ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಐ ಲವ್‌ ಆರ್‌ಸಿಬಿ' ಟ್ರೆಂಡ್‌: ಇಷ್ಟಪಡಲು ಕಾರಣವೇನೆಂದು ಅಭಿಮಾನಿಗಳಿಂದ ಬಹಿರಂಗ

ಅಕ್ಷರ ಗಾತ್ರ

ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಶುಕ್ರವಾರ ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ಸವಾಲನ್ನು ಎದುರಿಸುತ್ತಿದೆ.

ಇದಕ್ಕೂ ಕೆಲವು ತಾಸಿಗೂ ಮುನ್ನ ಟ್ವಿಟರ್‌ನಲ್ಲಿ 'ಐ ಲವ್ ಆರ್‌ಸಿಬಿ' ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿವೆ.

ಅಭಿಮಾನಿಗಳು ಆರ್‌ಸಿಬಿ ಪರ ಪ್ರೀತಿ, ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಆಟಗಾರರನ್ನು ಶ್ಲಾಘಿಸಿದ್ದಾರೆ.

ಅಲ್ಲದೆ ಆರ್‌ಸಿಬಿ ತಂಡವನ್ನು ಇಷ್ಟಪಡಲು ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಐಪಿಎಲ್‌ನಲ್ಲಿ ಚೊಚ್ಚಲ ಕಿರೀಟ ಎದುರು ನೋಡುತ್ತಿರುವ ಆರ್‌ಸಿಬಿ, ಲೀಗ್ ಹಂತದಲ್ಲಿ ಕೊನೆಯ ಎರಡು ಪಂದ್ಯಗಳಲ್ಲಿ ಜಯಿಸಿದರೆ ಪ್ಲೇ-ಆಫ್ ಪ್ರವೇಶ ಸುಗಮವಾಗಲಿದೆ.

ಹಾಗೊಂದು ವೇಳೆ ಪಂಜಾಬ್ ವಿರುದ್ಧ ಸೋತರೆ ಕೊನೆಯ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಲಿದೆ. ಆರ್‌ಸಿಬಿ ತನ್ನ ಕೊನೆಯ ಪಂದ್ಯದಲ್ಲಿ ಮೇ 19ರಂದು ಗುಜರಾತ್ ಟೈಟನ್ಸ್ ಸವಾಲನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT