ಭಾನುವಾರ, ಅಕ್ಟೋಬರ್ 24, 2021
29 °C

IPL 2021: ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕನ್ನಡಿಗ ಸುಚಿತ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕದ ಜಗದೀಶ ಸುಚಿತ್, ಗಾಳಿಯಲ್ಲಿ ಹಾರಿ ಎಡಗೈಯಲ್ಲಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ.

ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿರುವ ಸುಚಿತ್, ಶನಿವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಜಾದೂ ಮೆರೆದರು.

ಇದನ್ನೂ ಓದಿ: 

 

 

 

ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದರೂ ಬದಲಿ ಆಟಗಾರನಾಗಿ ಫೀಲ್ಡಿಂಗ್‌ಗಾಗಿ ಮೈದಾನಕ್ಕಿಳಿದ ಸುಚಿತ್, ಜೇಸನ್ ಹೋಲ್ಡರ್ ದಾಳಿಯಲ್ಲಿ ಗಾಳಿಯಲ್ಲಿ ಹಾರಿ ಎಡಗೈಯಲ್ಲಿ ಅದ್ಭುತ ಕ್ಯಾಚ್ ಹಿಡಿದರು. ಈ ಮೂಲಕ ಮೋಡಿ ಮಾಡಿದರು. 

 

ಪರಿಣಾಮ 13 ರನ್ ಗಳಿಸಿದ ದೀಪಕ್ ಹೂಡಾ ಔಟ್ ಆಗಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಬೇಕಾಯಿತು.

 

 

 

ಇದೇ ಪಂದ್ಯದಲ್ಲಿ ಸಂದೀಪ್ ಶರ್ಮಾ ತಮ್ಮದೇ ದಾಳಿಯಲ್ಲಿ ರಿಟರ್ನ್ ಕ್ಯಾಚ್ ಹಿಡಿಯುವ ಮೂಲಕ ಮಿಂಚಿದರು.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು