ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2023 RCB vs GT | ಟಾಸ್‌ ಗೆದ್ದ ಗುಜರಾತ್‌ ತಂಡದಿಂದ ಬೌಲಿಂಗ್‌ ಆಯ್ಕೆ

Published 21 ಮೇ 2023, 14:31 IST
Last Updated 21 ಮೇ 2023, 14:31 IST
ಅಕ್ಷರ ಗಾತ್ರ

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಎದುರಿನ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಗುಜರಾತ್‌ ಟೈಟನ್ಸ್‌ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಮಳೆಯಿಂದಾಗಿ ಪಂದ್ಯ ಅರ್ಧ ಗಂಟೆ ವಿಳಂಬವಾಗಿ ಆರಂಭವಾಗಲಿದೆ. ರಾತ್ರಿ 7.30ಕ್ಕೆ ಆರಂಭವಾಗುವ ಬದಲು 8 ಗಂಟೆಗೆ ಶುರುವಾಗಲಿದೆ. ನಿಗದಿತ ಓವರ್‌ಗಳಲ್ಲಿ ಯಾವುದೇ ಕಡಿತ ಮಾಡಿಲ್ಲ.

ಭಾನುವಾರ ಮಧ್ಯಾಹ್ನ 3.30ರಿಂದಲೇ ನಗರದಲ್ಲಿ ಮಳೆ ಸುರಿಯಿತು. ಸಂಜೆ 6. 30ರ ನಂತರ ಮಳೆ ನಿಂತಿತು. ನಂತರವಷ್ಟೇ ಪಿಚ್‌ ಮೇಲಿನ ಹೊದಿಕೆಯನ್ನು ತೆಗೆಯಲಾಯಿತು.

ಆರ್‌ಸಿಬಿಯು ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ವಿರುದ್ಧ ಜಯಿಸುವುದು ಮಹತ್ವದ್ದಾಗಿದೆ. ಇದೇ ಕಾರಣಕ್ಕೆ ಈ ಪಂದ್ಯವು ಕುತೂಹಲದ ಕಣಜವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT