ಲಖನೌ:ಅನುಭವಿ ರವೀಂದ್ರ ಜಡೇಜ ಅವರ ಆಲ್ರೌಂಡ್ ಆಟ ಹಾಗೂ ಬೌಲರ್ಗಳ ಸಾಂಘಿಕ ಪ್ರದರ್ಶನದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವು ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ 40 ರನ್ಗಳಿಂದ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿತು. ಈ ಗೆಲುವಿನೊಂದಿಗೆ ರಿಯಾನ್ ಪರಾಗ್ ಪಡೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.

ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಖನೌ ತಂಡದ ವೇಗಿಗಳಾದ ಮೊಹಮ್ಮದ್ ಶಮಿ (30ಕ್ಕೆ2) ಹಾಗೂ ಮೊಹ್ಸಿನ್ ಖಾನ್ (17ಕ್ಕೆ2) ಅವರ ಬಿಗುವಿನ ಬೌಲಿಂಗ್ ದಾಳಿ ಎದುರು ರಾಯಲ್ಸ್ ತಂಡವು ಕಡಿಮೆ ಮೊತ್ತಕ್ಕೆ ಕುಸಿಯುವ ಅಪಾಯದಲ್ಲಿತ್ತು. ಜಡೇಜ (ಔಟಾಗದೇ 43; 29ಎ, 4x2, 6x1) ಹಾಗೂ ಶುಭಂ ದುಬೆ (ಔಟಾಗದೇ 19) ಜೋಡಿಯ ಸಾಹಸದ ಬಲದಿಂದ 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 159 ರನ್ ಪೇರಿಸಿತು.

ಸಾಧಾರಣ ಮೊತ್ತ ಬೆನ್ನಟ್ಟಿದ ಲಖನೌ ತಂಡವು ಬ್ಯಾಟಿಂಗ್ನಲ್ಲಿ ಮತ್ತೆ ವೈಫಲ್ಯ ಅನುಭವಿಸಿತು. ನಿರಂತರವಾಗಿ ವಿಕೆಟ್ ಕಳೆದುಕೊಂಡ ರಿಷಭ್ ಪಂತ್ ಪಡೆ 18 ಓವರ್ಗಳಲ್ಲಿ 119 ರನ್ಗಳಿಗೆ ಸರ್ವಪತನವಾಯಿತು. ಅದರೊಂದಿಗೆ, ಹಾಲಿ ಲೀಗ್ನಲ್ಲಿ ಸತತ ನಾಲ್ಕನೇ ಸೋಲು ಅನುಭವಿಸಿತು.

ಆರಂಭ ಆಟಗಾರ ಮಿಚೆಲ್ ಮಾರ್ಷ್ (55; 41ಎ) ಅರ್ಧಶತಕ ಗಳಿಸಿ ಹೋರಾಟ ತೋರಿದರು. ಆದರೆ, ಉಳಿದವರಿಂದ ಬೆಂಬಲ ಸಿಗಲಿಲ್ಲ. ಅಗ್ರ ಕ್ರಮಾಂಕದ ಬ್ಯಾಟರ್ಗಳಾದ ಆಯುಷ್ ಬಡೋನಿ (0; 1ಎ), ನಾಯಕ ಪಂತ್ (0; 3ಎ) ಹಾಗೂ ಏಡನ್ ಮರ್ಕರಂ (0; 6ಎ) ಶೂನ್ಯಕ್ಕೆ ಔಟಾಗಿ, ನಿರಾಶೆ ಅನುಭವಿಸಿದರು.

ವೆಸ್ಟ್ ಇಂಡೀಸ್ನ ನಿಕೊಲಸ್ ಪೂರನ್ (22; 25ಎ) ಆಟಕ್ಕೆ ಕುದುರಿಕೊಳ್ಳುವ ಹಂತದಲ್ಲಿ ಜಡೇಜ ಅವರ ಬೌಲಿಂಗ್ನಲ್ಲಿ ಡೊನೊವನ್ ಫೆರಿರ ಅವರಿಗೆ ಕ್ಯಾಚ್ ಆದರು.

ಪಿಚ್ನ ಲಾಭ ಪಡೆದ ರಾಜಸ್ಥಾನ ತಂಡದ ವೇಗಿಗಳಾದ ಜೋಫ್ರಾ ಆರ್ಚರ್ (20ಕ್ಕೆ3), ನಾಂಡ್ರೆ ಬರ್ಗರ್ (27ಕ್ಕೆ2) ಹಾಗೂ ಬ್ರಿಜೇಶ್ ಶರ್ಮಾ (18ಕ್ಕೆ2) ಲಖನೌ ಬ್ಯಾಟರ್ಗಳ ದೌರ್ಬಲ್ಯವನ್ನು ಮತ್ತೆ ಸಾಬೀತುಪಡಿಸಿದರು.

ರಾಜಸ್ಥಾನ ರಾಯಲ್ಸ್: 6ಕ್ಕೆ159 (20 ಓವರ್ಗಳಲ್ಲಿ) ಯಶಸ್ವಿ ಸಿ ರಿಷಭ್ ಬಿ ಶಮಿ 22 (12ಎ 4X4) ವೈಭವ್ ಸಿ ದಿಗ್ವೇಶ್ ಬಿ ಮೊಹ್ಸಿನ್ 8 (11ಎ 4X2) ಜುರೇಲ್ ಸಿ ರಿಷಭ್ ಬಿ ಶಮಿ 0 (1ಎ) ಪರಾಗ್ ಸಿ ಪೂರನ್ ಬಿ ಪ್ರಿನ್ಸ್ 20 (19ಎ 4X2 6X1) ಹೆಟ್ಮೆಯರ್ ಸಿ ಪ್ರಿನ್ಸ್ ಬಿ ಮೊಹ್ಸಿನ್ 22 (18ಎ 4X2 6X1) ರವೀಂದ್ರ ಜಡೇಜ ಔಟಾಗದೇ 43 (29ಎ 4X2 6X1) ಫೆರಿರಾ ಸಿ ಮೊಹ್ಸಿನ್ ಬಿ ಪ್ರಿನ್ಸ್ 20 (19ಎ 4X2) ಶುಭಂ ದುಬೆ ಔಟಾಗದೇ 19 (11ಎ 4X3) ಇತರೆ: 5 (ಲೆಗ್ಬೈ 1 ವೈಡ್ 4) ವಿಕೆಟ್ ಪತನ: 1–32 (ಯಶಸ್ವಿ ಜೈಸ್ವಾಲ್;2.5) 2–32 (ಧ್ರುವ ಜುರೇಲ್; 2.6) 3–32 (ವೈಭವ್ ಸೂರ್ಯವಂಶಿ: 3.6) 4–62 (ರಿಯಾನ್ ಪರಾಗ್; 8.6) 5–77 (ಶಿಮ್ರಾನ್ ಹೆಟ್ಮೆಯರ್; 10.2) 6–110 (ಡೊನೊವನ್ ಫೆರೀರಾ; 15.5) ಬೌಲಿಂಗ್: ಮೊಹಮ್ಮದ್ ಶಮಿ 4–0–30–2 ಪ್ರಿನ್ಸ್ ಯಾದವ್ 4–0–29–2 ಮೊಹ್ಸಿನ್ ಖಾನ್ 4–1–17–2 ಮಯಂಕ್ ಯಾದವ್ 4–0–56–0 ದಿಗ್ವೇಶ್ ಸಿಂಗ್ ರಾಠಿ 4–0–26–0.

ಲಖನೌ ಸೂಪರ್ ಜೈಂಟ್ಸ್: 119 (18 ಓವರ್ಗಳಲ್ಲಿ) ಮಾರ್ಷ್ ಸಿ ಪರಾಗ್ ಬಿ ಬರ್ಗರ್ 55 (41ಎ 4x6 6x2) ಬಡೋನಿ ರನೌಟ್ (ಸಬ್) ರವಿ ಸಿಂಗ್ 0 (1ಎ) ಪಂತ್ ಸಿ ಜುರೇಲ್ ಬಿ ಬರ್ಗರ್ 0 (3ಎ) ಮರ್ಕರಂ ಸಿ ಜುರೇಲ್ ಬಿ ಆರ್ಚರ್ 0 (6ಎ) ಪೂರನ್ ಸಿ ಫೆರಿರಾ ಬಿ ಜಡೇಜ 22 (25ಎ 4x3) ಹಿಮ್ಮತ್ ಬಿ ಬಿಷ್ಣೋಯಿ 15 (15ಎ) ಮುಕುಲ್ ಸಿ ಪರಾಗ್ ಬಿ ಬ್ರಿಜೇಶ್ 7 (3ಎ 6x1) ಶಮಿ ಬಿ ಬ್ರಿಜೇಶ್ 6 (4ಎ 6x1) ಮಯಂಕ್ ಸಿ ಜುರೇಲ್ ಬಿ ಆರ್ಚರ್ 5 (5ಎ 4x1) ದಿಗ್ವೇಶ್ ರಾಠಿ ಔಟಾಗದೇ 2 (2ಎ) ಮೊಹ್ಸಿನ್ ಬಿ ಆರ್ಚರ್ 0 (3ಎ) ಇತರೆ: 7 (ಲೆಗ್ಬೈ 2 ವೈಡ್ 5) ವಿಕೆಟ್ ಪತನ: 1–9 (ಆಯುಷ್ ಬಡೋನಿ; 0.6) 2–10 (ರಿಷಭ್ ಪಂತ್; 1.4) 3–11 (ಏಡನ್ ಮರ್ಕರಂ; 2.5) 4–54 (ನಿಕೊಲಸ್ ಪೂರನ್; 9.4) 5–91 (ಹಿಮ್ಮತ್ ಸಿಂಗ್; 14.3) 6–105 (ಮಿಚೆಲ್ ಮಾರ್ಷ್; 15.3) 7–111 (ಮುಕುಲ್ ಚೌಧರಿ; 16.1) 8–113 (ಮೊಹಮ್ಮದ್ ಶಮಿ; 16.3) 9–119 (ಮಯಂಕ್ ಯಾದವ್; 17.3) 10–119 (ಮೊಹ್ಸಿನ್ ಖಾನ್; 17.6) ಬೌಲಿಂಗ್: ಜೋಫ್ರಾ ಆರ್ಚರ್ 4–1–20–3 ನಾಂಡ್ರೆ ಬರ್ಗರ್ 4–0–27–2 ಬ್ರಿಜೇಶ್ ಶರ್ಮಾ 3–0–18–2 ರವೀಂದ್ರ ಜಡೇಜ 4–0–29–1 ರವಿ ಬಿಷ್ಣೋಯಿ 3–0–23–1.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.