ಶುಕ್ರವಾರ, ನವೆಂಬರ್ 27, 2020
18 °C

ಆರ್‌ಸಿಬಿಯಿಂದ ಹಸಿರು ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದುಬೈ: ಪರಿಸರ ಸಂರಕ್ಷಣೆ ಮತ್ತು ಮಹತ್ವದ ಕುರಿತು ಸಂದೇಶ ನೀಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಭಾನುವಾರ ನಡೆಯುವ ಪಂದ್ಯದಲ್ಲಿ ಹಸಿರು ಪೋಷಾಕು ಧರಿಸಿ ಕಣಕ್ಕಿಳಿಯಲಿದೆ.

ಪ್ರತಿವರ್ಷದ ಐಪಿಎಲ್‌ನಲ್ಲಿಯೂ ವಿರಾಟ್ ಕೊಹ್ಲಿ ಬಳಗವು ಒಂದು ಪಂದ್ಯದಲ್ಲಿ ಹಸಿರು ಪೋಷಾಕು ಧರಿಸಿ ಆಡುತ್ತದೆ.  ಚೆನ್ನೈ ಸೂಪರ್ ಕಿಂಗ್ಸ್ ಎದುರು ಈ ಬಾರಿ ಹಸಿರು ಪೋಷಾಕುಧರಿಸಲಿದೆ.

ಇದನ್ನೂ ಓದಿ: 

’ನಾವು ವಾಸಿಸುವ ಭೂಮಿಯ ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ. ನೀರು, ವಿದ್ಯುತ್ ಮಿತಬಳಕೆ, ಕಸವಿಲೆವಾರಿಯಲ್ಲಿ ಶಿಸ್ತು ಮತ್ತು ಸರಳ ಜೀವನದ ಮೂಲಕ ಪರಿಸರಕ್ಕೆ ನಾವು ಕಾಣಿಕೆ ನೀಡಬಹುದು. ಅದಕ್ಕೆ ಪ್ರತಿಯಾಗಿ ಮಾನವಕುಲಕ್ಕೂ ಒಳ್ಳೆಯದಾಗುತ್ತದೆ‘ ಎಂದು ಶನಿವಾರ ಆರ್‌ಸಿಬಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ವಿಡಿಯೊದಲ್ಲಿ  ಆಟಗಾರ ಎಬಿ ಡಿವಿಲಿಯರ್ಸ್, ಆ್ಯರನ್ ಫಿಂಚ್ ಮತ್ತು ವಾಷಿಂಗ್ಟನ್ ಸುಂದರ್ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು