ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2020 | DC vs RR: ಸೇಡು ತೀರಿಸಿಕೊಳ್ಳುವತ್ತ ರಾಯಲ್ಸ್‌ ಚಿತ್ತ

ಸ್ಟೀವ್ ಸ್ಮಿತ್–ಶ್ರೇಯಸ್ ಅಯ್ಯರ್ ಬಳಗಗಳ ಹಣಾಹಣಿ ಇಂದು
Last Updated 14 ಅಕ್ಟೋಬರ್ 2020, 4:58 IST
ಅಕ್ಷರ ಗಾತ್ರ

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಪ್ರಥಮ ಸುತ್ತಿನಲ್ಲಿ ಹೆಚ್ಚು ಕಹಿ ಅನುಭವಿಸಿರುವ ರಾಜಸ್ಥಾನ ರಾಯಲ್ಸ್ ತಂಡವು ಪುಟಿದೇಳುವ ನಿರೀಕ್ಷೆಯಲ್ಲಿದೆ.

ಬುಧವಾರ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೇಡು ತೀರಿಸಿಕೊಳ್ಳಲು ತವಕಿಸುತ್ತಿದೆ.

ಆಡಿರುವ ಏಳು ಪಂದ್ಯಗಳಲ್ಲಿ ಮೊದಲೆರಡರಲ್ಲಿ ರಾಯಲ್ಸ್‌ ಜಯಿಸಿತ್ತು. ಆದರೆ ನಂತರದ ನಾಲ್ಕು ಪಂದ್ಯಗಳಲ್ಲಿ ಸತತ ಸೋಲನುಭವಿಸಿತ್ತು. ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಜಯಿಸಿತು.

ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ ಗಳಾದ ‘ಬಿಹು ಡ್ಯಾನ್ಸರ್’ ರಿಯಾನ್ ಪರಾಗ್ ಮತ್ತು ‘ಸಿಕ್ಸರ್ ಬಾಯ್’ ರಾಹುಲ್ ತೆವಾಟಿಯಾ ಅವರ ಅಬ್ಬರದ ಜೊತೆಯಾಟದಿಂದ ಗೆಲುವು ಒಲಿದಿತ್ತು. ಆ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಬೆನ್ ಸ್ಟೋಕ್ಸ್‌ ಸೇರಿದಂತೆ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ದೊಡ್ಡ ಇನಿಂಗ್ಸ್‌ ಆಡಿರಲಿಲ್ಲ. ಇದು ಕಳೆದ ಕೆಲವು ಪಂದ್ಯಗಳಿಂದಲೂ ತಂಡಕ್ಕೆ ಇರುವ ದೊಡ್ಡ ಸಮಸ್ಯೆ. ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್, ಜಯದೇವ್ ಉನದ್ಕತ್ ಮತ್ತು ತೆವಾಟಿಯಾ ಉತ್ತಮವಾಗಿ ಬೌಲಿಂಗ್ ಮಾಡು ತ್ತಿರುವುದು ಸಮಾಧಾನದ ವಿಷಯ.

ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ತಂಡವು ಹೋದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಎದುರು ಪರಾಭವಗೊಂಡಿತ್ತು. ‍ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಿಂದ ಎರಡನೇ ಸ್ಥಾನಕ್ಕಿಳಿದಿತ್ತು. ಈ ತಂಡದಲ್ಲಿ ಬ್ಯಾಟಿಂಗ್, ಬೌಲಿಂಗ್ ವಿಭಾಗಗಳಲ್ಲಿ ಎಲ್ಲವೂ ಉತ್ತಮವಾಗಿದೆ. ಪೃಥ್ವಿ ಶಾ ಅವರಿಂದ ಶುರುವಾಗಿ ಎಂಟನೇ ಕ್ರಮಾಂಕದ ಆರ್. ಅಶ್ವಿನ್ ಅವರವರೆಗೂ ಎಲ್ಲರೂ ರನ್‌ ಸೂರೆ ಮಾಡುವ ತಾಕತ್ತುಳ್ಳವರೇ. ಆದ್ದರಿಂದ ರಾಯಲ್ಸ್‌ ಬೌಲರ್‌ಗಳಿಗೆ ಕಠಿಣ ಸವಾಲು ಎದುರಾಗುವುದು ಖಚಿತ.ಮೊದಲ ಸುತ್ತಿನ ಪಂದ್ಯದಲ್ಲಿ ಡೆಲ್ಲಿಯ ಕಗಿಸೊ ರಬಾಡ ಮೂರು ವಿಕೆಟ್ ಗಳಿಸಿ ರಾಯಲ್ಸ್ ಬ್ಯಾಟಿಂಗ್‌ಗೆ ಪೆಟ್ಟುಕೊಟ್ಟಿದ್ದರು. ರಾಯಲ್ಸ್‌ನ ಸಂಜು ಸ್ಯಾಮ್ಸನ್, ಸ್ಮಿತ್, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್ ಮತ್ತು ರಾಬಿನ್ ಉತ್ತಪ್ಪ ಅವರು ಡೆಲ್ಲಿ ಬೌಲಿಂಗ್‌ ಎದುರಿಸಿ ನಿಂತರ ಮಾತ್ರ ಜಯದ ಆಸೆ ಈಡೇರಬಹುದು.

ಮುಖಾಮುಖಿ

ಪಂದ್ಯಗಳು: 20

ಡೆಲ್ಲಿ ಜಯ: 9

ರಾಯಲ್ಸ್ ಜಯ: 11

**
ಈ ವರ್ಷ ದೊಡ್ಡ ಮೊತ್ತ

ಡೆಲ್ಲಿ: 4ಕ್ಕೆ228; ಕೋಲ್ಕತ್ತ ಎದುರು
ರಾಜಸ್ಥಾನ: 6ಕ್ಕೆ226; ಪಂಜಾಬ್ ವಿರುದ್ಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT