ಭಾನುವಾರ, ಸೆಪ್ಟೆಂಬರ್ 26, 2021
25 °C

ಭಾರತದ ವಿಶ್ವದರ್ಜೆ ಬ್ಯಾಟಿಂಗ್: ವುಡ್ ಶ್ಲಾಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತದ ಬ್ಯಾಟಿಂಗ್ ಕ್ರಮಾಂಕವು ವಿಶ್ವದರ್ಜೆಯದ್ದಾಗಿದೆ. ರೋಹಿತ್ ಶರ್ಮಾ ಅವರಿಗೆ ಬೌಲಿಂಗ್ ಮಾಡುವುದು ಸವಾಲಿನ ಕೆಲಸ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಧ್ಯಮವೇಗಿ ಮಾರ್ಕ್ ವುಡ್ ಹೇಳಿದ್ದಾರೆ.

ಬುಧವಾರ ವರ್ಚುವಲ್ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ಭಾರತದ ಪ್ರತಿಯೊಬ್ಬ ಬ್ಯಾಟ್ಸ್‌ಮನ್ ಕ್ರೀಸ್‌ಗೆ ಬಂದಾಗಲೂ ನಮ್ಮ ಮನದಲ್ಲಿ ಆ ಆಟಗಾರ ಶ್ರೇಷ್ಠ ಎಂಬ ಭಾವನೆ ಇರುತ್ತದೆ. ಅದರಲ್ಲೂ ರೋಹಿತ್ ಎದುರು ಜಗತ್ತಿನಯಾವುದೇ ವಾತಾವರಣದಲ್ಲಿ ಬೌಲಿಂಗ್ ಮಾಡುವುದು ಕಷ್ಟವೇ. ಅಷ್ಟು ಚುರುಕಾಗಿ ಚೆಂಡಿನ ಗತಿ ಅರಿತು ಪ್ರತಿಕ್ರಿಯಿಸುತ್ತಾರೆ’ ಎಂದರು.

‘ಕೆ.ಎಲ್. ರಾಹುಲ್ ಆಟದ ಶೈಲಿಗೆ ನಾನು ಮಾರುಹೋಗಿದ್ದೇನೆ. ಆಫ್ ಸ್ಟಂಪ್ ಆಚೆಯ ಎಸೆತಗಳನ್ನು ಬಿಟ್ಟ ರೀತಿ ಮತ್ತು ಕೆಲವು ಉತ್ತಮ ಹೊಡೆತಗಳು ಸುಂದರವಾಗಿದ್ದವು. ಪೂಜಾರ, ವಿರಾಟ್ ಅವರಂತೂ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು. ಅವರಿಗೆ ಬೌಲಿಂಗ್ ಮಾಡುವುದು ಕಠಿಣ ಸವಾಲು‘ ಎಂದರು.

ಶುಕ್ರವಾರದಿಂದ ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗಲಿರುವ ಕೊನೆಯ ಪಂದ್ಯವು ತಮ್ಮ ತಂಡಕ್ಕೆ ಮಹತ್ವದ್ದು. ಸರಣಿ ಸಮಗೊಳಿಸಿಕೊಳ್ಳುವುದಾಗಿ ವುಡ್ಸ್‌ ವಿಶ್ವಾಸ ವ್ಯಕ್ತಪಡಿಸಿದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು