ನವದೆಹಲಿ: ಭುವನೇಶ್ವರ್ ಕುಮಾರ್ (5ಕ್ಕೆ3) ಮತ್ತು ಜೋಶ್ ಹ್ಯಾಜಲ್ವುಡ್ (12ಕ್ಕೆ4) ಅವರ ಸ್ವಿಂಗ್ ಮತ್ತು ವೇಗದ ದಾಳಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಗ್ರ ಬ್ಯಾಟರ್ಗಳು ತರಗೆಲೆಗಳಂತೆ ಉದುರಿದರು. ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ತವರಿನಲ್ಲಿ ಡೆಲ್ಲಿ ತಂಡ ಐಪಿಎಲ್ ಇತಿಹಾಸದಲ್ಲೇ ನಾಟಕೀಯ ರೀತಿಯಲ್ಲಿ ಆರಂಭಿಕ ಕುಸಿತ ಅನುಭವಿಸಿತು.

ಭುವಿ ಮತ್ತು ಜೋಶ್ ತಲಾ ಮೂರು ಓವರುಗಳಲ್ಲಿ ಡೆಲ್ಲಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದುಹಾಕಿದರು. ಪವರ್ಪ್ಲೇ ಅವಧಿಯಲ್ಲಿ ತತ್ತರಿಸಿ 6 ವಿಕೆಟ್ಗೆ 13 ರನ್ ಗಳಿಸಿದ್ದ ತಂಡ ನಂತರ ಸ್ವಲ್ಪ ಚೇತರಿಸಿಕೊಂಡಿತು. ಅಂತಿಮವಾಗಿ 16.3 ಓವರುಗಳಲ್ಲಿ 75 ರನ್ನಿಗೆ ಆಲೌಟ್ ಆಯಿತು. ಐಪಿಎಲ್ ಇತಿಹಾಸದಲ್ಲೇ ಅತಿ ಕಡಿಮೆ ಮೊತ್ತಕ್ಕೆ (49) ಆಲೌಟ್ ಆಗುವ ಮುಖಭಂಗದಿಂದ ಪಾರಾಯಿತು.

ಇಂಪ್ಯಾಕ್ಟ್ ಆಟಗಾರ ಅಭಿಷೇಕ್ ಪೊರೆಲ್ (30, 33 ಎಸೆತ), ಡೇವಿಡ್ ಮಿಲ್ಲರ್ (19) ಮತ್ತು ಕೈಲ್ ಜೇಮಿಸನ್ (12) ಮಾತ್ರ ಎರಡಂಕಿ ಮೊತ್ತ ಗಳಿಸಿದರು.

ಗೆಲುವಿಗೆ ಬೇಕಿದ್ದ 75 ರನ್ಗಳನ್ನು ಹಾಲಿ ಚಾಂಪಿಯನ್ ತಂಡ 6.3 ಓವರುಗಳಲ್ಲೇ (1 ವಿಕೆಟ್ಗೆ 77) ಗಳಿಸಿತು. ‘ದೆಹಲಿಯ ಹುಡುಗ’ ವಿರಾಟ್ ಕೊಹ್ಲಿ (ಔಟಾಗದೇ 23, 15 ಎಸೆತ) ಮತ್ತು ದೇವದತ್ತ ಪಡಿಕ್ಕಲ್ (ಔಟಾಗದೇ 34, 13 ಎಸೆತ) ಔಪಚಾರಿಕತೆ ಪೂರೈಸಿದರು. ಜೇಕಬ್ ಬೆಥೆಲ್ (20) ಬೌಂಡರಿ ಲೈನ್ ಬಳಿ ನಟರಾಜನ್ ಹಿಡಿದ ಅಮೋಘ ಕ್ಯಾಚಿಗೆ ನಿರ್ಗಮಿಸಿದ್ದರು.

ನಟರಾಜನ್ ಬೌಲಿಂಗ್ನಲ್ಲಿ ಸತತ ಸಿಕ್ಸರ್ಗಳನ್ನು ಎತ್ತುವ ಮೂಲಕ ಕೊಹ್ಲಿ ಅವರು ಡೆಲ್ಲಿ ಗೋಳಿಗೆ ಕೊನೆಹಾಡಿದರು.ರಜತ್ ಪಾಟೀದಾರ್ ಪಡೆಯು ಇದೇ 18ರಂದು ಚಿನ್ನಸ್ವಾಮಿ ಕ್ರೀಡಾಂಗಣ ದಲ್ಲಿ ಅನುಭವಿಸಿದ ಸೋಲಿಗೆ ಮುಯ್ಯಿ ತೀರಿಸಿಕೊಂಡಿತು.

ನಾಟಕೀಯ ಕುಸಿತ: ಸ್ವಿಂಗ್, ವೇಗ ಮತ್ತು ಕರಾರುವಾಕ್ ದಾಳಿಯಿಂದ ಡೆಲ್ಲಿ ತಂಡದ ಬ್ಯಾಟರ್ಗಳಿಗೆ ಬೇರೂರಲು ಆರ್ಸಿಬಿ ವೇಗಿಗಳು ಅವಕಾಶ ನೀಡಲಿಲ್ಲ. ಆಟಗಾರರು ನಿರುತ್ತರರಾಗಿ ಪೆವಿಲಿಯನ್ಗೆ ಪರೇಡ್ ನಡೆಸಿದರು.

ಪಂದ್ಯದ ಎರಡನೇ ಎಸೆತದಲ್ಲೇ ಭುವಿ ಅವರ ಯಾರ್ಕರ್ಗೆ ಸಾಹಿಲ್ ಪರಖ್ ಅವರ ಮಿಡ್ಲ್ ಸ್ಟಂಪ್ ಬುಡಮೇಲಾಯಿತು. 18 ವರ್ಷ ವಯಸ್ಸಿನ ಎಡಗೈ ಬ್ಯಾಟರ್ ಪರಖ್ ಅವರಿಗೆ ಪದಾರ್ಪಣೆ ಪಂದ್ಯ ದುಃಸ್ವಪ್ನ ವಾಯಿತು. ಅಷ್ಟೇ ಅಲ್ಲ, ಯಾರೂ ಊಹಿಸದ ರೀತಿ ಡೆಲ್ಲಿ ಕುಸಿತಕ್ಕೂ ನಾಂದಿಯಾಯಿತು.

ಈ ಹಿಂದಿನ ಪಂದ್ಯದಲ್ಲಿ ಸಿಡಿಲಬ್ಬರದ ಶತಕ ಬಾರಿಸಿದ್ದ ರಾಹುಲ್ ಅವರು ಹ್ಯಾಜಲ್ವುಡ್ ಅವರ ಮುಂದಿನ ಓವರಿನ ಮೊದಲ ಎಸೆತದಲ್ಲೇ ನಿರ್ಗಮಿಸಿದರು. ಬೌನ್ಸ್ ಆದ ಚೆಂಡನ್ನು ಪುಲ್ ಮಾಡುವ ಯತ್ನದಲ್ಲಿ ರಾಹುಲ್ ವಿಕೆಟ್ ಕೀಪರ್ಗೆ ಕ್ಯಾಚಾದರು. ನಂತರದ ಎಸೆತದಲ್ಲಿ ಸಮೀರ್ ರಿಜ್ವಿ ಕೂಡ ನಿರ್ಗಮಿಸಿದರು.

ಭುವಿ ಅವರ ಮುಂದಿನ ಓವರಿನಲ್ಲಿ ಟ್ರಿಸ್ಟನ್ ಸ್ಟಬ್ಸ್ (5) ಅವರು ಸ್ವಿಂಗ್ ಆದ ಚೆಂಡನ್ನು ಆಡಲು ಹೋಗಿ
ಸ್ಲಿಪ್ನಲ್ಲಿದ್ದ ದೇವದತ್ತ ಪಡಿಕ್ಕಲ್ಗೆ ಕ್ಯಾಚಿತ್ತರು. ಕ್ಷಣಗಳ ನಂತರ, ನಾಯಕ ಅಕ್ಷರ್ ಪಟೇಲ್ ಕೂಡ ಭುವಿ ಅವರ ಔಟ್ಸ್ವಿಂಗರ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚಿತ್ತರು. ಪ್ರೇಕ್ಷಕರ ಗ್ಯಾಲರಿಯಲ್ಲಿ ಗಾಢ ಮೌನ ಆವರಿಸಿತ್ತು. ಹ್ಯಾಜಲ್ವುಡ್ ತಮ್ಮ ಮುಂದಿನ ಓವರಿನಲ್ಲಿ ನಿತೀಶ್ ರಾಣಾ ಅವರ ವಿಕೆಟ್ ಪಡೆದಾಗ ಮೊತ್ತ 8 ರನ್ನಿಗೆ 6 ವಿಕೆಟ್! ಪವರ್ ಪ್ಲೇಯಲ್ಲಿ ಬಂದಿದ್ದು ಒಂದೇ ಬೌಂಡರಿ!

ಆದರೆ ಇನ್ನೊಂದೆಡೆ ಪರಖ್ ಬದಲಿಗೆ ಇಂಪ್ಯಾಕ್ಟ್ ಆಟಗಾರನಾಗಿ ಬಂದಿದ್ದ ಅಭಿಷೇಕ್ ಪೊರೆಲ್ ಅವರು ಡೇವಿಡ್ ಮಿಲ್ಲರ್ ಜೊತೆಗೂಡಿ ಏಳನೇ ವಿಕೆಟ್ಗೆ 35 ರನ್ ಸೇರಿಸಿದರು. ಪೊರೆಲ್
ಅವರು ಕೊನೆಯವರಾಗಿ ಹ್ಯಾಜಲ್ವುಡ್ ಬೌಲಿಂಗ್ನಲ್ಲಿ ಬೌಲ್ಡ್ ಆಗಿ ನಿರ್ಗಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.