ಭಾನುವಾರ, ಅಕ್ಟೋಬರ್ 17, 2021
23 °C

IPL 2021 | ಅಂಪೈರಿಂಗ್ ಲೋಪಗಳಿಗೆ ಗಾವಸ್ಕರ್ ಕಿಡಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಐಪಿಎಲ್ ಟೂರ್ನಿಯಲ್ಲಿ  ಆಗುತ್ತಿರುವ ಅಂಪೈರಿಂಗ್ ಲೋಪಗಳ ಬಗ್ಗೆ ಭಾರತ ತಂಡದ ಮಾಜಿ ನಾಯಕ ಸುನೀಲ್ ಗಾವಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯದಲ್ಲಿ ಅಂಪೈರ್ ಅನಿಲ್ ಚೌಧರಿ ಅವರು  ನೋಬಾಲ್ ತೀರ್ಪು ಬದಲಿಸಿ ವೈಡ್ ಬಾಲ್ ನೀಡಿದ್ದರು. ಈ ಕುರಿತು ಸ್ಟಾರ್‌ ಸ್ಪೋರ್ಟ್ಸ್‌ ವೀಕ್ಷಕ ವಿವರಣೆಯಲ್ಲಿ ಗಾವಸ್ಕರ್ ಕಿಡಿ ಕಾರಿದ್ದಾರೆ.

‘ಆ ಎಸೆತವು ನೋಬಾಲ್ ಆಗಿರುವುದು ಸ್ಪಷ್ಟವಾಗಿತ್ತು. ಈ ಹಿಂದೆ ಟಿವಿ ಅಂಪೈರ್‌ಗಳು  ಕೆಲವು ತೀರ್ಪುಗಳು ಸೋಲು–ಗೆಲುವು ನಿರ್ಧರಿಸುವ ಮಟ್ಟಿಗೆ ಪರಿಣಾಮ ಬೀರಿದ್ದಿದೆ. ಆದ್ದರಿಂದ ಇಂತಹ ತಪ್ಪುಗಳು ನಡೆಯಬಾರದು’ ಎಂದಿದ್ದಾರೆ.

ಪಂದ್ಯದಲ್ಲಿ ಡ್ವೇನ್ ಬ್ರಾವೊ ಹಾಕಿದ್ದ ಆ ಎಸೆತವು ಆಫ್‌ಸ್ಟಂಪಿನಾಚೆ ಪುಟಿದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು