ಗುರುವಾರ , ಮೇ 13, 2021
16 °C

IPL 2021: ಮಗದೊಂದು ಸ್ಮರಣೀಯ ದಾಖಲೆ ಬರೆದ ಧೋನಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮಗದೊಂದು ಮೈಲಿಗಲ್ಲು ತಲುಪಿದ್ದಾರೆ.

ಐಪಿಎಲ್‌ನಲ್ಲಿ 150 ಡಿಸ್ಮಿಸಲ್ (ಕ್ಯಾಚ್ ಹಾಗೂ ಸ್ಟಂಪಿಂಗ್ ಸೇರಿದಂತೆ) ಮಾಡಿದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಮಹೇಂದ್ರ ಸಿಂಗ್ ಧೋನಿ ಪಾತ್ರವಾಗಿದ್ದಾರೆ.

ಇದನ್ನೂ ಓದಿ: 

ಐಪಿಎಲ್ 12ನೇ ಆವೃತ್ತಿಯಲ್ಲಿ ಬುಧವಾರ ರಾತ್ರಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಸ್ಮರಣೀಯ ದಾಖಲೆ ಬರೆದರು. ಐಪಿಎಲ್‌ನಲ್ಲಿ 208ನೇ ಪಂದ್ಯದ 201ನೇ ಇನ್ನಿಂಗ್ಸ್‌ನಲ್ಲಿ ಧೋನಿ ಈ ಮೈಲಿಗಲ್ಲು ತಲುಪಿದ್ದಾರೆ.

 

 

 

ಈ ಕುರಿತು ಸಹ ಆಟಗಾರ ಸುರೇಶ್ ರೈನಾ ಟ್ವಿಟರ್‌ನಲ್ಲಿ ಉಲ್ಲೇಖಿಸಿದ್ದಾರೆ. 'ಐಪಿಎಲ್‌ನಲ್ಲಿ 150 ಡಿಸ್ಮಿಸಲ್, ಮಗದೊಂದು ಮಹಾನ್ ಸಾಧನೆ, ಹೀಗೆಯೇ ನಮಗೆಲ್ಲರಿಗೂ ಹುರಿದುಂಬಿಸುತ್ತೀರಿ ತಲ ಧೋನಿ' ಎಂದು ರೈನಾ ಬರೆದಿದ್ದಾರೆ.

 

ಧೋನಿ 150 ಡಿಸ್ಮಿಸಲ್‌ಗಳ ಪೈಕಿ 119 ಕ್ಯಾಚ್ ಹಾಗೂ 39 ಸ್ಟಂಪಿಂಗ್‌ಗಳು ಸೇರಿವೆ.

ಇದನ್ನೂ ಓದಿ: 

ಧೋನಿ ನಂತರದ ಸ್ಥಾನದಲ್ಲಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, 143 ಡಿಸ್ಮಿಸಲ್‌ಗಳನ್ನು ತಮ್ಮ ಖಾತೆಯಲ್ಲಿ ಹೊಂದಿದ್ದಾರೆ. ಇದರಲ್ಲಿ 112 ಕ್ಯಾಚ್ ಹಾಗೂ 31 ಸ್ಟಂಪಿಂಗ್‌ಗಳು ಸೇರಿವೆ.

ಏತನ್ಮಧ್ಯೆ ಐಪಿಎಲ್‌ನಲ್ಲಿ 200 ಪಂದ್ಯಗಳನ್ನಾಡಿದ ಮೂರನೇ ಆಟಗಾರ ಎಂಬ ಗೌರವಕ್ಕೂ ದಿನೇಶ್ ಕಾರ್ತಿಕ್ ಪಾತ್ರವಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು