಫಿ ಹಿಡಿದು ಸಂಭ್ರಮಿಸಿದ ತಾರಾ ಕ್ರಿಕೆಟಿಗರು

Published : 9 ಮಾರ್ಚ್ 2026, 12:30 IST
Last Updated : 9 ಮಾರ್ಚ್ 2026, 12:30 IST
ADVERTISEMENT
ಫಾಲೋ ಮಾಡಿ
Comments
ಭಾರತ ತಂಡದ ಆಲ್‌ ರೌಂಡರ್‌ ಆಟಗಾರ ಹಾರ್ದಿಕ್ ಪಾಂಡ್ಯ ಪಂದ್ಯವನ್ನು ಗೆದ್ದ ನಂತರ ಗೆಲುವಿನ ಸಂಭ್ರಮವನ್ನು ತಮ್ಮ ಗೆಳತಿ ಮಹಿಕಾ ಶರ್ಮಾ ಜತೆ ಆಚರಿಸಿದ್ದಾರೆ. ಇಬ್ಬರೂ ಮೈದಾನದಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಹಾರ್ದಿಕ್‌ ಪಾಂಡ್ಯ ಮಹಿಕಾ ಅವರ ಕೆನ್ನೆಗೆ ಮುತ್ತು ಕೊಟ್ಟಿದ್ದು ಎಲ್ಲರ ಗಮನ ಸೆಳೆದಿದೆ. ಮಹಿಕಾ ಶರ್ಮಾ ವೃತ್ತಿಯಲ್ಲಿ ಮಾಡೆಲ್ ಮತ್ತು ನಟಿಯಾಗಿದ್ದಾರೆ. ಇವರು ಫಿಟ್ನೆಸ್ ತಜ್ಞೆಯಾಗಿಯೂ ಕೆಲಸ ಮಾಡುತ್ತಾರೆ. 'ಪಿಎಂ ನರೇಂದ್ರ ಮೋದಿ' ಸೇರಿದಂತೆ ಇತರೆ ಚಿತ್ರಗಳಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

2026ರ ಟಿ20 ವಿಶ್ವಕಪ್ ಅಭಿಯಾನದಲ್ಲಿ ತಿಲಕ್‌ ವರ್ಮಾ ಬ್ಯಾಟಿಂಗ್‌ನಲ್ಲಿ ಉತ್ತಮ  ಪ್ರದರ್ಶನ ನೀಡಿದ್ದಾರೆ. ಫೈನಲ್ ಪಂದ್ಯದಲ್ಲಿ ಉತ್ತಮ ಫಿಲ್ಡಿಂಗ್‌ ಮೂಲಕ ತಂಡದ ಗೆಲುವಿಗೆ ನೆರವಾದರು. ಭಾರತ ಗೆದ್ದ ನಂತರ ತಿಲಕ್‌ ವರ್ಮಾ ತಮ್ಮ ಕುಟುಂಬದೊಂದಿಗೆ ವಿಶ್ವಕಪ್‌ನ ಗೆಲುವನ್ನು ಸಂಭ್ರಮಿಸಿದ್ದಾರೆ.

ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಸಂಜು ಸ್ಯಾಮ್ಸನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಈ ಆವೃತಿಯಲ್ಲಿ 321 ರನ್‌ ಕಲೆಹಾಕಿದ್ದಾರೆ. ಗೆಲುವಿನ ನಂತರ ಪತ್ನಿ ಚಾರುಲತಾ ರಮೇಶ್ ಅವರೊಂದಿಗೆ ಸಂಭ್ರಮವನ್ನು ಆಚರಿಸಿದ್ದಾರೆ. ಈ ಜೋಡಿ 2018ರಲ್ಲಿ ವಿವಾಹವಾದರು.

ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಬೃಹತ್ ಮೊತ್ತವನ್ನು ಕಲೆಹಾಕಲು ಸಹಕಾರಿಯಾದ ಇಶಾನ್‌ ಕಿಶನ್‌ ಗೆಲುವಿನ ನಂತರ ತಮ್ಮ ಗೆಳತಿ ಅದಿತಿ ಹುಂಡಿಯಾ ಅವರೊಂದಿಗೆ ಸಂಭ್ರಮಿಸಿದ್ದಾರೆ. ಭಾರತದ ಧ್ವಜ ಹಿಡಿದು ಇಬ್ಬರು ಪರಸ್ಪರ ಅಪ್ಪುಗೆ ನೀಡಿದ್ದಾರೆ. ಅದಿತಿ ಹುಂಡಿಯಾ ಉದ್ಯಮಿ ಹಾಗೂ ಫ್ಯಾಷನ್ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಲಲಿತ್ ಹುಂಡಿಯಾ ಮತ್ತು ಬಬಿತಾ ಹುಂಡಿಯಾ ಅವರ ಮಗಳಾದ ಅದಿತಿ 2017ರ 'ಫೆಮಿನಾ ಮಿಸ್ ಇಂಡಿಯಾ' ಸ್ಪರ್ಧೆಯ ಫೈನಲಿಸ್ಟ್‌ ಕೂಡ ಆಗಿದ್ದಾರೆ.

ಭಾರತ ತಂಡದ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ 2026 ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡದ ಪ್ರಮುಖ ವಿಕೆಟ್‌ ಪಡೆದು ಮಿಂಚಿದ ಜಸ್‌ಪ್ರೀತ್ ಬೂಮ್ರಾ, ‌ಗೆಲುವಿನ ಸಂಭ್ರಮವನ್ನು  ಪತ್ನಿ ಸಂಜನಾ ಗಣೇಶನ್ ಹಾಗೂ ತಾಯಿ ದಲ್ಜಿತ್ ಬುಮ್ರಾ ಅವರೊಂದಿಗೆ ಆಚರಿಸಿದ್ದಾರೆ.

ಭಾರತದ ಟಿ20 ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ತಮ್ಮ ನಾಯಕತ್ವದಲ್ಲಿ ಮೊದಲ ಟಿ20 ಟ್ರೋಫಿಯನ್ನು ಗೆದ್ದಿದ್ದಾರೆ. ಗೆಲುವಿನ ನಂತರ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ತಮ್ಮ ಪತ್ನಿ ದೇವಿಶಾ ಶೆಟ್ಟಿ ಹಾಗೂ ಕುಟುಂಬಸ್ಥರೊಂದಿಗೆ ಗೆಲುವಿನ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ. 2017ರಲ್ಲಿ ದೇವಿಶಾ ಶೆಟ್ಟಿ ಅವರನ್ನು ಸೂರ್ಯಕುಮಾರ್ ಯಾದವ್ ವಿವಾಹವಾದರು. ದೇವಿಶಾ ಶೆಟ್ಟಿ ಶಾಸ್ತ್ರೀಯ ಸಂಗೀತದ ನೃತ್ಯಗಾರ್ತಿಯಾಗಿದ್ದಾರೆ.

2026ರ ಟಿ20 ವಿಶ್ವಕಪ್‌ನಲ್ಲಿ ಆಲ್ ರೌಂಡರ್‌ ಆಗಿ ತಂಡದ ಗೆಲುವಿಗೆ ಕಾರಣರಾದ ಅಕ್ಷರ ಪಟೇಲ್‌ ವಿಶ್ವಕಪ್‌ ಗೆಲುವನ್ನು ತಮ್ಮ ಪತ್ನಿ ಮೇಹಾ ಪಟೇಲ್ ಮತ್ತು ಅವರ ಮಗುವಿನೊಂದಿಗೆ ಟ್ರೋಫಿ ಹಿಡಿದು ಸಂಭ್ರಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT