ಮುಲ್ಲನಪುರ: ಒಂದು ಡಜನ್ ಸಿಕ್ಸರ್ ಸಿಡಿಸಿದ ವೈಭವ್ ಸೂರ್ಯವಂಶಿ ಕೇವಲ ಮೂರು ರನ್ ಅಂತರದಲ್ಲಿ ಶತಕ ಕೈತಪ್ಪಿಸಿಕೊಂಡರು. ಆದರೆ ರಾಜಸ್ಥಾನ ರಾಯಲ್ಸ್ ತಂಡವು ಕ್ವಾಲಿಫಯರ್ –2 ಪ್ರವೇಶಿಸಲು ಅವರ ಆಟ ನೆರವಾಯಿತು.

ಮಹಾರಾಜ ಯಾದವೀಂದ್ರಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣ ದಲ್ಲಿ ಬುಧವಾರ ನಡೆದ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನಾಯಕತ್ವದ ಸನ್ರೈಸರ್ಸ್ ಹೈದರಾಬಾದ್ ಎದುರು ರಾಜಸ್ಥಾನ ತಂಡವು 47 ರನ್ಗಳಿಂದ ಜಯಿಸಿತು. ಸನ್ರೈಸರ್ಸ್ ಅಭಿಯಾನಕ್ಕೆ ತೆರೆಬಿತ್ತು.

ರಿಯಾನ್ ಪರಾಗ್ ಪಡೆ, ಇದೇ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯುವ ಎರಡನೇ ಕ್ವಾಲಿಫಯರ್ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ.

ಟಾಸ್ ಗೆದ್ದ ಸನ್ರೈಸರ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವೈಭವ್ ಕೇವಲ 29 ಎಸೆತಗಳಲ್ಲಿ 97 ರನ್ಗಳನ್ನು ಸೂರೆ ಮಾಡಿದರು. ಅದರಲ್ಲಿ ಚೆಂಡು ಐದು ಸಲ ಬೌಂಡರಿಗೆರೆಗೆ ಮುತ್ತಿಕ್ಕಿದರೆ, 12 ಸಲ ಪ್ರೇಕ್ಷಕರ ಗ್ಯಾಲರಿಗೆ ಹೋಗಿ ಬಿತ್ತು. ಧ್ರುವ ಜುರೇಲ್ (50; 21ಎ, 4x5, 6x3) ಬಿರುಸಿನ ಅರ್ಧಶತಕ ಗಳಿಸಿದರು. ಇದರಿಂದಾಗಿ ರಾಯಲ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 243 ರನ್ ಗಳಿಸಿತು. ಅದಕ್ಕುತ್ತರವಾಗಿ ಸನ್ರೈಸರ್ಸ್ ತಂಡವು 19.2 ಓವರ್ಗಳಲ್ಲಿ 196 ರನ್ಗಳಿಗೆ ಹೋರಾಟ ಮುಗಿಸಿತು.

ಗುರಿ ಬೆನ್ನಟ್ಟಿದ ಸನ್ರೈಸರ್ಸ್ ತಂಡಕ್ಕೆ ರಾಯಲ್ಸ್ ವೇಗಿ ಜೋಫ್ರಾ ಆರ್ಚರ್ (58ಕ್ಕೆ3) ಅಡ್ಡಿಯಾದರು. ಅಭಿಷೇಕ್ ಶರ್ಮಾ ಅವರನ್ನು ಖಾತೆ ತೆರೆಯಲು ಜೋಫ್ರಾ ಅವಕಾಶ ಕೊಡಲಿಲ್ಲ. ಟ್ರಾವಿಸ್ ಹೆಡ್ (17 ರನ್) ಮತ್ತು ಇಶಾನ್ ಕಿಶನ್ (33 ರನ್) ಅವರಿಬ್ಬರಿಗೂ ಡಗ್ಔಟ್ ದಾರಿ ತೋರಿಸಿದರು.

ಕೊನೆಯ ಹಂತದಲ್ಲಿ ನಿತೀಶ್ ಕುಮಾರ್ ರೆಡ್ಡಿ (38; 20ಎ) ಮತ್ತು ಸಲೀಲ್ ಅರೋರಾ (35; 21ಎ) ತೋರಿದ ಹೋರಾಟ ಗೆಲುವಿಗೆ ಸಾಕಾಗಲಿಲ್ಲ. ವೇಗಿಗಳಾದ ನಾಂದ್ರೆ ಬರ್ಗರ್, ಸುಶಾಂತ್ ಮಿಶ್ರಾ ಹಾಗೂ ಸ್ಪಿನ್ನರ್ ರವೀಂದ್ರ ಜಡೇಜ ತಲಾ ಎರಡು ವಿಕೆಟ್ ಗಳಿಸಿ, ಸನ್ರೈಸರ್ಸ್ ತಂಡದ ಪತನಕ್ಕೆ ಕಾರಣರಾದರು.

ಕಮಿನ್ಸ್ಗೆ ವೈಭವ್ ಬಿಸಿ: ಪ್ಯಾಟ್ ಕಮಿನ್ಸ್ ಅವರಂತಹ ನುರಿತ ವೇಗಿಗೂ ಸಿಕ್ಸರ್ಗಳನ್ನು ಸಿಡಿಸಿದ 15 ವರ್ಷ ವಯಸ್ಸಿನ ವೈಭವ್ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಇನ್ನೊಂದು ಬದಿಯಲ್ಲಿದ್ದ ಯಶಸ್ವಿ ಜೈಸ್ವಾಲ್ (29; 29ಎ, 4x4) ಯಾವುದೇ ಧಾವಂತ ಮಾಡದೇ ವೈಭವ್ ಆಟಕ್ಕೆ ಬೆಂಬಲವಾಗಿ ನಿಂತರು.

ಕಮಿನ್ಸ್ ಅವರ ಬೌಲಿಂಗ್ನಲ್ಲಿ ವೈಭವ್ ನಾಲ್ಕು ಸಿಕ್ಸರ್ ಹೊಡೆದರು. ಎಂಟನೇ ಓವರ್ನ ಕೊನೆಯ ಎಸೆತದಲ್ಲಿ ಪ್ರಫುಲ್ ಹಿಂಗೆ ಅವರ ಎಸೆತವನ್ನು ಅಪ್ಪರ್ ಕಟ್ ಮಾಡಿದರು. ಥರ್ಡ್ಮ್ಯಾನ್
ಬೌಂಡರಿಯಲ್ಲಿದ್ದ ಆರ್. ಸ್ಮರಣ್ ಅವರು ಜಿಗಿದು ಕ್ಯಾಚ್ ಪಡೆದರು. ವೈಭವ್ ತೀವ್ರ ಬೇಸರದಿಂದ ಡಗ್ಔಟ್ನತ್ತ ಹೆಜ್ಜೆ ಹಾಕಿದರು. ಎದುರಾಳಿ ತಂಡದ ಫೀಲ್ಡರ್ಗಳೂ ವೈಭವ್ ಬೆನ್ನು ತಟ್ಟಿ ಅಭಿನಂದಿಸಿದರು. ಈ ಓವರ್ನ ನಾಲ್ಕು ಮತ್ತು ಐದನೇ ಎಸೆತಗಳಲ್ಲಿ ಸತತ ಎರಡು ಸಿಕ್ಸರ್ ಸಿಡಿಸಿದ್ದರು. ಕ್ರಿಸ್ ಗೇಲ್ ಅವರು ಈ ಹಿಂದೆ 30 ಎಸೆತಗಳಲ್ಲಿ ಶತಕ ಹೊಡೆದಿದ್ದರು. ಆ ದಾಖಲೆ ಮುರಿಯುವ ಅವಕಾಶ ವೈಭವ್ ಕೈತಪ್ಪಿತು. ಆದರೆ ಗೇಲ್ ಅವರು ಒಂದೇ ಟೂರ್ನಿಯಲ್ಲಿ ಹೊಡೆದ 59 ಸಿಕ್ಸರ್ಗಳ ದಾಖಲೆಯನ್ನು ಬಿಹಾರಿ ಹುಡುಗ ನುಚ್ಚುನೂರು ಮಾಡಿದರು.

ಬ್ಯಾಟರ್ಗಳ ಸ್ವರ್ಗದಂತಿದ್ದ ಪಿಚ್ನಲ್ಲಿ ಮೊದಲ ವಿಕೆಟ್ ಜತೆಯಾಟದಲ್ಲಿ 8 ಓವರ್ಗಳಲ್ಲಿ 125 ರನ್ ಸೇರಿದವು.

ಕ್ರೀಸ್ಗೆ ಬಂದ ಜುರೇಲ್ ಅವರೂ ಚುರುಕಾಗಿ ಬ್ಯಾಟಿಂಗ್ ಮಾಡಿದರು. ಅವರ ಆಟದ ವೈಖರಿ ನೋಡಿದರೆ ತಂಡವು 280 ರನ್ ಗಳಿಸುವ ಭರವಸೆ ಮೂಡಿತ್ತು. ಆದರೆ ಯಶಸ್ವಿ ಜೈಸ್ವಾಲ್ ವಿಕೆಟ್ ಗಳಿಸಿದ ಶಿವಾಂಗ್ ಕುಮಾರ್ ಮಿಂಚಿದರು. ಇನ್ನೊಂದೆಡೆ ರಿಯಾನ್ ಪರಾಗ್ ಅವರು ಅಟಕ್ಕೆ ಕುದುರುವ ಹೊತ್ತಿನಲ್ಲಿಯೇ ಪ್ರಫುಲ್ ಅವರು ವಿಕೆಟ್ ಗಳಿಸಿದರು. ಅವರೇ ಜುರೇಲ್ಗೂ ಪೆವಿಲಿಯನ್ ದಾರಿ ತೋರಿಸಿದರು.

ನಂತರ ಬಂದ ಬ್ಯಾಟರ್ಗಳು ದೊಡ್ಡ ಮೊತ್ತ ಗಳಿಸದಂತೆ ಬೌಲರ್ಗಳು ಬಿಗಿ ಹಿಡಿತ ಸಾಧಿಸಿದರು. ಇದರಿಂದಾಗಿ ಕೊನೆಯ ಹಂತದ ಓವರ್ಗಳಲ್ಲಿ ಹೆಚ್ಚು ರನ್ಗಳು ಸೇರಲಿಲ್ಲ.

ರಾಜಸ್ಥಾನ ರಾಯಲ್ಸ್: 8 ವಿಕೆಟ್ಗೆ 243 (20 ಓವರುಗಳಲ್ಲಿ)

ಜೈಸ್ವಾಲ್ ಸಿ ಅಭಿಷೇಕ್ ಬಿ ಶಿವಾಂಗ್ 29 (29ಎ, 4x4)

ಸೂರ್ಯವಂಶಿ ಸಿ ಸ್ಮರಣ್ ಬಿ ಪ್ರಫುಲ್ 97 (29ಎ, 4x5, 6x12)

ಜುರೇಲ್ ಸಿ ನಿತೀಶ್ ರೆಡ್ಡಿ ಬಿ ಪ್ರಫುಲ್ 50 (21, 4x5, 6x3)

ಪರಾಗ್ ಸಿ ಕ್ಲಾಸೆನ್ ಬಿ ಪ್ರಫುಲ್ 26 (12ಎ, 4x2, 6x2)

ಡೊನೊವನ್ ರನ್ಔಟ್ (ಶಿವಾಂಗ್/ ಇಶಾನ್) 12 (9ಎ, 4x1)

ಶನಕ ಸಿ ಅಭಿಷೇಕ್ ಬಿ ಮಾಲಿಂಗ 5 (3ಎ, 4x1)

ಜಡೇಜ ಔಟಾಗದೇ 12 (9ಎ, 4x1)

ಆರ್ಚರ್ ಸಿ ಅಭಿಷೇಕ್ 4 (5ಎ,4x1)

ಬರ್ಗರ್ ರನ್ಔಟ್ 1 (1ಎ)

ಸುಶಾಂತ್ ಔಟಾಗದೇ 1 (3ಎ)

ಇತರೆ 6 (ಬೈ 2, ನೋಬಾಲ್ 1, ವೈಡ್ 3)

ವಿಕೆಟ್ ಪತನ: 1–125 (ವೈಭವ್ ಸೂರ್ಯವಂಶಿ, 7.6), 2–137 (ಯಶಸ್ವಿ ಜೈಸ್ವಾಲ್, 10.2), 3–192 (ಧ್ರುವ್ ಜುರೇಲ್, 13.5), 4–207 (ರಿಯಾನ್ ಪರಾಗ್, 15.2), 5–214 (ದಸುನ್ ಶನಕ, 16.1), 6–234 (ಡೊನೊವನ್ ಫೆರೀರಾ, 18.1), 7–238 (ಜೋಫ್ರಾ ಆರ್ಚರ್, 18.6), 8–240 (ನಾಂದ್ರೆ ಬರ್ಗರ್, 19.2).

ಬೌಲಿಂಗ್: ಪ್ಯಾಟ್ ಕಮಿನ್ಸ್ 4–0–64–0; ಇಶಾನ್ ಮಾಲಿಂಗ 4–0–40–0; ಸಾಕಿಬ್ ಹುಸೇನ್ 4–0–52–0; ಪ್ರಫುಲ್ ಹಿಂಗೆ 4–0–54–3; ಶಿವಾಂಗ್ ಕುಮಾರ್ 2–0–19–1; ನಿತೀಶ್ ಕುಮಾರ್ ರೆಡ್ಡಿ 2–0–12–1

ಸನ್ರೈಸರ್ಸ್ ಹೈದರಾಬಾದ್: 19.2 ಓವರ್ಗಳಲ್ಲಿ 196

ಅಭಿಷೇಕ್ ಸಿ ಜುರೇಲ್ ಬಿ ಆರ್ಚರ್ 0 (2ಎ)

ಹೆಡ್ ಬಿ ಆರ್ಚರ್ 17 (8ಎ, 4x2, 6x1)

ಇಶಾನ್ ಸಿ ಡೊನಾವನ್ ಬಿ ಆರ್ಚರ್ 33 (11ಎ, 4x3, 6x3)

ಸ್ಮರಣ್ ಸಿ ಆರ್ಚರ್ ಬಿ ಬರ್ಗರ್ 1 (4ಎ)

ಕ್ಲಾಸೆನ್ ಎಲ್ಬಿಡಬ್ಲ್ಯು ಬಿ ಯಶರಾಜ್ 18 (10ಎ, 4x2, 6x1)

ನಿತೀಶ್ ರೆಡ್ಡಿ ಸಿ ಶನಕ ಬಿ ಜಡೇಜ 38 (20ಎ, 4x4, 6x2)

ಸಲೀಲ್ ಸಿ ಬರ್ಗರ್ ಬಿ ಜಡೇಜ 35 (21ಎ, 4x2, 6x2)

ಕಮಿನ್ಸ್ ಸಿ ಆರ್ಚರ್ ಬಿ ಮಿಶ್ರಾ 1 (2ಎ)

ಶಿವಾಂಗ್ ಸಿ ವೈಭವ್ ಬಿ ಸುಶಾಂತ್ 27 (24ಎ, 4x3)

ಮಾಲಿಂಗ ಸಿ ಆರ್ಚರ್ ಬಿ ಬರ್ಗರ್ 5 (8ಎ)

ಸಾಕಿಬ್ ಹುಸೇನ್ ಔಟಾಗದೇ 5 (7ಎ)

ಇತರೆ: 16 (ನೋಬಾಲ್1, ವೈಡ್ 15)

ವಿಕೆಟ್ ಪತನ: 1–0 (ಅಭಿಷೇಕ್ ಶರ್ಮಾ, 0.2), 2–51 (ಇಶಾನ್ ಕಿಶನ್, 2.5), 3–52 (ರವಿಚಂದ್ರನ್ ಸ್ಮರಣ್, 3.3), 4–57 (ಟ್ರಾವಿಸ್ ಹೆಡ್, 4.4), 5–81 (ಹೆನ್ರಿಚ್ ಕ್ಲಾಸೆನ್, 6.5), 6–137 (ನಿತೀಶ್ ಕುಮಾರ್ ರೆಡ್ಡಿ, 10.5), 7–139 (ಪ್ಯಾಟ್ ಕಮಿನ್ಸ್, 11.1), 8–163 (ಸಲೀಲ್ ಅರೋರಾ, 14.4), 9–187 (ಇಶಾನ್ ಮಾಲಿಂಗ, 17.3), 10–196 (ಶಿವಾಂಗ್ ಕುಮಾರ್, 19.2)

ಬೌಲಿಂಗ್: ಜೋಫ್ರಾ ಆರ್ಚರ್ 4–0–58–3; ನಾಂಡ್ರೆ ಬರ್ಗರ್ 3–0–26–2; ಬ್ರಿಜೇಶ್ ಶರ್ಮಾ 3–0–31–0; ಯಶರಾಜ್ ಪೂಂಜಾ 4–0–39–1; ಸುಶಾಂತ್ ಮಿಶ್ರಾ 2.2–0–21–2; ರವೀಂದ್ರ ಜಡೇಜ 3–0–21–2

ಪಂದ್ಯದ ಆಟಗಾರ: ವೈಭವ್ ಸೂರ್ಯವಂಶಿ

ಆರೆಂಜ್ ಕ್ಯಾಪ್: ವೈಭವ್ ಸೂರ್ಯವಂಶಿ (ಆರ್ ಆರ್, 680 ರನ್)

ಪರ್ಪಲ್ ಕ್ಯಾಪ್: ಭುವನೇಶ್ವರ್ ಕುಮಾರ್ (ಆರ್ಸಿಬಿ, 26 ವಿಕೆಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.