ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಪುಟಿದೇಳುವ ನಿರೀಕ್ಷೆಯಲ್ಲಿ ಮುಂಬೈ ಇಂಡಿಯನ್ಸ್‌

ಸಂಜು ಸ್ಯಾಮ್ಸನ್–ರೋಹಿತ್ ಶರ್ಮಾ ಮುಖಾಮುಖಿ
Last Updated 28 ಏಪ್ರಿಲ್ 2021, 14:48 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳ ಪರಿಸ್ಥಿತಿ ಒಂದೇ ರೀತಿ ಇದೆ.

ಈ ಸಲದ ಐಪಿಎಲ್‌ ಪಾಯಿಂಟ್ ಪಟ್ಟಿಯಲ್ಲಿ ತಲಾ ನಾಲ್ಕು ಅಂಕಗಳಿಸಿರುವ ಎರಡೂ ತಂಡಗಳು ಗುರುವಾರ ಅರುಣ್ ಜೇಟ್ಲಿ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಉಭಯ ತಂಡಗಳು ಆಡಿರುವ ತಲಾ ಐದು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು, ಮೂರರಲ್ಲಿ ಸೋತಿವೆ.

ರೋಹಿತ್ ಶರ್ಮಾ ನಾಯಕತ್ವದ ಮುಂಬೈ ತಂಡವು ತನ್ನ ಕಳೆದೆರಡೂ ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳ ಎದುರು ಸೋತಿತ್ತು. ರೋಹಿತ್ ಇದುವರೆಗೆ 201 ರನ್‌ ಗಳಿಸಿದ್ದಾರೆ. ಅವರೊಂದಿಗೆ ಇನಿಂಗ್ಸ್ ಆರಂಭಿಸುತ್ತಿರುವ ಕ್ವಿಂಟನ್ ಡಿಕಾಕ್ (47 ರನ್) ಆರಂಭಿಕ ಜೊತೆಯಾಟ ಕಟ್ಟುವಲ್ಲಿ ವಿಫಲರಾಗಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಪಾಂಡ್ಯ ಸಹೋದರರು ಮತ್ತು ಕೀರನ್ ಪೊಲಾರ್ಡ್‌ ತಮ್ಮ ನೈಜ ಸಾಮರ್ಥ್ಯಕ್ಕೆ ತಕ್ಕಂತೆ ಆಡದೇ ಇರುವುದು ತಂಡದ ಹಿನ್ನಡೆಗೆ ಕಾರಣವಾಗಿದೆ.

ಜಸ್‌ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್‌ ಮತ್ತು ಸ್ಪಿನ್ನರ್ ರಾಹುಲ್ ಚಾಹರ್ (9ವಿಕೆಟ್) ಅವರು ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಪೊಲಾರ್ಡ್‌ ಐದು ಅಥವಾ ಆರನೇ ಬೌಲರ್‌ ಆಗಿ ಆಡುತ್ತಿದ್ದಾರೆ. ಈ ಪಂದ್ಯದಲ್ಲಿ ಜಯಂತ್ ಯಾದವ್ ಬದಲಿಗೆ ಆ್ಯಡಂ ಮಿಲ್ನೆ ಸ್ಥಾನ ಪಡೆಯುವ ಸಾಧ್ಯತೆ ಇದೆ.

ರಾಜಸ್ಥಾನ ತಂಡವು ತನ್ನ ಕಳೆದ ಪಂದ್ಯದಲ್ಲಿ ಜಯಿಸಿತ್ತು. ಅದೇ ಲಯವನ್ನು ಮುಂದುವರಿಸುವ ವಿಶ್ವಾಸದಲ್ಲಿದೆ. ಆದರೆ, ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್‌, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಆ್ಯಂಡ್ರ್ಯೂ ಟೈ ಅವರ ಗೈರುಹಾಜರಿ ತಂಡಕ್ಕೆ ಕಾಡುತ್ತಿದೆ. ಬ್ಯಾಟಿಂಗ್‌ನಲ್ಲಿಯೂ ಕೆಲವು ಸಮಸ್ಯೆಗಳು ಇವೆ.

ಆರಂಭಿಕ ಜೋಡಿ ಮನನ್ ವೊಹ್ರಾ ಮತ್ತು ಯಶಸ್ವಿ ಜೈಸ್ವಾಲ್ ಇನ್ನೂ ಲಯ ಕಂಡುಕೊಂಡಿಲ್ಲ. ಜೋಸ್ ಬಟ್ಲರ್ ದೊಡ್ಡ ಮೊತ್ತ ಗಳಿಸುವಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಆಲ್‌ರೌಂಡರ್ ಕ್ರಿಸ್ ಮೊರಿಸ್ (9 ವಿಕೆಟ್ ಮತ್ತು 48 ರನ್) ಅವರ ಮೇಲೆ ತಂಡವು ಭರವಸೆ ಇಡಬಹುದು. ನಾಯಕ ಸಂಜು ಸ್ಯಾಮ್ಸನ್ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳದಿದ್ದರೆ ದೊಡ್ಡ ಮೊತ್ತ ಗಳಿಸುವುದು ಸವಾಲಿನ ಕೆಲಸವಾಗಲಿದೆ.

ಯುವ ಎಡಗೈ ಮಧ್ಯಮವೇಗಿ ಚೇತನ್ ಸಕಾರಿಯಾ (7ವಿಕೆಟ್) ಮತ್ತು ಅನುಭವಿ ಜಯದೇವ್ ಉನದ್ಕತ್ ಹಾಗೂ ಮುಸ್ತಫಿಜುರ್ ರೆಹಮಾನ್ ಬೌಲಿಂಗ್ ವಿಭಾಗವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ. ಕೆಳಕ್ರಮಾಂಕದಲ್ಲಿ ರಾಹುಲ್ ತೆವಾಟಿಯಾ ಮತ್ತು ರಿಯಾನ್ ಪರಾಗ್ ಭರವಸೆಯ ಆಟಗಾರರಾಗಿದ್ದಾರೆ.

ತಂಡಗಳು

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿಕಾಕ್(ವಿಕೆಟ್‌ಕೀಪರ್), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಜಯಂತ್ ಯಾದವ್, ರಾಹುಲ್ ಚಾಹರ್. ಜಸ್‌ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್, ಪಿಯೂಷ್ ಚಾವ್ಲಾ, ಕ್ರಿಸ್ ಲಿನ್, ನೇಥನ್ ಕೌಲ್ಟರ್ ನೈಲ್, ಸೌರಭ್ ತಿವಾರಿ. ಆದಿತ್ಯ ತಾರೆ.

ರಾಜಸ್ಥಾನ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ–ವಿಕೆಟ್‌ಕೀಪರ್), ಜೊಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಶಿವಂ ದುಬೆ, ರಾಹುಲ್ ತೆವಾಟಿಯಾ, ಡೇವಿಡ್ ಮಿಲ್ಲರ್, ರಿಯಾನ್ ಪರಾಗ್, ಕ್ರಿಸ್ ಮೊರಿಸ್, ಜಯದೇವ್ ಉನದ್ಕತ್, ಚೇತನ್ ಸಕಾರಿಯಾ, ಮುಸ್ತಫಿಜುರ್ ರೆಹಮಾನ್, ಮನನ್ ವೊಹ್ರಾ, ಶ್ರೇಯಸ್ ಗೋಪಾಲ್, ಕೆ.ಸಿ. ಕಾರ್ಯಪ್ಪ, ಮಹಿಪಾಲ್ ಲೊಮ್ರೊರ್, ಕಾರ್ತಿಕ್ ತ್ಯಾಗಿ, ಕುಲದೀಪ್ ಯಾದವ್,

ಪಂದ್ಯ ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT