ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಸಿಎ ನೆಟ್ಸ್‌ನಲ್ಲಿ ಇಶಾಂತ್ ಶರ್ಮಾ ಫಿಟ್

Last Updated 20 ನವೆಂಬರ್ 2020, 3:15 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ತಂಡದ ಅನುಭವಿ ಮಧ್ಯಮವೇಗಿ ಇಶಾಂತ್ ಶರ್ಮಾ ಅವರು ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿದ್ದಾರೆ.

ಇದರಿಂದಾಗಿ ಅವರು ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಭಾರತ ತಂಡದಲ್ಲಿ ಆಡುವ ಭರವಸೆ ಮೂಡಿದೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಬುಧವಾರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಅವರು ನೆಟ್ಸ್‌ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದರು. ಎನ್‌ಸಿಎ ನಿರ್ದೇಶಕ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಅವರು ಕಳೆದ ಎರಡು ವಾರಗಳಿಂದ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಮುಖ್ಯ ಫಿಸಿಯೊ ಆಶಿಶ್ ಕೌಶಿಕ್ ಅವರು ಚಿಕಿತ್ಸೆ ನೀಡಿದ್ದಾರೆ.

ಬುಧವಾರ ಇಎಸ್‌ಪಿಎನ್‌ಕ್ರಿಕ್‌ಇನ್ಫೋ ಸುದ್ದಿ ತಾಣವು ಟ್ವಿಟರ್‌ನಲ್ಲಿ ಇಶಾಂತ್ ಬೌಲಿಂಗ್ ಮಾಡುವ ವಿಡಿಯೊ ತುಣುಕನ್ನು ಹಾಕಿದೆ. ತಮ್ಮ ಪೂರ್ಣ ರನ್‌ ಅಪ್‌ನೊಂದಿಗೆ ಅವರು ಬೌಲಿಂಗ್ ಮಾಡುವುದನ್ನು ದ್ರಾವಿಡ್ ಮತ್ತು ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ ಸುನೀಲ್ ಜೋಶಿ ವೀಕ್ಷಿಸಿದರು.

ಇಶಾಂತ್ ಸಿಂಗಲ್ ಸ್ಟಂಪ್ ಗುರಿಯಾಗಿಟ್ಟುಕೊಂಡು ಬೌಲಿಂಗ್ ಮಾಡಿದರು. ತರಬೇತುದಾರರಾದ ಪಾರಸ್ ಮಾಂಬ್ರೆ ಮತ್ತು ಮನ್ಸೂರ್ ಖಾನ್ ಈ ಸಂದರ್ಭದಲ್ಲಿ ಹಾಜರಿದ್ದರು.

’ಇಶಾಂತ್ ಟೆಸ್ಟ್ ತಂಡಕ್ಕೆ ಮರಳುವ ನಿರೀಕ್ಷೆ ಇದೆ. ಅವರು ಶಾರ್ಟ್‌ ರನ್‌ ಅಪ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಬಹುಬೇಗನೇ ತಮ್ಮ ಸಹಜ ಲಯಕ್ಕೆ ಮರಳುತ್ತಾರೆ‘ ಎಂದು ಈಚೆಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದರು.

ಇಶಾಂತ್ ಇನ್ನೂ ಮೂರು ಟೆಸ್ಟ್ ಗಳಲ್ಲಿ ಆಡಿದರೆ, 100 ಪಂದ್ಯಗಳನ್ನಾಡಿದ ಬೌಲರ್ ಆಗಲಿದ್ದಾರೆ. ಇದರೊಂದಿಗೆ ಕಪಿಲ್ ದೇವ್ ಅವರ ನಂತರ ಈ ಸಾಧನೆ ಮಾಡಿದ ವೇಗದ ಬೌಲರ್ ಆಗಲಿದ್ದಾರೆ. ಅಲ್ಲದೇ ಇನ್ನೂ ಮೂರು ವಿಕೆಟ್ ಪಡೆದರೆ ಟೆಸ್ಟ್‌ನಲ್ಲಿ 300 ವಿಕೆಟ್‌ ಗಳಿಸಿದ ಸಾಧನೆ ಅವರದ್ದಾಗಲಿದೆ.

ಇಶಾಂತ್ ಹೋದ ತಿಂಗಳು ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರವಾಗಿ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಆಡುವ ಸಂದರ್ಭದಲ್ಲಿ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT