ಶುಕ್ರವಾರ, ಮೇ 20, 2022
26 °C

IPL 2022: ಐಪಿಎಲ್ ಆಯೋಜಿಸಲು ದಕ್ಷಿಣ ಆಫ್ರಿಕಾದಿಂದ ಬಿಸಿಸಿಐಗೆ ಪ್ರಸ್ತಾವ – ವರದಿ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಕೇಪ್‌ಟೌನ್: ಈ ವರ್ಷದ ಐಪಿಎಲ್‌ ಟೂರ್ನಿ ಎಲ್ಲಿ ನಡೆಯಲಿದೆ ಎಂಬುದನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇನ್ನೂ ಘೋಷಿಸಿಲ್ಲ. ಭಾರತದಲ್ಲಿ ಟೂರ್ನಿ ಆಯೋಜಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಅನಿವಾರ್ಯವಾದರೆ ಯುಎಇ ಹಾಗೂ ದಕ್ಷಿಣ ಆಫ್ರಿಕಾವನ್ನು ಪರಿಗಣಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಈ ಮಧ್ಯೆ, ಐಪಿಎಲ್ ಟೂರ್ನಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸುವ ಬಗ್ಗೆ ಅಲ್ಲಿನ ಕ್ರಿಕೆಟ್ ಸಂಸ್ಥೆ ಬಿಸಿಸಿಐಗೆ ಪ್ರಸ್ತಾವ ಕಳುಹಿಸಿದೆ ಎಂದು ವರದಿಯಾಗಿದೆ.

ಕನಿಷ್ಠ ವಿಮಾನ ಪ್ರಯಾಣಗಳು ಇರುವಂಥ ಹಾಗೂ ಫ್ರಾಂಚೈಸಿಗಳಿಗೆ ವೆಚ್ಚ ಕಡಿಮೆಯಾಗುವಂಥ ಪ್ರದೇಶಗಳನ್ನು ಟೂರ್ನಿಗೆ ಆಯ್ಕೆ ಮಾಡುವ ಬಗ್ಗೆ ಬಿಸಿಸಿಐ ಮತ್ತು ‘ಕ್ರಿಕೆಟ್ ಸೌತ್ ಆಫ್ರಿಕಾ (ಸಿಎಸ್‌ಎ)’ ಮಧ್ಯೆ ಮಾತುಕತೆ ನಡೆಯುತ್ತಿದೆ ಎಂದು ‘ಕ್ರಿಕ್‌ಬಜ್ ಡಾಟ್ ಕಾಂ’ ವರದಿ ಮಾಡಿದೆ.

ಐಪಿಎಲ್ ಟೂರ್ನಿ ಆಯೋಜಿಸುವ ಸ್ಥಳದ ಬಗ್ಗೆ ಫೆಬ್ರುವರಿ 20ರ ವೇಳೆಗೆ ನಿರ್ಧಾರ ಪ್ರಕಟಿಸುವುದಾಗಿ ಫ್ರಾಂಚೈಸ್‌ಗಳಿಗೆ ಬಿಸಿಸಿಐ ತಿಳಿಸಿತ್ತು.

ಭಾರತ ತಂಡವು ಇತ್ತೀಚೆಗಷ್ಟೇ ಕೋವಿಡ್, ಬಯೋ ಬಬಲ್ ಉಲ್ಲಂಘನೆಯಂಥ ಯಾವುದೇ ಸಮಸ್ಯೆ ಇಲ್ಲದೆ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿಗಳನ್ನು ಆಡಿದೆ. ದಕ್ಷಿಣ ಆಫ್ರಿಕಾದ ಮೇಲೆ ನಂಬಿಕೆ ಇರಿಸಿ ತಂಡವನ್ನು ಕಳುಹಿಸಿಕೊಟ್ಟಿದ್ದಕ್ಕಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಸಿಎಸ್‌ಎ ಧನ್ಯವಾದ ಸಲ್ಲಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು