ಸೋಮವಾರ, ಜನವರಿ 18, 2021
27 °C

ವರ್ಣ ತಾರತಮ್ಯ ವಿರೋಧಿ ಅಭಿಯಾನಕ್ಕೆ ಕ್ರಿಕೆಟಿಗರ ಬೆಂಬಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಿಡ್ನಿ:  ವರ್ಣ ತಾರತಮ್ಯ ವನ್ನು ವಿರೋಧಿ ಅಭಿಯಾನಕ್ಕೆ  ಆಸ್ಟ್ರೇಲಿಯಾ ಕ್ರಿಕೆಟಿಗರು  ವ್ಯಕ್ತಪಡಿಸಿದರು.  ಈ ಸಂದರ್ಭದಲ್ಲಿ ಭಾರತ ತಂಡವೂ ಆಸ್ಟ್ರೇಲಿಯಾ ಬಳಗದೊಂದಿಗೆ ಕೈಜೋಡಿಸಿತು.

ಶುಕ್ರವಾರ ಇಲ್ಲಿ ಉಭಯ ತಂಡಗಳ ನಡುವಣ ಆರಂಭವಾದ ಮೊದಲ ಏಕದಿನ ಪಂದ್ಯದಲ್ಲಿ ಈ ಅಭಿಯಾನ ಆರಂಭವಾಯಿತು. ಆಸ್ಟ್ರೇಲಿಯಾದ ಸ್ಥಳೀಯ ಮೂಲನಿವಾಸಿಗಳಿಗೆ ಬೆಂಬಲ ಸೂಚಿಸುವ ಅಭಿಯಾನ ಇದಾಗಿದೆ.

’ನಮ್ಮ ತಂಡವು ಜನಾಂಗೀಯ ತಾರತಮ್ಯವನ್ನು ವಿರೋಧಿಸುತ್ತದೆ. ಅದಕ್ಕಾಗಿ ವಿನೂತನ ರೀತಿಯಲ್ಲಿ ಜಾಗೃತಿ ಅಭಿಯಾನ ನಡೆಸುತ್ತೇವೆ‘ ಎಂದು ಈಚೆಗೆ ಆಸ್ಟ್ರೇಲಿಯಾದ ಬೌಲರ್ ಪ್ಯಾಟ್ ಕಮಿನ್ಸ್ ಹೇಳಿದ್ದರು.

ಸಿಡ್ನಿ ಪ್ರದೇಶದ ಮೂಲನಿವಾಸಿಗಳ ಸಂಸ್ಕೃತಿಯನ್ನು ಬಿಂಬಿಸುವ ಬರಿಗಾಲು ವೃತ್ತವನ್ನು ಪ್ರದರ್ಶಿಸುವ ಮೂಲಕ ಆಸ್ಟ್ರೇಲಿಯಾ ಕ್ರಿಕೆಟಿಗರು ಗೌರವ ಸೂಚಿಸಿದರು.

ಇತ್ತೀಚೆಗೆ ನಿಧನರಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಮತ್ತು ಫಿಲಿಪ್ ಹ್ಯೂಸ್ ಅವರ ಗೌರವಾರ್ಥ ಉಭಯ ತಂಡಗಳ ಆಟಗಾರರು ತಮ್ಮ ತೋಳುಗಳಿಗೆ ಕಪ್ಪು ಪಟ್ಟಿ ಧರಿಸಿಕೊಂಡು ಆಡಿದರು. 

ಡೀನ್ ಜೋನ್ಸ್‌ ಈಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕಾಮೆಂಟ್ರಿ ನೀಡಲು ಮುಂಬೈನಲ್ಲಿದ್ದಾಗ ಹೃದಯಸ್ತಂಭನದಿಂದ ನಿಧನರಾಗಿದ್ದರು. 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು