ಭಾನುವಾರ, ಡಿಸೆಂಬರ್ 6, 2020
19 °C

IPL-2020 | DC vs KXIP: 5 ಸಾವಿರ ರನ್ ಪೂರೈಸಿದ ಧವನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ: ಐಪಿಎಲ್‌ನಲ್ಲಿ ಸತತ ಎರಡು ಶತಕಗಳನ್ನು ಸಿಡಿಸಿದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಂಡ ಶಿಖರ್ ಧವನ್‌, ಈ ಟೂರ್ನಿಯಲ್ಲಿ ಐದು ಸಾವಿರ ರನ್‌ ಕಲೆಹಾಕಿದ ಸಾಧನೆಯನ್ನೂ ಮಾಡಿದರು.

ಕಿಂಗ್ಸ್ ಇಲವೆನ್‌ ಪಂಜಾಬ್‌ ವಿರುದ್ಧ ಇಂದು ನಡೆಯುತ್ತಿರುವ ಪಂದ್ಯದಲ್ಲಿ ಅಜೇಯ 106 ರನ್‌ ಗಳಿಸಿದ ಧವನ್‌, ಮುಂಬೈ ಇಂಡಿಯನ್ಸ್‌ ವಿರುದ್ಧ ಆಡಿದ್ದ ಕಳೆದ ಪಂದ್ಯದಲ್ಲಿ 101 ರನ್ ಗಳಿಸಿದ್ದರು.

169ನೇ ಪಂದ್ಯದಲ್ಲಿ ಆಡಿದ ಅವರು ಟೂರ್ನಿಯಲ್ಲಿ ಒಟ್ಟು 5,043 ರನ್‌ ಕಲೆಹಾಕಿದ್ದಾರೆ. ಇದರೊಂದಿಗೆ 5 ಸಾವಿರ ರನ್‌ ಪೂರೈಸಿದ ಐದನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡರು.

ಇದಕ್ಕೂ ಮೊದಲು ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ (5,759), ಸಿಎಸ್‌ಕೆ ತಂಡದ ಸುರೇಶ್‌ ರೈನಾ (5,368), ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್‌ ಶರ್ಮಾ (5,158) ಮತ್ತು ಎಸ್‌ಆರ್‌ಎಚ್‌ ನಾಯಕ ಡೇವಿಡ್‌ ವಾರ್ನರ್‌ (5,037) ಈ ಸಾಧನೆ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು