ಭಾನುವಾರ, ಮಾರ್ಚ್ 26, 2023
23 °C

IPL 2021 | DC vs CSK: ವಿಶಿಷ್ಟ ದಾಖಲೆ ಬರೆದ ಧೋನಿ-ಪಂತ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪ್ಲೇ-ಆಫ್‌ನಲ್ಲಿ ತಮ್ಮ ತಮ್ಮ ತಂಡಗಳನ್ನು ಮುನ್ನಡೆಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಪ್ತಾನ ರಿಷಭ್ ಪಂತ್ ವಿಶಿಷ್ಟ ದಾಖಲೆಗೆ ಭಾಜರಾಗಿದ್ದಾರೆ.

ಐಪಿಎಲ್ ಪ್ಲೇ-ಆಫ್‌ನಲ್ಲಿ ತಂಡವನ್ನು ಮುನ್ನಡೆಸುತ್ತಿರುವ 40ಕ್ಕೂ ಹೆಚ್ಚು ಪ್ರಾಯದ ಎರಡನೇ ನಾಯಕ ಎಂಬ ಕೀರ್ತಿಗೆ ಧೋನಿ ಭಾಜನರಾಗಿದ್ದಾರೆ. ಈ ಹಿಂದೆ 2013ರಲ್ಲಿ ರಾಹುಲ್ ದ್ರಾವಿಡ್ ಈ ದಾಖಲೆಗೆ ಅರ್ಹವಾಗಿದ್ದರು.

ಇದನ್ನೂ ಓದಿ: 

ಅತ್ತ ರಿಷಭ್ ಪಂತ್, ಐಪಿಎಲ್ ಪ್ಲೇ-ಆಫ್‌ನಲ್ಲಿ ತಂಡದ ನಾಯಕತ್ವ ವಹಿಸುತ್ತಿರುವ ಅತಿ ಕಿರಿಯ ನಾಯಕ ಎಂಬ ದಾಖಲೆ ಬರೆದಿದ್ದಾರೆ. ಭಾನುವಾರದ ವೇಳೆಗೆ ಪಂತ್ ಪ್ರಾಯ, 24 ವರ್ಷ ಆರು ದಿನಗಳಾಗಿವೆ.

 

 

 

ಅಂದ ಹಾಗೆ ಮೊದಲ ಕ್ವಾಲಿಫೈಯರ್‌ನಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್‌ಗೆ ಪ್ರವೇಶಿಸಲಿದೆ. ಸೋತ ತಂಡಕ್ಕೆ ಎರಡನೇ ಕ್ವಾಲಿಫೈಯರ್‌ನಲ್ಲಿ ಆಡುವ ಅವಕಾಶವಿರುತ್ತದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು