ಇಂಡಿಯನ್ ಪ್ರೀಮಿಯರ್ ಲೀಗ್ 2926ರಲ್ಲಿ ಮಂಗಳವಾರ (ಮೇ 26) ನಡೆಯುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ಅನ್ನು ಎದುರಿಸಲಿದೆ. ಅತ್ತ, ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿರುವ ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ಗೆ ಆರೆಂಜ್ ಕ್ಯಾಪ್ ಹಾಗೂ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗೆ ನೇರಳೆ ಬಣ್ಣದ ಟೋಪಿ (ಪರ್ಪಲ್ ಕ್ಯಾಪ್) ಅನ್ನು ನೀಡಲಾಗುತ್ತದೆ. ಸದ್ಯ, ಐಪಿಎಲ್ನ ಲೀಗ್ ಮಾದರಿಯು ಮುಕ್ತಾಯಗೊಂಡಿದ್ದು, ಈ ಓಟದಲ್ಲಿ ಯಾವೆಲ್ಲಾ ಆಟಗಾರರು ಇದ್ದಾರೆ ಎಂಬುದನ್ನು ನೋಡೋಣ.

ಅತ್ಯಧಿಕ ರನ್ ಗಳಿಸಿದ ಬ್ಯಾಟರ್ಗಳು

ಸಾಯಿ ಸುದರ್ಶನ್– (ಗುಜರಾತ್ ಟೈಟನ್ಸ್) 14 ಪಂದ್ಯ, 638 ರನ್ಗಳು

ಶುಭಮನ್ ಗಿಲ್– (ಗುಜರಾತ್ ಟೈಟನ್ಸ್) 13 ಪಂದ್ಯ, 616 ರನ್ಗಳು

ಹೆನ್ರಿಕ್ ಕ್ಲಾಸನ್– (ಸನ್ರೈಸರ್ಸ್ ಹೈದರಾಬಾದ್ ) 14 ಪಂದ್ಯ – 606ರನ್ಗಳು

ಕೆ.ಎಲ್. ರಾಹುಲ್– (ಡೆಲ್ಲಿ ಕ್ಯಾಪಿಟಲ್ಸ್)– 14 ಪಂದ್ಯ– 593 ರನ್ಗಳು

ವೈಭವ್ ಸೂರ್ಯವಂಶಿ (ರಾಜಸ್ಥಾನ ರಾಯಲ್ಸ್) 14 ಪಂದ್ಯ– 583 ರನ್ಗಳು

ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳು

ಭುವನೇಶ್ವರ ಕುಮಾರ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು) 24 ವಿಕೆಟ್ಗಳು

ಕಗಿಸೊ ರಬಾರ (ಗುಜರಾತ್ ಟೈಟನ್ಸ್ ) 24 ವಿಕೆಟ್ಗಳು

ಜೋಫ್ರಾ ಆರ್ಚರ್ (ರಾಸ್ಥಾನ ರಾಯಲ್ಸ್) 21 ವಿಕೆಟ್ಗಳು

ಅನ್ಶುಲ್ ಕಂಬೋಜ್ ( ಚೆನ್ನೈ ಸೂಪರ್ ಕಿಂಗ್ಸ್) 21 ವಿಕೆಟ್ಗಳು

ರಶೀದ್ ಖಾನ್ (ಗುಜರಾತ್ ಟೈಟನ್ಸ್) 19 ವಿಕೆಟ್ಗಳು

ಸದ್ಯ, ಆರೆಂಜ್ ಹಾಗೂ ನೇರಳ ಬಣ್ಣದ ಕ್ಯಾಪ್ ಅನ್ನು ಪಡೆಯಲು ಆಟಗಾರರ ನಡುವೆ ಪೈಪೋಟಿ ಜೋರಾಗಿದೆ. ಈ ಓಟದಲ್ಲಿ, ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಆಡಲಿರುವ ತಂಡಗಳ ಆಟಗಾರರು ಹೆಚ್ಚಾಗಿರುವುದರಿಂದ, ಈ ಪ್ರಶಸ್ತಿಗಳು ಯಾರ ಪಾಲಾಗಲಿವೆ ಎಂಬುದಕ್ಕೆ ಮೇ 31ರಂದು ಉತ್ತರ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.