ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021 | RCB vs KKR: ಆರ್‌ಸಿಬಿ ತತ್ತರ; ಕೆಕೆಆರ್‌ಗೆ 9 ವಿಕೆಟ್ ಅಂತರದ ಭರ್ಜರಿ ಗೆಲುವು
LIVE

2021ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಅಬುಧಾಬಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೀನಾಯ ಸೋಲಿನ ಮುಖಭಂಗಕ್ಕೊಳಗಾಗಿದೆ. ಆರ್‌ಸಿಬಿ ಒಡ್ಡಿದ 93 ಗುರಿ ಬೆನ್ನಟ್ಟಿದ ಕೆಕೆಆರ್ ಕೇವಲ 10 ಓವರ್‌ಗಳಲ್ಲೇ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
Last Updated 20 ಸೆಪ್ಟೆಂಬರ್ 2021, 17:32 IST
ಅಕ್ಷರ ಗಾತ್ರ
17:3220 Sep 2021

ಈ ಸೋಲಿನ ಹೊರತಾಗಿಯೂ ಮೂರನೇ ಸ್ಥಾನ ಕಾಯ್ದುಕೊಂಡ ಆರ್‌ಸಿಬಿ

ಈ ಸೋಲಿನ ಹೊರತಾಗಿಯೂ ಎಂಟು ಪಂದ್ಯಗಳಲ್ಲಿ 10 ಅಂಕಗಳನ್ನು ಸಂಪಾದಿಸಿರುವ ಆರ್‌ಸಿಬಿ, ಮೂರನೇ ಸ್ಥಾನದಲ್ಲಿ ಮುಂದುವರಿದಿದೆ. ಅತ್ತ ಅಷ್ಟೇ ಪಂದ್ಯಗಳನ್ನು ಆಡಿರುವ ಕೆಕೆಆರ್ ಆರು ಅಂಕಗಳೊಂದಿಗೆ ಐದನೇ ಸ್ಥಾನಕ್ಕೇರಿದೆ. 

17:3120 Sep 2021

ವರುಣ್ ಚಕ್ರವರ್ತಿ ಪಂದ್ಯಶ್ರೇಷ್ಠ

17:1720 Sep 2021

ಆರ್‌ಸಿಬಿ vs ಕೆಕೆಆರ್ ಪಂದ್ಯದ ಸಂಪೂರ್ಣ ವಿವರ ಇಲ್ಲಿದೆ

16:5220 Sep 2021

10 ಓವರ್‌ಗಳಲ್ಲೇ ಗೆಲುವು ದಾಖಲಿಸಿದ ಕೆಕೆಆರ್

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಅಬುಧಾಬಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವು 9 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 

ಕೆಕೆಆರ್ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಆರ್‌ಸಿಬಿ ಕೇವಲ 92 ರನ್ನಿಗೆ ಆಲೌಟ್ ಆಗಿತ್ತು. ಬಳಿಕ ಗುರಿ ಬೆನ್ನಟ್ಟಿದ ಕೋಲ್ಕತ್ತ, 10 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 

ಕೆಕೆಆರ್ ಪರ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಶುಭಮನ್ ಗಿಲ್ (48) ಹಾಗೂ ಚೊಚ್ಚಲ ಪಂದ್ಯವನ್ನಾಡುತ್ತಿರುವ ವೆಂಕಟೇಶ್ ಅಯ್ಯರ್ (41*) ಗಮನ ಸೆಳೆದರು. 

16:3120 Sep 2021

ಪವರ್ ಪ್ಲೇಯಲ್ಲಿ 56 ರನ್ ಪೇರಿಸಿದ ಕೆೆಕೆಆರ್

15:5120 Sep 2021

ರಸೆಲ್, ಚಕ್ರವರ್ತಿಗೆ ತಲಾ ಮೂರು ವಿಕೆಟ್

ಕೋಲ್ಕತ್ತ ನೈಟ್ ರೈಡರ್ಸ್ ಬೌಲರ್‌ಗಳ ನಿಖರ ದಾಳಿಗೆ ಸಿಲುಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 19 ಓವರ್‌ಗಳಲ್ಲಿ ಕೇವಲ ರನ್ನಿಗೆ 92 ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ. ಈ ಮೂಲಕ ಎದುರಾಳಿ ತಂಡಕ್ಕೆ 93 ರನ್‌ಗಳ ಸುಲಭ ಗೆಲುವಿನ ಗುರಿಯನ್ನು ಒಡ್ಡಿದೆ. 

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ಆರಂಭ ಉತ್ತಮವಾಗಿರಲಿಲ್ಲ. ಆರ್‌ಸಿಬಿ ಪರ ದಾಖಲೆಯ 200ನೇ ಪಂದ್ಯ ಆಡುತ್ತಿರುವ ನಾಯಕ ವಿರಾಟ್ ಕೊಹ್ಲಿ ಕೇವಲ 5 ರನ್ ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. 

ದೇವದತ್ತ ಪಡಿಕ್ಕಲ್ (22), ಚೊಚ್ಚಲ ಪಂದ್ಯ ಆಡುತ್ತಿರುವ ಕೆ.ಎಸ್. ಭರತ್ (16) ಸಹ ಹೆಚ್ಚು ಹೊತ್ತು ನಿಲ್ಲನಿಲ್ಲ. ಇದಾದ ಬೆನ್ನಲ್ಲೇ ಆ್ಯಂಡ್ರೆ ರಸೆಲ್ ದಾಳಿಗೆ ಕ್ಲೀನ್ ಬೌಲ್ಡ್ ಆದ ಎಬಿ ಡಿವಿಲಿಯರ್ಸ್ ಖಾತೆ ತೆರೆಯಲಾಗದೇ ಪೆವಿಲಿಯನ್‌ಗೆ ಮರಳಿದರು. 

10 ಓವರ್‌ಗಳ ಅಂತ್ಯಕ್ಕೆ 54 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 

ಇದಾದ ಬಳಿಕವು ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಇನ್ನಿಂಗ್ಸ್‌ನ 12ನೇ ಓವರ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ (10) ಹಾಗೂ ವನಿಂದು ಹಸರಂಗಾ (0) ಹೊರದಬ್ಬಿದ ವರುಣ್ ಚಕ್ರವರ್ತಿ ಡಬಲ್ ಆಘಾತ ನೀಡಿದರು. ಇದರೊಂದಿಗೆ 63 ರನ್ನಿಗೆ ಆರು ವಿಕೆಟ್ ಕಳೆದುಕೊಂಡಿತು. ಈ ಪೈಕಿ ಐಪಿಎಲ್‌ಗೆ ಪದಾರ್ಪಣೆ ಮಾಡಿರುವ ಹಸರಂಗಾ ಮೊದಲ ಎಸೆತದಲ್ಲೇ ಔಟಾದರು. 

ಸಚಿನ್ ಬೇಬಿ (7) ಕೂಡ ಚಕ್ರವರ್ತಿ ಬಲೆಗೆ ಬಿದ್ದರು. ಇನ್ನುಳಿದಂತೆ ಕೈಲ್ ಜೇಮಿಸನ್ (4), ಹರ್ಷಲ್ ಪಟೇಲ್ (12), ಮೊಹಮ್ಮದ್ ಸಿರಾಜ್ (8) ಹಾಗೂ ಯಜುವೇಂದ್ರ ಚಾಹಲ್ (2*) ರನ್ ಗಳಿಸಿದರು. 

ಅಂತಿಮವಾಗಿ 92 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಕೆಕೆಆರ್ ಪರ ವರುಣ್ ಚಕ್ರವರ್ತಿ ಹಾಗೂ ಆ್ಯಂಡ್ರೆ ರಸೆಲ್ ತಲಾ ಮೂರು ವಿಕೆಟ್‌, ಲಾಕಿ ಫರ್ಗ್ಯುಸನ್ ಎರಡು ಮತ್ತು ಪ್ರಸಿದ್ಧ ಕೃಷ್ಣ ಒಂದು ವಿಕೆಟ್ ಪಡೆದರು. 
 

15:4420 Sep 2021

ರಸೆಲ್, ಚಕ್ರವರ್ತಿ ಮಾರಕ ದಾಳಿಗೆ ತತ್ತರಿಸಿದ ಆರ್‌ಸಿಬಿ

ಕೋಲ್ಕತ್ತ ನೈಟ್ ರೈಡರ್ಸ್ ಬೌಲರ್‌ಗಳ ನಿಖರ ದಾಳಿಗೆ ಸಿಲುಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 19 ಓವರ್‌ಗಳಲ್ಲಿ ಕೇವಲ ರನ್ನಿಗೆ 92 ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ. ಈ ಮೂಲಕ ಎದುರಾಳಿ ತಂಡಕ್ಕೆ 93 ರನ್‌ಗಳ ಸುಲಭ ಗೆಲುವಿನ ಗುರಿಯನ್ನು ಒಡ್ಡಿದೆ. 

15:2320 Sep 2021

ರಸೆಲ್ ಮ್ಯಾಜಿಕ್ ಬಾಲ್; ವಿಲಿಯರ್ಸ್ ಫಸ್ಟ್ ಬಾಲ್ ಡಕ್

15:1320 Sep 2021

ವರುಣ್ ಚಕ್ರವರ್ತಿ ಸ್ಪಿನ್ ಮೋಡಿ

 ಇನ್ನಿಂಗ್ಸ್‌ನ 12ನೇ ಓವರ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ (10) ಹಾಗೂ ವನಿಂದು ಹಸರಂಗಾ (0) ಹೊರದಬ್ಬಿದ ವರುಣ್ ಚಕ್ರವರ್ತಿ ಡಬಲ್ ಆಘಾತ ನೀಡಿದರು. ಇದರೊಂದಿಗೆ 63 ರನ್ನಿಗೆ ಆರು ವಿಕೆಟ್ ಕಳೆದುಕೊಂಡಿತು. ಈ ಪೈಕಿ ಐಪಿಎಲ್‌ಗೆ ಪದಾರ್ಪಣೆ ಮಾಡಿರುವ ಹಸರಂಗಾ ಮೊದಲ ಎಸೆತದಲ್ಲೇ ಔಟಾದರು.