ಸೋಮವಾರ, ಆಗಸ್ಟ್ 8, 2022
21 °C

IPL 2021: ಐಪಿಎಲ್‌ನಲ್ಲಿ ಮಗದೊಂದು ದಾಖಲೆ ಬರೆದ ಕ್ರಿಸ್ ಗೇಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲೇ ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್, ದಾಖಲೆಯ 350ನೇ ಸಿಕ್ಸರ್ ಸಿಡಿಸಿದ್ದಾರೆ. 

ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಗೆ ಕ್ರಿಸ್ ಗೇಲ್ ಪಾತ್ರವಾಗಿದ್ದಾರೆ. 

ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ 42 ವರ್ಷದ ಗೇಲ್, ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಈ ಮಹತ್ವದ ಮೈಲುಗಲ್ಲು ತಲುಪಿದ್ದಾರೆ. 

ಐಪಿಎಲ್‌ನಲ್ಲಿ 133ನೇ ಪಂದ್ಯದ 132 ಇನ್ನಿಂಗ್ಸ್‌ನಲ್ಲಿ ಗೇಲ್ ಈ ಮೈಲುಗಲ್ಲು ತಲುಪಿದ್ದಾರೆ. ಅಲ್ಲದೆ ಇದುವರೆಗೆ 41.12ರ ಸರಾಸರಿಯಲ್ಲಿ 4,812 ರನ್ ಪೇರಿಸಿದ್ದಾರೆ. ಇದರಲ್ಲಿ ಆರು ಶತಕಗಳು ಸೇರಿವೆ. ಹಾಗೆಯೇ 150.04ರ ಸ್ಟ್ರೇಕ್‌ರೇಟ್ ಕಾಯ್ದುಕೊಂಡಿದ್ದಾರೆ. 

ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಕ್ರಿಸ್ ಗೇಲ್ ಬಳಿಕ ಎರಡನೇ ಸ್ಥಾನದಲ್ಲಿರುವ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ ಇದುವರೆಗೆ 237 ಸಿಕ್ಸರ್‌‌ಗಳನ್ನು ಬಾರಿಸಿದ್ದಾರೆ. 

ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 5 ಪಟ್ಟಿ ಇಲ್ಲಿದೆ:
1. ಕ್ರಿಸ್ ಗೇಲ್ (351*)
2. ಎಬಿ ಡಿ ವಿಲಿಯರ್ಸ್ (237)
3. ಎಂ.ಎಸ್. ಧೋನಿ (216)
4. ರೋಹಿತ್ ಶರ್ಮಾ (214)
5. ವಿರಾಟ್ ಕೊಹ್ಲಿ (201)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು