ವಿಶ್ವಕಪ್‌ಗೆ ಟೀಂ ಇಂಡಿಯಾ ಪ್ರಕಟ: ಕನ್ನಡಿಗ ರಾಹುಲ್‌ಗೆ ಸ್ಥಾನ

ಶುಕ್ರವಾರ, ಏಪ್ರಿಲ್ 19, 2019
23 °C

ವಿಶ್ವಕಪ್‌ಗೆ ಟೀಂ ಇಂಡಿಯಾ ಪ್ರಕಟ: ಕನ್ನಡಿಗ ರಾಹುಲ್‌ಗೆ ಸ್ಥಾನ

Published:
Updated:

ಮುಂಬೈ: ಇಂಗ್ಲೆಂಡ್‌ನಲ್ಲಿ ಮೇ 30ರಿಂದ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ಕ್ರಿಕೆಟ್ ತಂಡವನ್ನು ಬಿಸಿಸಿಐ ಸೋಮವಾರ ಆಯ್ಕೆ ಮಾಡಿದೆ. ಟೂರ್ನಿಯಲ್ಲಿ ಟೀಂ ಇಂಡಿಯಾವನ್ನು ವಿರಾಟ್‌ ಕೊಹ್ಲಿ ಮುನ್ನಡೆಸಲಿದ್ದು, ಕನ್ನಡಿಗ ಕೆ.ಎಲ್‌ ರಾಹುಲ್‌ಗೆ ಅವಕಾಶ ಸಿಕ್ಕಿದೆ. 

ತಂಡ ಹೀಗಿದೆ: 

ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪ ನಾಯಕ), ಶಿಖರ್‌ ಧವನ್‌, ಕೆ.ಎಲ್‌ ರಾಹುಲ್‌, ವಿಜಯ್‌ ಶಂಕರ್‌, ಮಹೇಂದ್ರ ಸಿಂಗ್‌ ಧೋನಿ (ವಿಕೆಟ್‌ ಕೀಪರ್‌), ಕೇದಾರ್‌ ಜಾದವ್‌, ದಿನೇಶ್‌ ಕಾರ್ತಿಕ್‌, ಯಜುವೇಂದ್ರ ಚಹಾಲ್‌, ಕುಲದೀಪ್‌ ಯಾದವ್‌, ಭುವನೇಶ್ವರ್‌ ಕುಮಾರ್‌, ಜಸ್ಪ್ರಿತ್‌ ಭೂಮ್ರಾ, ಹರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮದ್‌ ಶಮಿ.

ಯುವ ಆಟಗಾರ ರಿಷಭ್‌ ಪಂತ್‌ ಅವರು ಈ ಬಾರಿಯ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸವಿತ್ತು. ಆದರೆ, ಆ ನಿರೀಕ್ಷೆ ಹುಸಿಯಾಗಿದೆ. ಆದರೆ, ದಿನೇಶ್‌ ಕಾರ್ತಿಕ್‌ ಅವರು ಎಲ್ಲರ ನಿರೀಕ್ಷೆಯನ್ನೂ ಮೀರಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 

ಇನ್ನು ವಿಶ್ವಕಪ್‌ ತಂಡದ ಮೂಲಕ ಟೀಂ ಇಂಡಿಯಾಕ್ಕೆ ಕಮ್‌ ಬ್ಯಾಕ್‌ ಮಾಡಲು ಕಾಯುತ್ತಿದ್ದ ಯುವರಾಜ್‌ ಸಿಂಗ್‌ ಅವರ ಆಸೆಯೂ ಈಡೇರಿಲ್ಲ. 

 

#TeamIndia for @ICC #CWC19 💪💪#MenInBlue 💙 pic.twitter.com/rsz44vHpge

ಇನ್ನಷ್ಟು:

ಇಂಗ್ಲೆಂಡ್‌ನಲ್ಲಿ ಮತ್ತೆ ಕ್ರಿಕೆಟ್‌ ಸಂಭ್ರಮ

ಕ್ರಿಕೆಟ್ ಜನಕರ ನಾಡಲ್ಲಿ ಮೊದಲ ಹೆಜ್ಜೆ

ಬಾಗಿಲಲ್ಲಿ ವಿಶ್ವಕ‍‍‍‍ಪ್; ವರಾಂಡದಲ್ಲಿ ಐಪಿಎಲ್

ವಿಶ್ವಕಪ್ ಹೆಜ್ಜೆಗುರುತು

ಔಟಾಗಲು ಹೊಸ ಹಾದಿ ಹುಡುಕುವ ರಾಹುಲ್!

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !