ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

40ರ ಹರೆಯದಲ್ಲಿ ಧೋನಿಗೆ ಕಪ್ತಾನಗಿರಿ; ರಾಕಿ ಭಾಯ್ ಶೈಲಿಯಲ್ಲಿ ಗುಣಗಾನ!

Last Updated 30 ಏಪ್ರಿಲ್ 2022, 15:29 IST
ಅಕ್ಷರ ಗಾತ್ರ

ಮುಂಬೈ: 40ರ ಹರೆಯದಲ್ಲಿ ಮಹೇಂದ್ರ ಸಿಂಗ್ ಧೋನಿಗೆ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ಜವಾಬ್ದಾರಿ ಲಭಿಸಿದೆ. ಇದು ಧೋನಿ ಅಭಿಮಾನಿಗಳಲ್ಲಿ ಅಪಾರ ಸಂತಸಕ್ಕೆ ಕಾರಣವಾಗಿದ್ದು, ಟ್ವಿಟರ್‌ನಲ್ಲಿ ಗುಣಗಾನ ಮಾಡಿದ್ದಾರೆ.

ಕೆಜಿಎಫ್ 2 ಸಿನಿಮಾದ ರಾಕಿ ಭಾಯ್ ಅವರ ಜನಪ್ರಿಯ 'ವೈಲೆನ್ಸ್ ವೈಲೆನ್ಸ್ ವೈಲೆನ್ಸ್' ಡೈಲಾಗ್‌ನಲ್ಲಿ ಧೋನಿಗೆ ಮತ್ತೆ ನಾಯಕತ್ವ ಜವಾಬ್ದಾರಿ ಲಭಿಸಿರುವುದನ್ನು ಕೊಂಡಾಡಿದ್ದಾರೆ.

'ಕ್ಯಾಪ್ಟೆನ್ಸಿ ಕ್ಯಾಪ್ಟೆನ್ಸಿ ಕ್ಯಾಪ್ಟೆನ್ಸಿ...ಐ ಅವಾಯ್ಡ್, ಬಟ್ ಕ್ಯಾಪ್ಟೆನ್ಸಿ, ಲೈಕ್ಸ್ ಮಿ...ಐ ಕಾಂಟ್ ಅವಾಯ್ಡ್' ಎಂದು ಯಶ್ ಚಿತ್ರವನ್ನುಧೋನಿಗೆ ಹೋಲಿಕೆ ಮಾಡಿ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.

ಈ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಮತ್ತೆ ಮಹೇಂದ್ರ ಸಿಂಗ್ ಧೋನಿ ಅವರಿಗೆ ರವೀಂದ್ರ ಜಡೇಜ ಹಸ್ತಾಂತರಿಸಿದ್ದರು. ಈ ಕುರಿತು ಫ್ರಾಂಚೈಸ್ ಅಧಿಕೃತ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT