ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುನಿಲ್ ನಾರಾಯಣ್ ಐಪಿಎಲ್‌ನಲ್ಲಿ 150 ವಿಕೆಟ್ ಪಡೆದ ಮೊದಲ ವಿದೇಶಿ ಸ್ಪಿನ್ನರ್

Last Updated 29 ಏಪ್ರಿಲ್ 2022, 13:59 IST
ಅಕ್ಷರ ಗಾತ್ರ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಇತಿಹಾಸದಲ್ಲೇ 150 ವಿಕೆಟ್ ಗಳಿಸಿದ ಮೊದಲ ವಿದೇಶಿ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಸುನಿಲ್ ನಾರಾಯಣ್ ಭಾಜನರಾಗಿದ್ದಾರೆ.

ಒಟ್ಟಾರೆಯಾಗಿ ಐಪಿಎಲ್‌ನಲ್ಲಿ 150 ವಿಕೆಟ್ ಗಳಿಸಿದ ಒಂಬತ್ತನೇ ಬೌಲರ್ ಹಾಗೂ ಮೂರನೇ ವಿದೇಶಿ ಬೌಲರ್ ಎನಿಸಿದ್ದಾರೆ.

ಈ ಪಟ್ಟಿಯಲ್ಲಿ ಡ್ವೇನ್ ಬ್ರಾವೊ (181) ಮುನ್ನಡೆಯಲ್ಲಿದ್ದು, ಲಸಿತ್ ಮಾಲಿಂಗ (170) ಎರಡನೇ ಸ್ಥಾನದಲ್ಲಿದ್ದಾರೆ.

143ನೇ ಪಂದ್ಯದಲ್ಲಿ (142 ಇನ್ನಿಂಗ್ಸ್) ನಾರಾಯಣ್, ಈ ಸಾಧನೆ ಮಾಡಿದ್ದಾರೆ.

ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ನಾರಾಯಣ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಮರಣೀಯ ಸಾಧನೆ ಮಾಡಿದರು.

ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್‌ಗಳ ಪಟ್ಟಿ:
ಡ್ವೇನ್ ಬ್ರಾವೊ: 181
ಲಸಿತ್ ಮಾಲಿಂಗ: 170
ಅಮಿತ್ ಮಿಶ್ರಾ: 166
ಯಜುವೇಂದ್ರ ಚಾಹಲ್: 157
ಪಿಯೂಷ್ ಚಾವ್ಲಾ: 157
ಆರ್. ಅಶ್ವಿನ್: 152
ಭುವನೇಶ್ವರ್ ಕುಮಾರ್: 151
ಸುನಿಲ್ ನಾರಾಯಣ್: 150
ಹರಭಜನ್ ಸಿಂಗ್: 150

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT