ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ಅಹಮದಾಬಾದ್‌ಗೆ ಹಾರ್ದಿಕ್ ಪಾಂಡ್ಯ, ಲಖನೌಗೆ ಕೆ.ಎಲ್.ರಾಹುಲ್ ನಾಯಕ

Last Updated 22 ಜನವರಿ 2022, 6:56 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಋತುವಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಟೂರ್ನಿಗೆ ಸೇರ್ಪಡೆಯಾಗಲಿರುವ ಎರಡು ಹೊಸ ತಂಡಗಳ ನಾಯಕರ ಆಯ್ಕೆ ಈಗ ಅಧಿಕೃತಗೊಂಡಿದೆ. ಅಹಮದಾಬಾದ್ ತಂಡಕ್ಕೆ ಹಾರ್ದಿಕ್ ಪಾಂಡ್ಯ, ಲಖನೌ ತಂಡ್ಕೆ ಕೆ.ಎಲ್.ರಾಹುಲ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.

ಮೆಗಾ ಹರಾಜಿಗೂ ಮುನ್ನ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಉಭಯ ಫ್ರಾಂಚೈಸ್‌ಗಳಿಗೆ ಅವಕಾಶ ನೀಡಲಾಗಿತ್ತು. ಇದೀಗ ಎರಡೂ ತಂಡಗಳು ನಾಯಕ ಯಾರೆಂಬುದನ್ನು ಅಂತಿಮಗೊಳಿಸಿವೆ.

ಅಹಮದಾಬಾದ್ ತಂಡವು ಹಾರ್ದಿಕ್ ಪಾಂಡ್ಯ ಮತ್ತು ಅಫ್ಗಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಅವರನ್ನು ತಲಾ ₹15 ಕೋಟಿ ಮೊತ್ತಕ್ಕೆ ಖರೀದಿ ಮಾಡಿವೆ. ಶುಭಮನ್ ಗಿಲ್ ಅವರನ್ನು ₹7 ಕೋಟಿಗೆ ಖರೀದಿಸಿದೆ. ಈ ವಿಚಾರವನ್ನು ಫ್ರಾಂಚೈಸ್‌ನ ಕ್ರಿಕೆಟ್ ನಿರ್ದೇಶಕ ವಿಕ್ರಂ ಸೋಲಂಕಿ ‘ಸ್ಟಾರ್ ಸ್ಪೋರ್ಟ್ಸ್’ ಮೂಲಕ ಘೋಷಿಸಿದ್ದಾರೆ.

ಆರ್‌ಪಿಎಸ್‌ಜಿ ಸಮೂಹದ ಒಡೆತನದ ಲಖನೌ ಫ್ರಾಂಚೈಸ್‌ ಕೆ.ಎಲ್‌.ರಾಹುಲ್ ಅವರನ್ನು ₹17 ಕೋಟಿ ಮೊತ್ತಕ್ಕೆ ಖರೀದಿಸಿದೆ. ಆಸ್ಟ್ರೇಲಿಯಾದ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಅವರನ್ನು ₹9.2 ಕೋಟಿ ಹಾಗೂ ರವಿ ಬಿಷ್ಣೋಯಿ ಅವರನ್ನು ₹4 ಕೋಟಿಗೆ ಖರೀದಿಸಿದೆ.

ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಫೆಬ್ರುವರಿ 12 ಹಾಗೂ 13ರಂದು ನಡೆಯುವ ನಿರೀಕ್ಷೆ ಇದೆ.

ಈ ಮಧ್ಯೆ, ಟೂರ್ನಿಯ ಆಯೋಜನೆ ಕುರಿತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಐಪಿಎಲ್ ಫ್ರಾಂಚೈಸ್‌ ಮಾಲೀಕರು ಇಂದು (ಶನಿವಾರ) ಚರ್ಚಿಸಲಿದ್ದಾರೆ. ವರ್ಚುವಲ್ ಆಗಿ ಸಭೆ ನಡೆಯಲಿದೆ ಎಂದು ಮಂಡಳಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT