ಅಹಮದಾಬಾದ್: ವೇಗಿಗಳಾದ ಕಗಿಸೊ ರಬಾಡ ಮತ್ತು ಜೇಸನ್ ಹೋಲ್ಡರ್ ಅವರ ಬಿಗಿದಾಳಿಯಿಂದಾಗಿ ಗುಜರಾತ್ ಟೈಟನ್ಸ್ ತಂಡವು ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 82 ರನ್ಗಳಿಂದ ಸುಲಭವಾಗಿ ಮಣಿಸಿತು. ಇದರೊಂದಿಗೆ ಅಂಕಪಟ್ಟಿ
ಯಲ್ಲಿ ಅಗ್ರಸ್ಥಾನಕ್ಕೆ ಜಿಗಿಯಿತು.

ಶುಭಮನ್ ಗಿಲ್ ಪಡೆಯು ಹಾಲಿ ಆವೃತ್ತಿಯಲ್ಲಿ ಸತತ ಐದನೇ ಗೆಲುವು ದಾಖಲಿಸಿ, ಪ್ಲೇ ಆಫ್ಗೆ ಮತ್ತಷ್ಟು ಹತ್ತಿರವಾಯಿತು. ರನ್ ಆಧಾರದಲ್ಲಿ ಟೈಟನ್ಸ್ ತಂಡಕ್ಕೆ ಇದು ಅತಿ ದೊಡ್ಡ ಗೆಲುವಾದರೆ, ಸನ್ರೈಸರ್ಸ್ ತಂಡಕ್ಕೆ ಅತಿ ದೊಡ್ಡ ಅಂತರದ ಸೋಲಾಗಿದೆ. ಈ ಪಂದ್ಯವನ್ನು ಗೆದ್ದು ಅಗ್ರಸ್ಥಾನಕ್ಕೇರುವ ಕನಸು ಕಂಡಿದ್ದ ಪ್ಯಾಟ್ ಕಮಿನ್ಸ್ ಪಡೆಗೆ ನಿರಾಸೆಯಾಯಿತು.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕ ಆಟಗಾರ ಸಾಯಿ ಸುದರ್ಶನ್ (61;44ಎ, 4x5, 6x2) ಮತ್ತು ವಾಷಿಂಗ್ಟನ್ ಸುಂದರ್ (50;33ಎ, 4x7, 6x1) ಅವರ ಅರ್ಧ
ಶತಕಗಳ ನೆರವಿನಿಂದ ಆತಿಥೇಯ ತಂಡವು 5 ವಿಕೆಟ್ಗೆ 168 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡವು ವೇಗಿಗಳಾದ ಮೊಹಮ್ಮದ್ ಸಿರಾಜ್ (3–1–11–1), ರಬಾಡ (28ಕ್ಕೆ 3), ಹೋಲ್ಡರ್ (20ಕ್ಕೆ 3), ಪ್ರಸಿದ್ಧ ಕೃಷ್ಣ (23ಕ್ಕೆ 2) ಅವರ ಪರಿಣಾಮಕಾರಿ ದಾಳಿಗೆ ನಲುಗಿತು. ಹೀಗಾಗಿ, 14.5 ಓವರ್ಗಳಲ್ಲಿ 86 ರನ್ ಗಳಿಸಿ ಹೋರಾಟ ಮುಗಿಸಿತು. ಇದು ಐಪಿಎಲ್ ಇತಿಹಾಸದಲ್ಲಿ ಸನ್ರೈಸರ್ಸ್ ತಂಡದ ಕನಿಷ್ಠ ಮೊತ್ತ.

ಆಕ್ರಮಣಕಾರಿ ಸ್ವಭಾವದ ಆಟ ವಾಡುವ ಸನ್ರೈಸರ್ಸ್ ಬ್ಯಾಟರ್ಗಳು ಸಹನೆ, ಸಂಯಮದಿಂದ ಆಡಬೇಕಿದ್ದ ಈ ಪಿಚ್ನಲ್ಲಿ ವಿಫಲರಾದರು.

ಸ್ಫೋಟಕ ಆಟಗಾರ ಟ್ರಾವಿಸ್ ಹೆಡ್ ಅವರು ಸಿರಾಜ್ ಹಾಕಿದ ಇನಿಂಗ್ಸ್ನ ಮೊದಲ ಓವರ್ನಲ್ಲೇ ಖಾತೆ ತೆರೆಯದೆ ಪೆವಿಲಿಯನ್ ಸೇರಿದರು. ಅವರ ಬೆನ್ನಲ್ಲೇ ಅಭಿಷೇಕ್ ಶರ್ಮಾ (6), ಇಶಾನ್ ಕಿಶನ್ (11), ಕನ್ನಡಿಗ ಆರ್.ಸ್ಮರಣ್ (9) ವಿಕೆಟ್ ಒಪ್ಪಿಸಿದರು. ಉತ್ತಮ ಲಯದಲ್ಲಿರುವ ಹೆನ್ರಿಚ್ ಕ್ಲಾಸೆನ್ (14) ಮತ್ತು ಸಾಹಿಲ್ ಅರೋರಾ (16) ಅವರೂ ನಿರಾಸೆ ಮೂಡಿಸಿದರು. 19 ರನ್ ಗಳಿಸಿದ ಕಮಿನ್ಸ್ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ನಾಲ್ಕು ಬ್ಯಾಟರ್ಗಳು ಮಾತ್ರ ಒಂದಂಕಿ ದಾಟಿದರು.

ಇದಕ್ಕೂ ಮೊದಲು ಟಾಸ್ ಗೆದ್ದ ಹೈದರಾಬಾದ್ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ಪ್ರಫುಲ್ ಹಿಂಗೆ ಅವರು ಪವರ್ಪ್ಲೇ ಅವಧಿಯೊಳಗೇ ನಾಯಕ ಶುಭಮನ್ ಗಿಲ್ (5) ಮತ್ತು ವಿಕೆಟ್ ಕೀಪರ್ ಜೋಸ್ ಬಟ್ಲರ್ (7) ಅವರ ವಿಕೆಟ್ಗಳನ್ನು ಪಡೆದು ಆತಿಥೇಯರಿಗೆ ಆಘಾತ ನೀಡಿದರು. 6 ಓವರ್ ಮುಗಿದಾಗ ಸ್ಕೋರ್ 2 ವಿಕೆಟ್ಗೆ 34 ರನ್ಗಳಷ್ಟೇ ದಾಖಲಾಗಿದ್ದವು.

ಸಂಯಮದಿಂದ ಆಡಿದ ಎಡಗೈ ಬ್ಯಾಟರ್ ‘ಹ್ಯಾಟ್ರಿಕ್’ ಅರ್ಧಶತಕಗಳನ್ನು ಪೂರೈಸಿದರು. ಈ ಬಾರಿ 1 ಶತಕ ಮತ್ತು 4 ಅರ್ಧಶತಕ ದಾಖಲಿಸಿರುವ ಅವರು ಸತತ ಮೂರನೇ ಆವೃತ್ತಿಯಲ್ಲಿ ‘500’ ರನ್ ಗಡಿ ದಾಟಿದ ಸಾಧನೆ ಮೆರೆದರು.

ಎಡಗೈ ಬ್ಯಾಟರ್ ನಿಶಾಂತ್ ಸಿಂಧು (22, 14ಎ) ಉತ್ತಮ ಆರಂಭ ಮಾಡಿದರೂ ಹೆಚ್ಚು ಕಾಲ ನಿಲ್ಲಲಿಲ್ಲ. ಈ ಹಂತದಲ್ಲಿ ಸಾಯಿ ಜೊತೆಗೂಡಿದ ವಾಷಿಂಗ್ಟನ್ ಒತ್ತಡ ನಿವಾರಿಸಲು ಮುಂದಾದರು. ಈ ಜೋಡಿ ನಾಲ್ಕನೇ ವಿಕೆಟ್ಗೆ ಉಪಯುಕ್ತ 60 ರನ್ ಸೇರಿಸಿತು.

ಸಂಕ್ಷಿಪ್ತ ಸ್ಕೋರು: ಗುಜರಾತ್ ಟೈಟನ್ಸ್: 20 ಓವರುಗಳಲ್ಲಿ 5 ವಿಕೆಟ್ಗೆ 168 (ಸಾಯಿ ಸುದರ್ಶನ್ 61, ವಾಷಿಂಗ್ಟನ್ ಸುಂದರ್ 50; ಪ್ರಫುಲ್ ಹಿಂಗೆ 17ಕ್ಕೆ2, ಸಕಿಬ್ ಹುಸೇನ್ 37ಕ್ಕೆ2). ಸನ್ರೈಸರ್ಸ್ ಹೈದರಾಬಾದ್: 14.5 ಓವರ್ಗಳಲ್ಲಿ 86 (ಸಲೀಲ್ ಅರೋರಾ 16, ಪ್ಯಾಟ್ ಕಮಿನ್ಸ್ 19; ಕಗಿಸೊ ರಬಾಡ 28ಕ್ಕೆ3, ಜೇಸನ್ ಹೋಲ್ಡರ್ 20ಕ್ಕೆ3, ಪ್ರಸಿದ್ಧ ಕೃಷ್ಣ 23ಕ್ಕೆ2). ಪಂದ್ಯದ ಆಟಗಾರ: ಕಗಿಸೊ ರಬಾಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.