ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ಗೋಲ್ಡನ್ ಡಕ್ ಕುರಿತು ಮೌನ ಮುರಿದ ಕೊಹ್ಲಿ

ಅಕ್ಷರ ಗಾತ್ರ

ಮುಂಬೈ: ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟರ್ ವಿರಾಟ್ ಕೊಹ್ಲಿ ಕಳಪೆ ಲಯದಲ್ಲಿದ್ದು, ಮೂರು ಬಾರಿ ಗೋಲ್ಡನ್ ಡಕ್ ಔಟ್ ಆಗಿದ್ದಾರೆ.

ಈ ಕುರಿತು ಮೌನ ಮುರಿದಿರುವ ಕೊಹ್ಲಿ, 'ನನ್ನ ವೃತ್ತಿ ಜೀವನದಲ್ಲಿ ಹಿಂದೆಂದೂ ಹೀಗೆ ಆಗಿರಲಿಲ್ಲ. ಹಾಗಾಗಿ ನಾನು ಮುಗುಳ್ನಕ್ಕೆ. ನನಗನಿಸುತ್ತಿದೆ, ಈ ಆಟದಲ್ಲಿ ಎಲ್ಲವನ್ನು ಅನುಭವಿಸಿದ್ದೇನೆ' ಎಂದು ಹೇಳಿದ್ದಾರೆ.

ಐಪಿಎಲ್ ವೃತ್ತಿಜೀವನದಲ್ಲಿ ವಿರಾಟ್ ಒಟ್ಟು ಆರು ಬಾರಿ ಗೋಲ್ಡನ್ ಡಕ್ ಔಟ್ ಆಗಿದ್ದಾರೆ. ಈ ಪೈಕಿ ಐಪಿಎಲ್ 2022 ಆವೃತ್ತಿಯಲ್ಲೇ ಮೂರು ಸಲ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟ್ ಆಗಿದ್ದಾರೆ.

ಟೂರ್ನಿಯಲ್ಲಿ ಇದುವರೆಗೆ ವಿರಾಟ್ ಕೊಹ್ಲಿ ಆಡಿದ 12 ಪಂದ್ಯಗಳಲ್ಲಿ ಒಂದು ಅರ್ಧಶತಕ ಸೇರಿದಂತೆ 216 ರನ್ ಗಳಿಸಿದ್ದಾರೆ.

ಕೊಹ್ಲಿ ಬ್ಯಾಟಿಂಗ್ ಬಗ್ಗೆ ವೆಸ್ಟ್ ಇಂಡೀಸ್ ಮಾಜಿ ವೇಗದ ಬೌಲರ್ ಹಾಗೂ ವೀಕ್ಷಕ ವಿವರಣೆಗಾರ ಇಯಾನ್ ಬಿಷಪ್ ಕಳವಳ ವ್ಯಕ್ತಪಡಿಸಿದ್ದರು. ಆದರೆ ಟೀಕಾಕಾರರನ್ನು ದೂರವಿರಿಸುವುದಾಗಿ ಹೇಳಿರುವ ಕೊಹ್ಲಿ, ಅಂತಹ ಅಭಿಪ್ರಾಯಗಳಿಗೆ ಕಿವಿಗೊಡುವುದಿಲ್ಲ ಎಂದು ಹೇಳಿದ್ದಾರೆ.

'ನನ್ನ ಭಾವನೆ ಗ್ರಹಿಸಲು ಅವರಿಗೆ ಸಾಧ್ಯವಿಲ್ಲ. ಹಾಗಿದ್ದರೆ ಹೊರಗಿನ ಸದ್ದನ್ನು ಹೇಗೆ ತಡೆಯಬಹುದು? ನಾನು ಟಿ.ವಿ ಮ್ಯೂಟ್ ಮಾಡುತ್ತೇನೆ ಅಥವಾ ಜನರು ಏನು ಹೇಳುತ್ತಾರೆಂದು ಗಮನ ಕೊಡುವುದಿಲ್ಲ. ನಾನು ಇವೆರಡನ್ನೂ ಮಾಡುತ್ತೇನೆ' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT