ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021 | SRH vs DC: ಡೆಲ್ಲಿಗೆ ಪೃಥ್ವಿ ಶಾ ಅರ್ಧಶತಕದ ಆಸರೆ

Last Updated 25 ಏಪ್ರಿಲ್ 2021, 16:14 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಸುಂದರ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಹೋರಾಟದ ಮೊತ್ತ ಗಳಿಸಿತು.

ಚೆಪಾಕ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ತಂಡವು ಸನ್‌ರೈಸರ್ಸ್‌ ಹೈದರಾಬಾದ್ ಎದುರು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 159 ರನ್ ಗಳಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ತಂಡಕ್ಕೆ ಪೃಥ್ವಿ (53; 39ಎ) ಮತ್ತು ಶಿಖರ್ ಧವನ್ (28, 26ಎ) ಮೊದಲ ವಿಕೆಟ್ ಜೊತೆಯಾಟದಲ್ಲಿ 81 ರನ್‌ಗಳನ್ನು ಸೇರಿಸಿ ಉತ್ತಮ ಆರಂಭ ನೀಡಿದರು.

11ನೇ ಓವರ್‌ನಲ್ಲಿ ಶಿಖರ್ ಧವನ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದ ಸ್ಪಿನ್ನರ್ ರಶೀದ್ ಖಾನ್ ಜೊತೆಯಾಟವನ್ನು ಮುರಿದರು. ನಂತರದ ಓವರ್‌ನಲ್ಲಿ ಖಲೀಲ್ ಅಹಮದ್ ಮತ್ತು ಜೆ. ಸುಚಿತ್ ಅವರ ಚುರುಕಿನ ಫೀಲ್ಡಿಂಗ್‌ನಿಂದಾಗಿ ಪೃಥ್ವಿ ರನ್‌ಔಟಾದರು. 135.90ರ ಸ್ಟ್ರೈಕ್‌ರೇಟ್‌ನಲ್ಲಿ ಪೃಥ್ವಿ ಅರ್ಧಶತಕ ಗಳಿಸಿದರು.

ತಂಡದ ನಾಯಕ ರಿಷಭ್ ಪಂತ್ (37; 27ಎ) ಮತ್ತು ಸ್ಟೀವ್ ಸ್ಮಿತ್ (ಔಟಾಗದೆ 34) ಮೂರನೇ ವಿಕೆಟ್ ಜೊತೆಯಾಟದಲ್ಲಿ 58 ರನ್‌ಗಳನ್ನು ಸೇರಿಸಿದರು. ಸನ್‌ರೈಸರ್ಸ್ ತಂಡದ ಮಧ್ಯಮವೇಗಿ ಸಿದ್ಧಾರ್ಥ್ ಕೌಲ್ 19ನೇ ಓವರ್‌ನಲ್ಲಿ ರಿಷಭ್ ಮತ್ತು ಶಿಮ್ರೊನ್ ಹೆಟ್ಮೆಯರ್ ಅವರ ವಿಕೆಟ್‌ಗಳನ್ನು ಗಳಿಸಿದರು. ಇದರಿಂದಾಗಿ ಡೆಲ್ಲಿ ಖಾತೆಗೆ ಮತ್ತಷ್ಟು ರನ್‌ಗಳು ಹರಿದುಬರುವ ಅವಕಾಶ ತಪ್ಪಿತು.

ಹೈದರಾಬಾದ್‌ ತಂಡದಲ್ಲಿರುವ ಕನ್ನಡಿಗ ಜೆ. ಸುಚಿತ್ ನಾಲ್ಕು ಓವರ್ ಬೌಲಿಂಗ್ ಮಾಡಿ 21 ರನ್‌ ನೀಡಿದರು. ವಿಕೆಟ್ ಪಡೆಯದಿದ್ದರೂ ಉಳಿದೆಲ್ಲ ಬೌಲರ್‌ಗಳಿಗಿಂತ ಕಡಿಮೆ ರನ್‌ಗಳನ್ನು ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT