ಸಿಡ್ನಿ ಟೆಸ್ಟ್‌ಗೆ ಮಳೆಯ ಅಡ್ಡಿ: ಶುರುವಾಗಲಿಲ್ಲ ನಾಲ್ಕನೇ ದಿನದ ಆಟ

7

ಸಿಡ್ನಿ ಟೆಸ್ಟ್‌ಗೆ ಮಳೆಯ ಅಡ್ಡಿ: ಶುರುವಾಗಲಿಲ್ಲ ನಾಲ್ಕನೇ ದಿನದ ಆಟ

Published:
Updated:

ಸಿಡ್ನಿ: ಅಕಾಲಿಕ ಮಳೆ ಮತ್ತು ಕ್ಷೀಣ ಬೆಳಕಿನ ಕಾರಣ ಭಾರತ–ಆಸ್ಟ್ರೇಲಿಯಾ ಟೆಸ್ಟ್‌ನ ನಾಲ್ಕನೇ ದಿನದಾಟ ಆರಂಭವಾಗಲಿಲ್ಲ.

ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಿಗದಿಯಂತೆ ಸ್ಥಳೀಯ ಕಾಲಮಾನ ಬೆಳಿಗ್ಗೆ 10ಕ್ಕೆ ಪಂದ್ಯ ಆರಂಭವಾಗಬೇಕಿತ್ತು. ಆದರೆ ರಾತ್ರಿಯಿಡೀ ಸುರಿದ ಭಾರೀಮಳೆಯಿಂದಾಗಿ ಮೈದಾನದಲ್ಲಿ ತೇವಾಂಶ ಹೆಚ್ಚಾಗಿತ್ತು. ಮೋಡ ಮುಸುಕಿದ ವಾತಾವರಣದಿಂದಾಗಿ ಬೆಳಕು ಸಾಕಷ್ಟು ಇರಲಿಲ್ಲ.

ಸಮಯ ಸರಿದಂತೆ ಬೆಳಕಿನ ಪ್ರಮಾಣ ಹೆಚ್ಚಾಯಿತು. ಸ್ಥಳೀಯ ಕಾಲಮಾನ 11 ಗಂಟೆಗೆ ಪಂದ್ಯ ಆರಂಭಿಸಲು ಅಂಪೈರ್‌ಗಳು ನಿಶ್ಚಯಿಸಿದರು. ಆದರೆ ಮಳೆ ಅವರ ನಿರ್ಧಾರವನ್ನು ಕಾರ್ಯರೂಪಕ್ಕೆ ಬರಲು ಅವಕಾಶ ಕೊಡಲಿಲ್ಲ. ಊಟದ ವಿರಾಮದವರೆಗೆ ಹವಾಮಾನ ಸುಧಾರಿಸುವ ಸಾಧ್ಯತೆ ಇಲ್ಲ.

ಕ್ಷೀಣ ಬೆಳಕಿನ ಕಾರಣದಿಂದ ಮೂರನೇ ದಿನದ ಆಟ ಕೊನೆಗೊಳ್ಳುವ ವೇಳೆಗೆ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿತ್ತು. 

ಮೊದಲ ಮತ್ತು ಎರಡನೇ ದಿನದಲ್ಲಿ ಚೇತನೇಶ್ವರ್ ಪೂಜಾರ (193) ಮತ್ತು ರಿಷಭ್ ಪಂತ್ (ಔಟಾಗದೆ 159 ) ನೆರವಿನಿಂದ ಭಾರತ 7 ವಿಕೆಟ್ ನಷ್ಟಕ್ಕೆ 627 ರನ್ ಗಳಿಸಿ ಡಿಕ್ಲೇರ್ಡ್ ಮಾಡಿಕೊಂಡಿತ್ತು.

ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 31 ರನ್, ಮೆಲ್ಟರ್ನ್‌ನಲ್ಲಿ ನಡೆದ 3ನೇ ಟೆಸ್ಟ್‌ನಲ್ಲಿ 137 ರನ್‌ಗಳ ಅಂತರದಿಂದ ಭಾರತ ಜಯಗಳಿಸಿತ್ತು. ಪರ್ತ್‌ನಲ್ಲಿ ನಡೆದ 2ನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 146 ರನ್‌ಗಳ ಜಯ ಸಾಧಿಸಿತ್ತು. ಸರಣಿಯಲ್ಲಿ ಭಾರತ 2–1 ಅಂತರದಲ್ಲಿ ಮುಂದಿದೆ.

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !