ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2023: ರಿಲೀ ರೊಸ್ಸೊ ಅರ್ಧಶತಕ, ಪಂಜಾಬ್ ಗೆಲುವಿಗೆ 214 ರನ್ ಗುರಿ ನೀಡಿದ ಡೆಲ್ಲಿ

Published 17 ಮೇ 2023, 16:01 IST
Last Updated 17 ಮೇ 2023, 16:01 IST
ಅಕ್ಷರ ಗಾತ್ರ

ಧರ್ಮಶಾಲಾ: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್‌) 64ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.

ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ (ಎಚ್‌ಪಿಸಿಎ) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಟಾಸ್‌ ಗೆದ್ದ ಪಂಜಾಬ್, ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 213 ರನ್‌ಗಳ ಬೃಹತ್ ಮೊತ್ತ ಗಳಿಸಿತು.

ಡೆಲ್ಲಿ ಪರ ರಿಲೀ ರೊಸ್ಸೊ 37 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ಸಹಿತ 82 ರನ್ ಗಳಿಸಿ ಔಟಾಗದೆ ಉಳಿದರು. ಇತ್ತ ಪೃಥ್ವಿ ಶಾ 54, ಡೇವಿಡ್ ವಾರ್ನರ್ 46, ಫಿಲಿಪ್ ಸಾಲ್ಟ್ ಔಟಾಗದೆ 26 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

ಪಂಜಾಬ್ ಕಿಂಗ್ಸ್ ಪರ ಸ್ಯಾಮ್ ಕರನ್ ಎರಡು ವಿಕೆಟ್‌ ಪಡೆದು ಮಿಂಚಿದರು.

ಪಂಜಾಬ್‌ ತಂಡ, ಪಾಯಿಂಟ್‌ ಪಟ್ಟಿಯ ತಳದಲ್ಲಿರುವ ಡೆಲ್ಲಿ ವಿರುದ್ಧ ಭರ್ಜರಿ ಜಯಗಳಿಸಿ ಪ್ಲೇ ಆಫ್‌ನ ಕ್ಷೀಣ ಅವಕಾಶವನ್ನು ಜೀವಂತವಾಗಿರಿಸಲು ಕಾತರವಾಗಿದೆ. ಆದರೆ, ಈ ಪಂದ್ಯ ಡೆಲ್ಲಿ ತಂಡಕ್ಕೆ ಮಹತ್ವದ್ದಲ್ಲದಿದ್ದರೂ ಸಮಾಧಾನಕರ ಜಯಕ್ಕೆ ಯತ್ನಿಸುತ್ತಿದೆ.

ಪಂಜಾಬ್‌ ತಂಡದ ಈ ಬಾರಿಯ ಅಭಿಯಾನ ಸಾಕಷ್ಟು ಏರಿಳಿತಗಳನ್ನು ಕಂಡಿದೆ. 12 ಪಂದ್ಯಗಳಲ್ಲಿ ಆರು ಗೆದ್ದು, ಅಷ್ಟೇ ಸೋತಿರುವ ಶಿಖರ್‌ ಧವನ್ ಪಡೆ 12 ಪಾಯಿಂಟ್ಸ್‌ ಸಂಗ್ರಹಿಸಿದೆ. ಆದರೆ ಅದರ ಪ್ಲೇ ಆಫ್‌ ಹಾದಿ ಪೂರ್ಣವಾಗಿ ಮುಚ್ಚಿಲ್ಲ. ಜಯದ ಜೊತೆ ಈಗ ಇರುವ –0.268 ನಿವ್ವಳ ರನ್‌ ದರವನ್ನು ಸುಧಾರಿಸುವ ಅಗತ್ಯವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT