ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಟಿಪಿ: 65 ಪಂದ್ಯ ಆಡಲಿರುವ ಭಾರತ ಮಹಿಳಾ ಕ್ರಿಕೆಟ್‌ ತಂಡ

Last Updated 16 ಆಗಸ್ಟ್ 2022, 21:15 IST
ಅಕ್ಷರ ಗಾತ್ರ

ದುಬೈ: ಭಾರತ ಮಹಿಳಾ ಕ್ರಿಕೆಟ್‌ ತಂಡವು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಸಿದ್ಧಪಡಿಸಿರುವ ಫ್ಯೂಚರ್ ಟೂರ್ಸ್ ಆ್ಯಂಡ್ ಪ್ರೊಗ್ರಾಮ್ಸ್ (ಎಫ್‌ಟಿಪಿ) ಪ್ರಕಾರ ಮೂರು ವರ್ಷಗಳ ಅವಧಿಯಲ್ಲಿ 65 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ.

ಇದೇ ಮೊದಲ ಬಾರಿ ಪರಿಚಯಿಸಿರುವ ಎಫ್‌ಟಿಪಿ ಮೇ 2022ರಿಂದ ಏಪ್ರಿಲ್‌ 2025ರ ಅವಧಿಯನ್ನು ಹೊಂದಿದೆ. ಐಸಿಸಿ ಮಂಗಳವಾರ ಈ ಕುರಿತು ಪ್ರಕಟಿಸಿದ್ದು, ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 301 (ಏಳು ಟೆಸ್ಟ್, 135 ಏಕದಿನ ಮತ್ತು 159 ಟ್ವೆಂಟಿ–20) ಪಂದ್ಯಗಳು ಇರಲಿವೆ.

ಈ ಅವಧಿಯಲ್ಲಿ ಭಾರತ ಎರಡು ಟೆಸ್ಟ್ (ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ಎದುರು), 27 ಏಕದಿನ ಮತ್ತು 36 ಟಿ20 ಪಂದ್ಯಗಳನ್ನು ಆಡಲಿದೆ.

ಈ ವರ್ಷದ ಮೇನಿಂದ ಎಫ್‌ಟಿಪಿ ಅವಧಿ ಆರಂಭವಾದಾಗಿನಿಂದ ಇದುವರೆಗೆ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ ಶ್ರೀಲಂಕಾ ಎದುರು ತಲಾ ಮೂರು ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT