ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಆಟಗಾರರನ್ನು ಸಾಲ ಪಡೆಯಲು ಇತರೆ ಫ್ರಾಂಚೈಸಿಗಳ ಮೊರೆ ಹೋದ ರಾಜಸ್ಥಾನ್

Last Updated 26 ಏಪ್ರಿಲ್ 2021, 15:01 IST
ಅಕ್ಷರ ಗಾತ್ರ

ನವದೆಹಲಿ: ವಿವಿಧ ಕಾರಣಗಳಿಂದಾಗಿ ನಾಲ್ಕು ಪ್ರಮುಖ ವಿದೇಶಿ ಆಟಗಾರರು ನಿರ್ಗಮಿಸಿರುವ ಹಿನ್ನೆಲೆಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಆಟಗಾರರಅಭಾವಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಆಟಗಾರರನ್ನು ಸಾಲ ಪಡೆಯುವ ನಿಟ್ಟಿನಲ್ಲಿ ಐಪಿಎಲ್‌ನ ಸಹ ಫ್ರಾಂಚೈಸಿಗಳನ್ನು ಸಂಪರ್ಕಿಸಿವೆ.

ಕೋವಿಡ್-19 ಭೀತಿ, ಗಾಯದ ಸಮಸ್ಯೆ ಹಾಗೂ ಬಯೋಬಬಲ್ಸಂಕಷ್ಟದಿಂದಾಗಿ ರಾಜಸ್ಥಾನ್ ತಂಡದ ಶಿಬಿರವನ್ನು ತೊರೆದಿರುವ ನಾಲ್ವರು ವಿದೇಶಿ ಆಟಗಾರರು ಸ್ವದೇಶಕ್ಕೆ ಹಿಂತಿರುಗಿದ್ದಾರೆ.

ಟೂರ್ನಿಗೂ ಮುನ್ನ ಸ್ಟಾರ್ ವೇಗಿ ಜೋಫ್ರಾ ಆರ್ಚರ್ ಗಾಯದ ಸಮಸ್ಯೆಗೆ ಸಿಲುಕಿದ್ದರು. ತದಾ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಆರ್ಚರ್, ಚೇತರಿಸಿಕೊಳ್ಳುತ್ತಿದ್ದು ಐಪಿಎಲ್‌ನಲ್ಲಿ ಭಾಗವಹಿಸುತ್ತಿಲ್ಲ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.

ಮೊದಲ ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ವೇಳೆ ಕೈ ಬೆರಳಿಗೆ ಗಾಯ ಮಾಡಿಕೊಂಡಿರುವ ಬೆನ್ ಸ್ಟೋಕ್ಸ್ ಸೇವೆಯಿಂದಲೂ ರಾಜಸ್ಥಾನ್ ವಂಚಿತವಾಗಿದೆ. ಬಯೋಬಬಲ್ ದಣಿವಿನ ಕಾರಣವನ್ನು ಒಡ್ಡಿರುವ ಲಿಯಾಮ್ ಲಿವಿಂಗ್‌ಸ್ಟೋನ್ ತವರಿಗೆ ಮರಳಿದ್ದಾರೆ. ಇದಕ್ಕೊಂದು ಸೇರ್ಪಡೆಯೆಂಬಂತೆ ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಆಂಡ್ರ್ಯೂ ಟೈ, ಆಸ್ಟ್ರೇಲಿಯಾಕ್ಕೆ ವಾಪಾಸ್ ತೆರಳಲು ನಿರ್ಧರಿಸಿದ್ದಾರೆ.

ರಾಜಸ್ಥಾನ್ ತಂಡವು ಆಟಗಾರರನ್ನು ಸಾಲ ಪಡೆಯುವುದನ್ನು ಎದುರು ನೋಡುತ್ತಿದೆ. ಈ ಕುರಿತಾಗಿ ಇತರೆ ಫ್ರಾಂಚೈಸಿಗಳಿಗೆ ಪತ್ರ ಬರೆಯಲಾಗಿದೆ. ಆದರೆ ಸದ್ಯ ಯಾವುದನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ನಿಕಟ ಮೂಲಗಳು ತಿಳಿಸಿವೆ.

ಐಪಿಎಲ್‌ನಲ್ಲಿ ಬೇರೆ ಫ್ರಾಂಚೈಸಿಗಳಿಂದ ಆಟಗಾರರನ್ನು ಸಾಲ ಪಡೆಯುವ ಪ್ರಕ್ರಿಯೆ ಸೋಮವಾರದಿಂದ ಪ್ರಾರಂಭವಾಗಿದ್ದು, ಈ ಪ್ರಕ್ರಿಯೆ ಲೀಗ್ ಹಂತದಲ್ಲಿ ಮುಕ್ತಾಯವಾಗಲಿದೆ.

ಇದನ್ನೂ ಓದಿ:

ಐಪಿಎಲ್ ನಿಯಮಾವಳಿ ಪ್ರಕಾರ ಪ್ರಸಕ್ತ ಋತುವಿನಲ್ಲಿ ಎರಡು ಪಂದ್ಯಗಳಿಗಿಂತಲೂ ಕಡಿಮೆ ಪಂದ್ಯಗಳನ್ನು ಆಡಿದ ಆಟಗಾರರನ್ನು ಇತರೆ ಫ್ರಾಂಚೈಸಿಗಳು ಸಾಲ ಪಡೆಯಬಹುದಾಗಿದೆ. ಆದರೆ ಆ ನಿರ್ದಿಷ್ಟ ಆಟಗಾರ ಮೂಲ ಫ್ರಾಂಚೈಸಿ ವಿರುದ್ಧ ಆಡಲು ಅರ್ಹರಾಗಿರುವುದಿಲ್ಲ.

ಏತನ್ಮಧ್ಯೆ ಆಡಿರುವ ಐದು ಪಂದ್ಯಗಳಲ್ಲಿ ಎರಡು ಜಯ ಗಳಿಸಿರುವ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್, ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ ಸವಾಲನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT