ಗುರುವಾರ , ನವೆಂಬರ್ 26, 2020
19 °C

RCB vs KKR: ಸಿರಾಜ್‌ ಐಪಿಎಲ್‌ನಲ್ಲಿ ಹೊಸ ದಾಖಲೆ; 3 ವಿಕೆಟ್, 2 ಮೇಡನ್

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಮೊಹಮ್ಮದ್‌ ಸಿರಾಜ್‌

ಅಬುಧಾಬಿ: ಬುಧವಾರ ಕೋಲ್ಕತ್ತ ನೈಟ್ ರೈಡರ್ಸ್‌ ಎದುರಿನ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳದ್ದೇ ಕಾರುಬಾರು. ಕೆಕೆಆರ್‌ ಬ್ಯಾಟ್ಸ್‌ಮನ್‌ಗಳನ್ನು ಕೇವಲ 84 ರನ್‌ಗಳಿಗೆ ಕಟ್ಟಿ ಹಾಕಿದರು.

ಮೊಹಮ್ಮದ್‌ ಸಿರಾಜ್‌ ಇವತ್ತು ಮಿಂಚಿ ಪ್ರದರ್ಶನ ನೀಡಿದರು. ಒಂದೂ ರನ್‌ ಬಿಟ್ಟು ಕೊಡದೆಯೇ ಮೂರು ವಿಕೆಟ್‌ ಗಳಿಸಿವ ಮೂಲಕ ಐಪಿಎಲ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದರು. ಇದರೊಂದಿಗೆ ಎರಡು ಮೇಡನ್‌ ಓವರ್‌ ಮಾಡಿರುವ ಸಾಧನೆಗೂ ಪಾತ್ರರಾಗಿದ್ದಾರೆ.

ನಾಲ್ಕು ಓವರ್‌ಗಳಲ್ಲಿ 8ರನ್‌ ನೀಡಿ ಮೂರು ವಿಕೆಟ್‌ ಗಳಿಸುವ ಮೂಲಕ ಕೆಕೆಆರ್‌ಗೆ ದೊಡ್ಡ ಆಘಾತ ನೀಡಿದರು. ಕೆಕೆಆರ್‌ 14 ರನ್‌ ಗಳಿಸುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಕೆಕೆಆರ್‌ ಪರ ನಾಯಕ ಏಯಾನ್‌ ಮಾರ್ಗನ್‌ 34 ಎಸೆತಗಳಲ್ಲಿ 30 ರನ್‌ (1 ಸಿಕ್ಸರ್, 3 ಫೋರ್‌) ಗಳಿಸಿದರೆ, ಲಾಕಿ ಫರ್ಗ್ಯುಸನ್ 16 ಎಸೆತಗಳಲ್ಲಿ 19 ರನ್‌ ಗಳಿಸಿದರು.

ಇದನ್ನೂ ಓದಿ: RCB vs KKR: ಆರ್‌ಸಿಬಿಗೆ 8 ವಿಕೆಟ್‌ ಜಯ; ಕೊಹ್ಲಿ 500 ಫೋರ್‌ ಸಾಧನೆ

ಆರ್‌ಸಿಬಿ ವಿಕೆಟ್‌ ಕೀಪರ್‌ ಎಬಿ ಡಿ ವಿಲಿಯರ್ಸ್‌ ಎರಡು ಕ್ಯಾಚ್‌ ಪಡೆಯುವ ಮೂಲಕ ಐಪಿಎಲ್‌ನಲ್ಲಿ 100 ಕ್ಯಾಚ್‌ಗಳು ಅವರ ಖಾತೆಗೆ ಸೇರ್ಪಡೆಯಾಗಿವೆ. 

9ನೇ ಓವರ್‌ ಮಾಡಿದ ಸ್ಪಿನ್ನರ್‌ ಯಜುವೇಂದ್ರ ಚಾಹಲ್ ನಾಲ್ಕನೇ ಎಸೆತದಲ್ಲಿ ದಿನೇಶ್‌ ಕಾರ್ತಿಕ್‌ ಅವರನ್ನು ಎಲ್‌ಬಿಡಬ್ಲ್ಯು ಮೂಲಕ ಪೆವಿಲಿನ್‌ಗೆ ಕಳುಹಿಸಿದರು. ವಿರಾಟ್‌ ಕೊಹ್ಲಿ ಡಿಆರ್‌ಎಸ್‌ ತೆಗೆದುಕೊಂಡು ಕಾರ್ತಿಕ್‌ ವಿಕೆಟ್‌ ಗಟ್ಟಿ ಮಾಡಿಕೊಂಡರು. ನಂತರ ಬ್ಯಾಟಿಂಗ್‌ ಬಂದ ಪ್ಯಾಟ್ ಕಮಿನ್ಸ್ ಡಿಆರ್‌ಎಸ್‌ ಮೂಲಕ ವಿಕೆಟ್‌ ಉಳಿಸಿಕೊಂಡರು.

ಕೆಕೆಆರ್‌ 50 ರನ್‌ ದಾಟಿದ್ದು 15 ಓವರ್‌ನಲ್ಲಿ, ಕೊನೆಯ ಓವರ್‌ಗಳಲ್ಲಿಯೂ ಬ್ಯಾಟ್ಸ್‌ಮನ್‌ಗಳಿಂದ ಹೋರಾಟ ಕಾಣಲಿಲ್ಲ.

ಇದನ್ನೂ ಓದಿ: IPL 2020 | RCB vs KKR: ಆರ್‌ಸಿಬಿಗೆ 85 ರನ್‌ ಗುರಿ ನೀಡಿದ ಕೆಕೆಆರ್‌

ಆರ್‌ಸಿಬಿ ಬೌಲಿಂಗ್‌ ಸಾಧನೆ:

ಮೊಹಮ್ಮದ್‌ ಸಿರಾಜ್‌–3 ವಿಕೆಟ್‌; 8 ರನ್‌; 2 ಮೇಡನ್‌
ಯಜುವೇಂದ್ರ ಚಾಹಲ್–2 ವಿಕೆಟ್‌; 15 ರನ್‌
ವಾಷಿಂಗ್ಟನ್ ಸುಂದರ್‌– 1 ವಿಕೆಟ್‌; 14 ರನ್‌
ನವದೀಪ್‌ ಸೈನಿ– 1 ವಿಕೆಟ್‌; 23 ರನ್‌
ಕ್ರಿಸ್‌ ಮೋರಿಸ್‌– 16 ರನ್‌; 1 ಮೇಡನ್‌
ಇಸುರು ಉದಾನ– 6 ರನ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು