ಬುಧವಾರ, ಡಿಸೆಂಬರ್ 1, 2021
22 °C

IPL 2021 | DC vs KKR: ಡೆಲ್ಲಿ ವಿರುದ್ಧ ಜಯ; 4ನೇ ಸ್ಥಾನ ಭದ್ರಪಡಿಸಿಕೊಂಡ ಕೆಕೆಆರ್

Published:
Updated:
ಶಾರ್ಜಾ ಕ್ರಿಕೆಟ್‌ ಅಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಮೂರು ವಿಕೆಟ್‌ ಅಂತರದ ಜಯ ಸಾಧಿಸಿತು.
 • 07:30 pm

  ನಾಲ್ಕನೇ ಸ್ಥಾನದಲ್ಲಿ ಕೆಕೆಆರ್‌

  ಡೆಲ್ಲಿ ವಿರುದ್ಧದ ಗೆಲುವೂ ಸೇರಿದಂತೆ, ಆಡಿರುವ ಹನ್ನೊಂದು ಪಂದ್ಯಗಳಲ್ಲಿ ಐದನೇ ಜಯ ಕಂಡ ಕೆಕೆಆರ್‌ ಪಾಯಿಂಟ್ಸ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದೆ.

  ಪಟ್ಟಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮೊದಲ ಮೂರು ಸ್ಥಾನಗಳಲ್ಲಿ ಇವೆ.

 • 07:23 pm

  ಜಯದ ನಗೆ ಬೀರಿದ ಕೆಕೆಆರ್

  ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ ಸಾಧಾರಣ ಗುರಿಯನ್ನು ಕೆಕೆಆರ್‌ ತಂಡ ಇನ್ನೂ ಹತ್ತು ಎಸೆತಗಳು ಬಾಕಿ ಇರುವಂತೆಯೇ ತಲುಪಿತು.

 • 06:47 pm

  ಐದನೇ ವಿಕೆಟ್‌ ಪತನ

  ದಿನೇಶ್ ಕಾರ್ತಿಕ್‌ ಅವರು ಆವೇಶ್‌ ಖಾನ್‌ ಬೌಲಿಂಗ್‌ನಲ್ಲಿ ಐದನೇ ವಿಕೆಟ್‌ ರೂಪದಲ್ಲಿ ಒಪ್ಪಿಸಿದ್ದಾರೆ.

  ಸದ್ಯ 15 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಕೆಕೆಆರ್‌ ತಂಡ ಐದು ವಿಕೆಟ್‌ಗಳನ್ನು ಕಳೆದುಕೊಂಡು  98 ರನ್‌ ಗಳಿಸಿದೆ.

  ಗೆಲ್ಲಲು ಇನ್ನು ಐದು ಓವರ್‌ಗಳಲ್ಲಿ 30 ರನ್‌ ಗಳಿಸಬೇಕಿದೆ.

 • 06:28 pm

  ಗಿಲ್‌ ಹಿಂಬಾಲಿಸಿದ ನಾಯಕ ಮಾರ್ಗನ್

  ನಿಧಾನವಾಗಿ ಇನಿಂಗ್ಸ್‌ ಬೆಳೆಸುತ್ತಿದ್ದ ಯುವ ಆಟಗಾರ ಶುಭಮನ್‌ ಗಿಲ್‌ (30) ವಿಕೆಟ್‌ ಒಪ್ಪಿಸಿದ ಬಳಿಕ ಬಂದ ನಾಯಕ ಏಯಾನ್‌ ಮಾರ್ಗನ್‌ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸುವಲ್ಲಿ ವಿಫಲರಾದರು.

  ಈ ಇನಿಂಗ್ಸ್‌ನಲ್ಲಿ ಮೊದಲ ಓವರ್‌ ಬೌಲಿಂಗ್‌ ಮಾಡಿದ ಕಗಿಸೊ ರಬಾಡಗೆ ಗಿಲ್‌ ವಿಕೆಟ್‌ ನೀಡಿದರೆ, ಮಾರ್ಗನ್‌ ಆರ್‌ ಅಶ್ವಿನ್‌ ಬೌಲಿಂಗ್‌ನಲ್ಲಿ ಪೆವಿಲಿಯನ್‌ ಸೇರಿಕೊಂಡರು.

  ಸದ್ಯ 12 ಓವರ್‌ ಮುಗಿದಿದ್ದು, ಕೆಕೆಆರ್‌ ತಂಡ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು 69 ರನ್‌ ಗಳಿಸಿದೆ.

  ಗೆಲ್ಲಲು 48 ಎಸೆತಗಳಲ್ಲಿ ಇನ್ನೂ 59 ರನ್‌ ಗಳಿಸಬೇಕಿದೆ. ಹೀಗಾಗಿ ಪಂದ್ಯ ಕುತೂಹಲದತ್ತ ಸಾಗಿದೆ.

 • 06:02 pm

  ತ್ರಿಪಾಠಿ ವಾಪಸ್;‌ ಕೆಕೆಆರ್‌ಗೆ ಆರಂಭಿಕ ಆಘಾತ

  ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದ ರಾಹುಲ್‌ ತ್ರಿಪಾಠಿ ಕೇವಲ 9 ರನ್‌ ಗಳಿಸಿ ಔಟಾದರು.

  ಇದರೊಂದಿಗೆ ಕೆಕೆಆರ್‌ ಪಡೆ ಪವರ್‌ ಪ್ಲೇ ಮುಕ್ತಾಯವಾಗುವುದರೊಳಗೆ 44 ರನ್‌ ಗಳಿಸಿ 2 ವಿಕೆಟ್‌ಗಳನ್ನು ಕಳೆದುಕೊಂಡಿದೆ.

  ಸದ್ಯ ಗಿಲ್‌ ಮತ್ತು ನಿತೀಶ್‌ ರಾಣ ಕ್ರೀಸಸ್‌ನಲ್ಲಿದ್ದಾರೆ.

   

 • 05:54 pm

  ಕೆಕೆಆರ್‌ಗೆ ಮೊದಲ ಆಘಾತ

  ಭರವಸೆಯ ಬ್ಯಾಟ್ಸ್‌ಮನ್‌ ವೆಂಕಟೇಶ್‌ ಅಯ್ಯರ್‌ ಕೇವಲ 14 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದಾರೆ. ಸದ್ಯ ರಾಹುಲ್‌ ತ್ರಿಪಾಠಿ ಕ್ರೀಸ್‌ಗೆ ಆಗಮಿಸಿದ್ದಾರೆ. ಇನ್ನೊಂದು ತುದಿಯಲ್ಲಿ ಶುಭಮನ್‌ ಗಿಲ್‌ (13) ಬ್ಯಾಟ್‌ ಬೀಸುತ್ತಿದ್ದಾರೆ.

 • 05:21 pm

  ಕೆಕೆಆರ್‌ ಗೆಲುವಿಗೆ 128 ರನ್‌ ಗುರಿ

  ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 127 ರನ್‌ ಗಳಿಸಿದ್ದು, ಕೆಕೆಆರ್‌ಗೆ ಸಾಧಾರಣ ಗುರಿ ನೀಡಿದೆ.

  ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ‌ಎರಡು ರನೌಟ್ ಸೇರಿ ಒಟ್ಟು ಮೂರು ವಿಕೆಟ್‌ ಉರುಳಿದ್ದು ಅಂತಿಮ ಹಂತದಲ್ಲಿ ಡೆಲ್ಲಿ ಪಡೆಗೆ ಹಿನ್ನಡೆಯಾಯಿತು.

 • 05:17 pm

  ರಿಷಭ್‌ ರನೌಟ್

  ಕೊನೇ ಓವರ್‌ನಲ್ಲಿ ತಂಡದ ಮೊತ್ತ ಹೆಚ್ಚಿಸುವ ಆತುರದಲ್ಲಿ ರಿಷಭ್‌ ಪಂತ್‌ ರನೌಟ್‌ ಬಲೆಗೆ ಬಿದ್ದರು.

 • 05:14 pm

  ಅಶ್ವಿನ್‌ ವಿಕೆಟ್‌ ಪತನ

  9 ರನ್‌ ಗಳಿಸಿದ್ದ ರವಿಚಂದ್ರನ್‌ ಅಶ್ವಿನ್‌ ಕೊನೇ ಓವರ್‌ನ ಮೊದಲ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು.

   

 • 04:54 pm

  ‌ಕೆಕೆಆರ್‌ನ ಭರವಸೆಯ ಬ್ಯಾಟ್ಸ್‌ಮನ್‌ ವೆಂಕಟ್‌ ಅಯ್ಯರ್‌ ಹಾಕಿದ 16 ನೇ ಓವರ್‌ನಲ್ಲಿ ಆಲ್ರೌಂಡರ್‌ ಅಕ್ಷರ್‌ ಪಟೇಲ್ ವಿಕೆಟ್‌ ಒಪ್ಪಿಸಿದರು.

  ಇದರೊಂದಿಗೆ ಡೆಲ್ಲಿ ಸತತ ನಾಲ್ಲು ಓವರ್‌ಗಳಲ್ಲಿ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

  ಇದಕ್ಕೂ ಮೊದಲು ಕೆಕೆಆರ್‌ ಬೌಲರ್‌ಗಳ ಹಾಕಿದ ಸತತ ಮೂರು ಓವರ್‌ಗಳಲ್ಲಿ ಕ್ರಮವಾಗಿ ಸ್ಟೀವ್‌ ಸ್ಮಿತ್‌ (39), ಶಿಮ್ರೋನ್‌ ಹೆಟ್ಮೆಯರ್ (4)‌ ಮತ್ತು ಲಲಿತ್‌ ಯಾದವ್‌ (0)  ವಿಕೆಟ್‌ ಒಪ್ಪಿಸಿದ್ದರು.

 • 04:48 pm

  ‌ಖಾತೆ ತೆರೆಯದ ಲಲಿತ್

  ಆಲ್ರೌಂಡರ್‌ ಲಲಿತ್‌ ಯಾದವ್‌ ಖಾತೆ ತೆರೆಯುವ ಮುನ್ನ ವಿಕೆಟ್‌ ಕೈ ಚೆಲ್ಲಿದರು. ನರೇನ್‌ ಎಸೆದ 15ನೇ ಓವರ್‌ನಲ್ಲಿ ಅವರು ಎಲ್‌ಬಿ ಬಲೆಗೆ ಬಿದ್ದರು.

 • 04:43 pm

  ಪೆವಿಲಿಯನ್‌ ಸೇರಿಕೊಂಡ ಶಿಮ್ರೋನ್‌

  ‌ಅನುಭವಿ ಬ್ಯಾಟ್ಸ್‌ಮನ್‌ ಸ್ಟೀವ್‌ ಸ್ಮಿತ್‌ ವಿಕೆಟ್‌ ಪತನದ ಬಳಿಕ ಕ್ರೀಸ್‌ಗೆ ಬಂದ ಶಿಮ್ರೋನ್‌ ಹೆಟ್ಮೆಯರ್, ಬಂದಷ್ಟೇ ವೇಗವಾಗಿ ಪೆವಿಲಿಯನ್‌ ಸೇರಿಕೊಂಡರು.

  ಕೇವಲ 4 ರನ್‌ ಗಳಿಸಿದ್ದ ಅವರಿಗೆ ವೆಂಕಟೇಶ್‌ ಅಯ್ಯರ್‌ ಮುಳುವಾದರು.

 • 04:37 pm

  ಲಾಕಿಗೆ ಮತ್ತೊಂದು ವಿಕೆಟ್

  ನಿರಾಯಾಸವಾಗಿ ಬ್ಯಾಟಿಂಗ್‌ ಮಾಡುತ್ತಿದ್ದ ಸ್ಟೀವ್‌ ಸ್ಮಿತ್ (39) ಲಾಕಿ ಫರ್ಗ್ಯೂಸನ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು.

  ಸದ್ಯ 13 ಓವರ್‌ಗಳ ಆಟ ಮುಗಿದಿದ್ದು, ಡೆಲ್ಲಿ ತಂಡ 3 ವಿಕೆಟ್‌ ಕಳೆದುಕೊಂಡು 81 ರನ್‌ ಗಳಿಸಿದೆ.

  ವೆಸ್ಟ್‌ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಶಿಮ್ರೋನ್‌ ಹೆಟ್ಮೆಯರ್‌ ಕ್ರೀಸ್‌ಗೆ ಬಂದಿದ್ದಾರೆ.

 • 04:21 pm

  ಹತ್ತು ಓವರ್‌ ಮುಕ್ತಾಯ: 2 ವಿಕೆಟ್‌ ನಷ್ಟಕ್ಕೆ 64 ರನ್‌ ಗಳಿಸಿದ ಡೆಲ್ಲಿ

  ಹತ್ತು ಓವರ್‌ಗಳ ಆಟ ಮುಕ್ತಾಯವಾಗಿದ್ದ ರಿಷಭ್‌ ನೇತೃತ್ವದ ಡೆಲ್ಲಿ ಪಡೆ ಎರಡು ವಿಕೆಟ್‌ ನಷ್ಟಕ್ಕೆ 64 ರನ್‌ ಗಳಿಸಿದೆ.

  ಪಂತ್‌ (7) ಮತ್ತು ಸ್ಮಿತ್‌ (31) ಕ್ರೀಸ್‌ನಲ್ಲಿದ್ದಾರೆ.

 • 04:03 pm

  ಅಯ್ಯರ್‌ಗೆ ಪೆವಿಲಿಯನ್‌ ದಾರಿ ತೋರಿದ ನರೇನ್

  ಶಿಖರ್‌ ಧವನ್‌ (24) ವಿಕೆಟ್‌ ಪತನದ ಬಳಿಕ ಕ್ರೀಸ್‌ಗೆ ಬಂದ ಶ್ರೇಯಸ್‌ ಅಯ್ಯರ್‌ (1), ಜವಾಬ್ದಾರಿಯುತ ಇನಿಂಗ್ಸ್‌ ಕಟ್ಟಲು ವಿಫಲರಾದರು.

  ಪವರ್‌ ಪ್ಲೇ ಮುಕ್ತಾಯದ ಬಳಿಕ ಸುನೀಲ್‌ ನರೇನ್‌ ಎಸೆದ ಇನಿಂಗ್ಸ್‌ನ ಏಳನೇ ಓವರ್‌ನ ಎರಡನೇ ಎಸೆತವನ್ನು ಅಂದಾಜಿಸುವಲ್ಲಿ ವಿಫಲರಾಗಿ ಕ್ಲೀನ್‌ ಬೌಲ್ಡ್‌ ಆದರು.

  ಸದ್ಯ ಏಳು ಓವರ್‌ಗಳ ಅಂತ್ಯಕ್ಕೆ ಡೆಲ್ಲಿ 2 ವಿಕೆಟ್‌ ಕಳೆದುಕೊಂಡು 42 ರನ್‌ ಗಳಿಸಿದೆ. ನಾಯಕ ರಿಷಭ್‌ ಪಂತ್‌ ಕ್ರೀಸ್‌ಗೆ ಆಗಮಿಸಿದ್ದಾರೆ.

 • 04:00 pm

  ಪವರ್‌ ಪ್ಲೇ ಮುಕ್ತಾಯ: 1 ವಿಕೆಟ್‌ ಕಳೆದುಕೊಂಡು 39 ರನ್‌ ಗಳಿಸಿದ ಡೆಲ್ಲಿ

  ಆರು ಓವರ್‌ಗಳ ಆಟ ಮುಕ್ತಾಯವಾಗಿದ್ದು, ಡೆಲ್ಲಿ ತಂಡ 39 ರನ್‌ ಗಳಿಸಿ ಒಂದು ವಿಕೆಟ್‌ ಕಳೆದುಕೊಂಡಿದೆ.

 • 03:56 pm

  ಡೆಲ್ಲಿ ತಂಡದ ಮೊದಲ ವಿಕೆಟ್‌ ಪತನ

  20 ಎಸೆತಗಳಲ್ಲಿ 24 ರನ್‌ ಗಳಿಸಿ ಆಡುತ್ತಿದ್ದ ಶಿಖರ್‌ ಧವನ್‌ ಐದನೇ ಓವರ್‌ನ ಕೊನೆಯ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು.

  ಇನಿಂಗ್ಸ್‌ನಲ್ಲಿ ತಮ್ಮ ಮೊದಲ ಓವರ್‌ ಎಸೆದ ಲಾಕಿ ಫರ್ಗ್ಯೂಸನ್‌, ಕೆಕೆಆರ್‌ಗೆ ಮೊದಲ ಯಶಸ್ಸು ತಂದುಕೊಟ್ಟರು.

  ಸದ್ಯ ತಂಡದ ಮೊತ್ತ 35 ರನ್‌ ಆಗಿದ್ದು, ಸ್ಟೀವ್‌ ಸ್ಮಿತ್‌ (12) ಮತ್ತು ಇನ್ನೂ ಖಾತೆ ತೆರೆಯದ ಶ್ರೇಯಸ್‌ ಅಯ್ಯರ್‌ ಕ್ರೀಸ್‌ನಲ್ಲಿದ್ದಾರೆ.

 • 03:34 pm

  ಮೊದಲ ಓವರ್‌ ಮುಕ್ತಾಯ: ವಿಕೆಟ್‌ ನಷ್ಟವಿಲ್ಲದೆ 5 ರನ್‌ ಗಳಿಸಿದ ಡೆಲ್ಲಿ

  ಸ್ಟೀವ್‌ ಸ್ಮಿತ್‌ (1) ಮತ್ತು ಶಿಖರ್‌ ಧವನ್‌ (4) ಕ್ರೀಸ್‌ನಲ್ಲಿದ್ದಾರೆ.

 • 03:26 pm

  ಪಂದ್ಯಕ್ಕೂ ಮುನ್ನ ಕೋಲ್ಕತ್ತದ ಹರ್ಭಜನ್‌ ಸಿಂಗ್‌ಗೆ ಡೆಲ್ಲಿಯ ಶಿಖರ್‌ ಧವನ್‌ ಅಪ್ಪುಗೆ

 • 03:19 pm
 • 03:12 pm

  ಹನ್ನೊಂದರ ಬಳಗ

  ಎರಡೂ ತಂಡಗಳ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.

  ಡೆಲ್ಲಿ ಪಡೆಯಲ್ಲಿ ಗಾಯಾಳು ಪೃಥ್ವಿ ಶಾ ಬದಲು ಸ್ಟೀವ್‌ ಸ್ಮಿತ್‌ ಸ್ಥಾನ ಪಡೆದಿದ್ದಾರೆ. ಕೆಕೆಆರ್‌ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ಕನ್ನಡಿಗ ವೇಗಿ ಪ್ರಸಿದ್ಧ ಕೃಷ್ಣ ಬದಲು ಸಂದೀಪ್‌ ವಾರಿಯರ್‌ ಮತ್ತು ಆಲ್ರೌಂಡರ್‌ ಆಂಡ್ರೆ ರಸೆಲ್‌ ಬದಲು ಟಿಮ್‌ ಸೌಥಿ ಕಾಣಿಸಿಕೊಳ್ಳಿದ್ದಾರೆ.

 • 03:11 pm

  ಟಾಸ್‌ ಗೆದ್ದ ಕೆಕೆಆರ್‌ ನಾಯಕ ಏಯಾನ್‌ ಮಾರ್ಗನ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.