ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಅಂಪೈರ್ ವಿರುದ್ಧ ಆಕ್ರೋಶ ಹೊರ ಹಾಕಿದ ರೋಹಿತ್

Last Updated 24 ಏಪ್ರಿಲ್ 2021, 13:23 IST
ಅಕ್ಷರ ಗಾತ್ರ

ಚೆನ್ನೈ: ತಮ್ಮ ವಿರುದ್ಧ ತಪ್ಪಾಗಿ ಔಟ್ ತೀರ್ಪು ನೀಡಿದ್ದ ಅಂಪೈರ್ ವಿರುದ್ಧ ಮೈದಾನದಲ್ಲೇ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಆಕ್ರೋಶಹೊರ ಹಾಕಿರುವ ಘಟನೆಯು ನಡೆದಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಟ್ವೆಂಟಿ-20 ಟೂರ್ನಿಯಲ್ಲಿ ಶುಕ್ರವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಅಂಪೈರ್ ವಿರುದ್ಧವೇ ಗರಂ ಆದರು.

ಪಂಜಾಬ್ ವೇಗಿ ಹೆನ್ರಿಕ್ಸ್ ಎಸೆದ ಪಂದ್ಯದ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಅಂಪೈರ್ ಔಟ್ ನೀಡಿದ್ದರು. ಆದರೆ ಚೆಂಡು ರೋಹಿತ್ ಬ್ಯಾಟ್ ತಗುಲಿರಲಿಲ್ಲ. ಬೌಲರ್ ಹಾಗೂ ವಿಕೆಟ್ ಕೀಪರ್ ಕೆ.ಎಲ್. ರಾಹುಲ್ ಬಲವಾದ ಮನವಿಯನ್ನು ಪುರಸ್ಕರಿಸಿದ ಅಂಪೈರ್ ಔಟ್ ನೀಡಿದರು.

ತಕ್ಷಣವೇ ರೋಹಿತ್ ಡಿಆರ್‌ಎಸ್ ಮೇಲ್ಮನವಿಗೆ ಮೊರೆ ಹೋದರು. ಆದರೆ ತಾಳ್ಮೆ ಕಳೆದುಕೊಂಡ ಮುಂಬೈ ಕಪ್ತಾನ, ಅಂಪೈರ್‌ನತ್ತ ಕೈ ತೋರಿಸುತ್ತಾ ರೇಗಿಸಿದರು. ಪ್ರಸ್ತುತ ವಿಡಿಯೊ ವೈರಲ್ ಆಗಿದೆ.

ಬಳಿಕ ರಿಪ್ಲೈನಲ್ಲಿ ಚೆಂಡು ರೋಹಿತ್ ತೊಡೆಗೆ ಸವರಿಸುವುದು ಕಂಡು ಬಂದಿದೆ. ಇದರಿಂದಾಗಿ ಮೂರನೇ ಅಂಪೈರ್ ತೀರ್ಪಿನಂತೆ ಫೀಲ್ಡ್ ಅಂಪೈರ್ ತಮ್ಮ ನಿರ್ಧಾರವನ್ನು ಬದಲಾಯಿಸಿ ನಾಟೌಟ್ ಎಂದು ಘೋಷಿಸಿದರು.

ಅಂತಿಮವಾಗಿ ರೋಹಿತ್ ಶರ್ಮಾ ಅರ್ಧಶತಕ (63) ಗಳಿಸಿದರೂ ಮುಂಬೈಗೆ ಪಂದ್ಯ ಗೆಲ್ಲಲು ಸಾಧ್ಯವಾಗಿಲ್ಲ. ನಾಯಕ ಕೆಎಲ್ ರಾಹುಲ್ ಅಜೇಯ ಫಿಫ್ಟಿ (60*) ನೆರವಿನಿಂದ ಪಂಜಾಬ್ ತಂಡವು ಒಂಬತ್ತು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT