ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ಅಹಮದಾಬಾದ್ ಫ್ರಾಂಚೈಸಿ ತಂಡಕ್ಕೆ ‘ಗುಜರಾತ್ ಟೈಟನ್ಸ್’ ಎಂದು ನಾಮಕರಣ

Last Updated 9 ಫೆಬ್ರುವರಿ 2022, 10:25 IST
ಅಕ್ಷರ ಗಾತ್ರ

ನವದೆಹಲಿ:ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಅಹಮದಾಬಾದ್ ಫ್ರ್ಯಾಂಚೈಸ್‌ ತಂಡಕ್ಕೆ ಗುಜರಾತ್ ಟೈಟನ್ಸ್‌ ಎಂದು ನಾಮಕರಣ ಮಾಡಲಾಗಿದೆ.

ಸಿವಿಸಿ ಕ್ಯಾಪಿಟಲ್ ಕಂಪೆನಿಯು ಈ ತಂಡದ ಮಾಲೀಕತ್ವ ಹೊಂದಿದೆ. ಇತ್ತೀಚೆಗೆ ಭಾರತ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

‘ಭಾರತದ ಕ್ರಿಕೆಟ್‌ಗೆ ಗುಜರಾತ್ ರಾಜ್ಯವು ಹಲವಾರು ಆಟಗಾರರನ್ನು ಕಾಣಿಕೆಯಾಗಿ ನೀಡಿದೆ. ಇಲ್ಲಿಯ ಕ್ರಿಕೆಟ್ ಪರಂಪರೆಯನ್ನು ಗೌರವಿಸುವುದು ನಮ್ಮ ಕರ್ತವ್ಯ ಮತ್ತು ಹೆಮ್ಮೆಯ ವಿಷಯ. ಆದ್ದರಿಂದ ತಂಡಕ್ಕೆ ರಾಜ್ಯದ ಹೆಸರು ಕೊಡುತ್ತಿದ್ದೇವೆ’ ಎಂದು ಬುಧವಾರ ಫ್ರ್ಯಾಂಚೈಸಿಯು ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

‘ಐಪಿಎಲ್‌ನಲ್ಲಿ ನಮ್ಮ ತಂಡವು ಉನ್ನತ ಸಾಧನೆಗಳನ್ನು ಮಾಡಬೇಕು ಎಂಬುದು ನಮ್ಮ ಹಾರೈಕೆ. ಗುಜರಾತ್‌ ರಾಜ್ಯಕ್ಕೆ ಕೀರ್ತಿ ತರುವಂತಹ ಕಾರ್ಯ ನಡೆಯಬೇಕು’ ಎಂದು ಫ್ರ್ಯಾಂಚೈಸಿಯ ಪ್ರತಿನಿಧಿ ಸಿದ್ಧಾರ್ಥ್ ಪಟೇಲ್ ಹೇಳಿದ್ದಾರೆ.

ಗುಜರಾತ್ ಟೈಟನ್ಸ್‌ ತಂಡವು ಪಾಂಡ್ಯ ಜೊತೆಗೆ ಯುವ ಬ್ಯಾಟರ್ ಶುಭಮನ್ ಗಿಲ್ ಮತ್ತು ಅಫ್ಗಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.

ಭಾರತ ತಂಡದ ಮಾಜಿ ವೇಗಿ ಆಶಿಶ್ ನೆಹ್ರಾ ಅವರು ಮುಖ್ಯ ಕೋಚ್ ಮತ್ತು ವಿಕ್ರಂ ಸೋಳಂಕಿ ನಿರ್ದೇಶಕರಾಗಿದ್ದಾರೆ. ದಕ್ಷಿಣ ಆಫ್ರಿಕಾದ ಅನುಭವಿ ಕೋಚ್ ಗ್ಯಾರಿ ಕರ್ಸ್ಟನ್ ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿದ್ದಾರೆ.

‘ಮೇಗಾ ಹರಾಜು ಪ್ರಕ್ರಿಯೆ ಸಮೀಪಿಸುತ್ತಿದೆ. ಪ್ರತಿಭಾವಂತ ಮತ್ತು ತಂಡದಲ್ಲಿ ಉತ್ತಮ ಹೊಂದಾಣಿಕೆಯೊಂದಿಗೆ ಆಡುವ ಆಟಗಾರರನ್ನು ಆಯ್ಕೆ ಮಾಡುವ ವಿಶ್ವಾಸವಿದೆ’ ಎಂದು ಪಟೇಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT