ಮುಲ್ಲನ್ಪುರ: ಇಲ್ಲಿನ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ 19ನೇ ಆವೃತ್ತಿಯ 4ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಕೂಪರ್ ಕನೊಲಿ ಅವರ ಏಕಾಂಗಿ ಹೋರಾಟದ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ.

164 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಪಂಜಾಬ್ ತಂಡವು ಮಧ್ಯಮ ಕ್ರಮಾಂಕದಲ್ಲಿ ನಿರಂತರ ವಿಕೆಟ್ ಕಳೆದುಕೊಂಡು ಸೋಲಿನ ಸುಲಿಯಲ್ಲಿ ಸಿಲುಕಿತ್ತು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಕೂಡ ಐಪಿಎಲ್ನಲ್ಲಿ ಇದೇ ಮೊದಲ ಪಂದ್ಯ ಆಡುತ್ತಿರುವ ಕೂಪರ್ ಕನೊಲಿ ಗುಜರಾತ್ ಬೌಲರ್ಗಳನ್ನು ಕಾಡಿದರು. ಅವರು (72 ರನ್, 44ಎ, 4X5, 6X5) ಬಾರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಪ್ರಸಿದ್ಧ ಕೃಷ್ಣ ಬೌಲಿಂಗ್ ಕಮಾಲ್

12ನೇ ಓವರ್ನ ಮುಕ್ತಾಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 110 ರನ್ ಕಲೆಹಾಕಿ ಸುಭದ್ರ ಸ್ಥಿತಿಯಲ್ಲಿತ್ತು. ಈ ಹಂತದಲ್ಲಿ 13ನೇ ಓವರ್ನಲ್ಲಿ ಬೌಲಿಂಗ್ ಬಂದ ಪ್ರಸಿದ್ಧ ಕೃಷ್ಣ ಮೊದಲ ಎರಡು ಓವರ್ನಲ್ಲಿ ಕೇವಲ 6 ರನ್ ನೀಡಿ 3 ವಿಕೆಟ್ ಪಡೆದುಕೊಂಡರು. ಆ ಮೂಲಕ ಪಂಜಾಬ್ ತಂಡವನ್ನು ಕಾಡಿದರು.

ಅಜೇಯವಾಗಿ ಪಂದ್ಯ ಗೆಲ್ಲಿಸಿದ ಕನೊಲಿ

ನಿರಂತರವಾಗಿ ವಿಕೆಟ್ ಕಳೆದುಕೊಂಡು ಸೋಲಿನ ಆತಂಕದಲ್ಲಿದ್ದ ತಂಡಕ್ಕೆ ಕೂಪರ್ ಕನೊಲಿ ಅಜೇಯವಾಗಿ ಪಂದ್ಯ ಗೆಲ್ಲಿಸಿದರು. ಅಂತಿಮವಾಗಿ ಪಂಜಾಬ್ ತಂಡ 7 ವಿಕೆಟ್ ಕಳೆದುಕೊಂಡು 19.1 ಓವರ್ನಲ್ಲಿ ಗೆಲುವು ದಾಖಲಿಸಿತು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ಆರಂಭಿಕ ಆಘಾತ ಎದುರಿಸಿತು. ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ (13 ರನ್) ಗಳಿಸಿ ಔಟ್ ಆದರು. ನಂತರ ಜೊತೆಯಾದ ಶುಭಮನ್ ಗಿಲ್ (39 ರನ್) ಹಾಗೂ ಜೋಸ್ ಬಟ್ಲರ್ (38 ರನ್) 46 ರನ್ಗಳ ಜೊತೆಯಾಟ ಆಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ನಂತರ ಬಂದ ಗ್ಲೆನ್ ಫಿಲಿಪ್ಸ್ (25 ರನ್) ಸಿಡಿಸಿ ಔಟ್ ಆದರು.

ಪಂಜಾಬ್ ಕಿಂಗ್ಸ್ ಪರ ಉತ್ತಮ ದಾಳಿ ನಡೆಸಿದ ವಿಜಯಕುಮಾರ್ ವೈಶಾಕ್ 3 ವಿಕೆಟ್ ಹಾಗೂ ಯುಜ್ವೆಂದರ್ ಚಹಾಲ್ 2 ವಿಕೆಟ್ ಪಡೆದು ಮಿಂಚಿದರು. ಅಂತಿಮವಾಗಿ ಗುಜರಾತ್ ತಂಡವು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 163 ರನ್ ಕಲೆಹಾಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.