ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಣಕಾಲು ಗಾಯ: ರಸೆಲ್‌ ಔಟ್‌

Last Updated 24 ಜೂನ್ 2019, 19:06 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್‌: ಭಾರತ ವಿರುದ್ಧ ಗುರುವಾರ ಮಹತ್ವದ ಪಂದ್ಯಕ್ಕೆ ಸಜ್ಜಾಗುತ್ತಿದ್ದ ವೆಸ್ಟ್‌ ಇಂಡೀಸ್‌ ತಂಡಕ್ಕೆ, ಅದಕ್ಕೆ ಮೊದಲೇ ಹಿನ್ನಡೆ ಎದುರಾಗಿದೆ. ತಂಡದ ಆಲ್‌ರೌಂಡರ್‌ ಆಂಡ್ರೆ ರಸೆಲ್‌ ಮೊಣಕಾಲಿನ ಗಾಯದಿಂದಾಗಿ ವಿಶ್ವಕಪ್‌ನ ಉಳಿದೆಲ್ಲಾ ಪಂದ್ಯಗಳನ್ನು ಕಳೆದಕೊಳ್ಳಲಿದ್ದಾರೆ.

ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಸೆಲ್‌ ಅವರ ಬದಲು ಬ್ಯಾಟ್ಸ್‌ಮನ್‌ ಸುನೀಲ್‌ ಆ್ಯಂಬ್ರಿಸ್‌ ತಂಡವನ್ನು ಸೇರಿಕೊಳ್ಳಲಿದ್ದಾರೆ.

‘ಐಸಿಸಿ ವಿಶ್ವಕಪ್‌ನ ತಾಂತ್ರಿಕ ಸಮಿತಿಯು, ವಿಶ್ವಕಪ್‌ನ ಉಳಿದ ಪಂದ್ಯಗಳಿಗೆ ರಸೆಲ್‌ ಬದಲು ಆ್ಯಂಬ್ರಿಸ್‌ ಅವರ ಸೇರ್ಪಡೆಗೆ ಸಮ್ಮತಿ ನೀಡಿದೆ’ ಎಂದು ಸೋಮವಾರ ಐಸಿಸಿ ತಿಳಿಸಿದೆ. ಆ್ಯಂಬ್ರಿಸ್‌ ಆರು ಟೆಸ್ಟ್‌, ಆರು ಏಕದಿನ ಪಂದ್ಯಗಳನ್ನು ಆಡಿದ್ದಾರೆ’ ಎಂದು ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT