ಧರ್ಮಶಾಲಾ: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ವರ್ಷವೂ ಫೈನಲ್ಗೆ ಲಗ್ಗೆ ಇಟ್ಟಿತು.

ಮಂಗಳವಾರ ನಡೆದ ಐಪಿಎಲ್ ಕ್ವಾಲಿಫಯರ್ (1) ಪಂದ್ಯದಲ್ಲಿ ನಾಯಕ ರಜತ್ ಪಾಟೀದಾರ್ (ಅಜೇಯ 93) ಅವರ ಸಿಡಿಲಬ್ಬರದ ಬ್ಯಾಟಿಂಗ್ ಬಲದಿಂದ ಆರ್ಸಿಬಿಯು 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 254 ರನ್ಗಳ ಬೃಹತ್ ಗುರಿಯನ್ನು ಗುಜರಾತ್ ಟೈಟನ್ಸ್ಗೆ ಒಡ್ಡಿತು. ಜೇಕಬ್ ಡಫಿ (39ಕ್ಕೆ3) ಹಾಗೂ ರಸಿಕ್ ಸಲಾಮ್ ದಾರ್ (11ಕ್ಕೆ2) ಅವರ ಅಮೋಘ ಬೌಲಿಂಗ್ನಿಂದಾಗಿ ಆರ್ಸಿಬಿಯು 92 ರನ್ಗಳಿಂದ ನಿರಾಯಾಸ ಗೆಲುವು ಸಾಧಿಸಿತು. ಟೈಟನ್ಸ್ಗೆ 19.3 ಓವರ್ಗಳಲ್ಲಿ 162 ರನ್ ಗಳಿಸಲಷ್ಟೇ ಸಾಧ್ಯವಾಯಿತು. ರಾಹುಲ್ ತೆವಾಟಿಯಾ (68; 43ಎ) ಅವರೊಬ್ಬರೇ ಒಂದಿಷ್ಟು ದಿಟ್ಟತನ ತೋರಿದರು.

ಗುಜರಾತ್ ತಂಡಕ್ಕೆ ತನ್ನ ತವರು ಅಹಮದಾಬಾದಿನಲ್ಲಿ ನಡೆಯಲಿರುವ ಫೈನಲ್ನಲ್ಲಿ ಆಡಲು ಇನ್ನೂ ಒಂದು ಅವಕಾಶ ಬಾಕಿ ಇದೆ. ಇದೇ 29ರಂದು ಮುಲ್ಲನಪುರದಲ್ಲಿ ನಡೆಯುವ ಎರಡನೇ ಕ್ವಾಲಿಫಯರ್ನಲ್ಲಿ ಆಡಲಿರುವ ತಂಡವು ಗೆದ್ದರೆ ಫೈನಲ್ ಪ್ರವೇಶಿಸಬಹುದು.

ಸಾಯಿ ಕೈ ಜಾರಿದ ಬ್ಯಾಟ್: ಬೃಹತ್ ಗುರಿ ಬೆನ್ನಟ್ಟಿದ ಗುಜರಾತ್ ತಂಡಕ್ಕೆ ಸಾಯಿ ಸುದರ್ಶನ್ ಮತ್ತು ಗಿಲ್ ಅಮೋಘ ಆರಂಭ ನೀಡಿದರು. ಆದರೆ ಡಫಿ ಹಾಕಿದ ಮೂರನೇ ಓವರ್ನಲ್ಲಿ ಸಾಯಿ ಸುದರ್ಶನ್ಗೆ (14 ರನ್) ಅದೃಷ್ಟ ಕೈಕೊಟ್ಟಿತು. ಎಡಗೈ ಬ್ಯಾಟರ್ ಸಾಯಿ ಕೈಯಿಂದ ಜಾರಿದ ಬ್ಯಾಟ್ ಸ್ಟಂಪ್ಗೆ ತಗುಲಿತು. ಹಿಟ್ ವಿಕೆಟ್ ಆದ ಸಾಯಿ ಬೇಸರದಿಂದ ಡಗ್ಔಟ್ ಸೇರಿದರು. ಇಲ್ಲಿಂದ ಟೈಟನ್ಸ್ ಸೋಲಿನ ಹಾದಿ ಹಿಡಿಯಿತು.

ಭುವನೇಶ್ವರ್ ಕುಮಾರ್ ಬೌಲಿಂಗ್ನಲ್ಲಿ ಗಿಲ್ ಕ್ಲೀನ್ ಬೌಲ್ಡ್ ಆದರು. ಜೋಸ್ ಬಟ್ಲರ್ (29; 11ಎ) ಎರಡು ಸಿಕ್ಸರ್, ನಾಲ್ಕು ಬೌಂಡರಿ ಹೊಡೆದು ಆಟಕ್ಕೆ ಕುದುರಿಕೊಂಡಿದ್ದರು. ಆದರೆ ಅವರು ಜೋಶ್ ಹೇಝಲ್ವುಡ್ ಅವರ ಮಿಂಚಿನ ಎಸೆತದಲ್ಲಿ ಬೌಲ್ಡ್ ಆದರು. ಅಲ್ಲಿಂದ ಬ್ಯಾಟರ್ಗಳು ಡಗ್ಔಟ್ಗೆ ಸಾಲುಗಟ್ಟಿದರು. ಐವರು ಬ್ಯಾಟರ್ಗಳು ಒಂದಂಕಿಯಷ್ಟೇ ಗಳಿಸಿದರು.

ರಜತ್ ಜೀವದಾನ, ಟೈಟನ್ಸ್ಗೆ ದುಬಾರಿ: ರಜತ್ ಪಾಟೀದಾರ್ ಅವರ ಎರಡು ಕ್ಯಾಚ್ಗಳನ್ನು ಕೈಚೆಲ್ಲಿದ ಟೈಟನ್ಸ್ ತಂಡದ ಫೀಲ್ಡರ್ಗಳು ಪಂದ್ಯದ ಸೋಲಿಗೆ ಪ್ರಮುಖ ಕಾರಣರಾದರು.

ಇದರಿಂದಾಗಿ ರಜತ್ ಅವರ ಬೀಸಾಟ ತಾರಕ ಕ್ಕೇರಿತು. ಅವರ ಆಟದಿಂದಾಗಿ ಐಪಿಎಲ್ ಇತಿಹಾಸ
ದಲ್ಲಿಯೇ ಪ್ಲೇ ಆಫ್ ಹಂತದಲ್ಲಿ ಅತ್ಯಧಿಕ ಮೊತ್ತ ದಾಖಲಾಯಿತು. ರಜತ್ 33 ಎಸೆತಗಳಲ್ಲಿ ಅಜೇಯ 93 ರನ್ ಗಳಿಸಿದರು. ಅದರಲ್ಲಿ 9 ಸಿಕ್ಸರ್ ಮತ್ತು ಐದು ಬೌಂಡರಿ ಇದ್ದವು. ಇದರಿಂದಾಗಿ ಆರ್ಸಿಬಿ ತಂಡಕ್ಕೆ ಇನಿಂಗ್ಸ್ನ ಕೊನೆಯ 5 ಓವರ್ಗಳಲ್ಲಿ 86 ರನ್ಗಳು ಹರಿದುಬಂದವು.

ಫಿಲ್ ಸಾಲ್ಟ್ ಅವರಿಗೆ ವಿಶ್ರಾಂತಿ ನೀಡಲಾಯಿತು. ವಿರಾಟ್ ಕೊಹ್ಲಿ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ವೆಂಕಟೇಶ್ ಅಯ್ಯರ್ (19 ರನ್) ಅವರು ಸಿರಾಜ್ ಹಾಕಿದ ಮೊದಲ ಓವರ್ನಲ್ಲಿಯೇ ರನ್ ಸೂರೆ ಮಾಡಿದರು. ಎರಡನೇ ಓವರ್ನಲ್ಲಿ ಕಗಿಸೊ ರಬಾಡ ಹಾಕಿದ ಎರಡನೇ ಓವರ್ನಲ್ಲಿ ವೆಂಕಟೇಶ್ ಔಟಾದರು.

ಕೊಹ್ಲಿಯೊಂದಿಗೆ ಸೇರಿಕೊಂಡ ದೇವದತ್ತ ಪಡಿಕ್ಕಲ್ (30; 19ಎ) ಇನಿಂಗ್ಸ್ಗೆ ಬಲ ತುಂಬಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಇಬ್ಬರೂ 72 ರನ್ ಸೇರಿಸಿದರು. 9ನೇ ಓವರ್ನಲ್ಲಿ ವಿಂಡೀಸ್ ಆಲ್ರೌಂಡರ್ ಜೇಸನ್ ಹೋಲ್ಡರ್ ಎಸೆತದಲ್ಲಿ ವಿರಾಟ್ ಕ್ಲೀನ್ ಬೌಲ್ಡ್ ಆದರು.

ಸ್ಪಿನ್ನರ್ ರಶೀದ್ ಖಾನ್ ಮತ್ತು ಹೋಲ್ಡರ್ ಅವರು ಮಧ್ಯಮ ಹಂತದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದರು. ಆದರೆ ಪ್ರಸಿದ್ಧಕೃಷ್ಣ ಹಾಕಿದ 14ನೇ ಓವರ್ನಲ್ಲಿ ರಜತ್ 18 ರನ್ ಗಳಿಸಿದರು. ಅದೇ ಓವರ್ನಲ್ಲಿ ರಜತ್ ಅವರಿಗೆ ಎರಡು ಜೀವದಾನ ದೊರೆತವು. ಖೆಜ್ರೊಲಿಯಾ ಅವರು ತಮ್ಮ ನಂತರದ ಓವರ್ಗಳಲ್ಲಿ ಎರಡು ನೋಬಾಲ್ ಮತ್ತು ವೈಡ್ ಕೂಡ ಹಾಕಿದರು. ಅವರ ಒಂದೇ ಓವರ್ನಲ್ಲಿ ಬ್ಯಾಟರ್ಗಳು 28 ರನ್ ಗಳಿಸಿದರು.

ರಜತ್ ಮತ್ತು ಕೃಣಾಲ್ ಪಾಂಡ್ಯ ಅವರು ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 95 ರನ್ ಸೇರಿಸಿದರು. ರಬಾಡ ಬೌಲಿಂಗ್ನಲ್ಲಿ ರಜತ್ ಅವರು ಸಿಕ್ಸರ್ ಹೊಡೆಯುವ ಮೂಲಕ ಅರ್ಧಶತಕದ ಗಡಿ ದಾಟಿದರು. ಇನ್ನೊಂದೆಡೆ ಟಿಮ್ ಡೇವಿಡ್ (4 ರನ್) ಅವರು ಬೇಗನೆ ಔಟಾದರು. ಜಿತೇಶ್ ಶರ್ಮಾ 5 ಎಸೆತಗಳಲ್ಲಿ ಅಜೇಯ 15 ರನ್ ಹೊಡೆದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು: 5ಕ್ಕೆ 254 (20 ಓವರುಗಳಲ್ಲಿ)

ವೆಂಕಟೇಶ್ ಸಿ ಶುಭಮನ್ ಬಿ ರಬಾಡ 19 (7ಎ, 4x3, 6x1)

ಕೊಹ್ಲಿ ಬಿ ಹೋಲ್ಡರ್ 43 (25ಎ, 4x5, 6x1)

ಪಡಿಕ್ಕಲ್ ಸಿ ಬಟ್ಲರ್ ಬಿ ಹೋಲ್ಡರ್ 30 (19ಎ, 4x5)

ರಜತ್ ಪಾಟೀದಾರ್ ಔಟಾಗದೇ 93 (33ಎ, 4x5, 6x9)

ಕೃಣಾಲ್ ಸಿ ಸಾಯಿ ಬಿ ರಬಾಡ 43 (28ಎ, 4x5, 6x2)

ಡೇವಿಡ್ ಬಿ ಪ್ರಸಿದ್ಧ 4 (5ಎ)

ಜಿತೇಶ್ ಶರ್ಮಾ ಔಟಾಗದೇ 15 (5ಎ, 4x1, 6x1)

ಇತರೆ: 7 (ಬೈ 1, ಲೆಗ್ಬೈ 1, ನೋಬಾಲ್ 2, ವೈಡ್ 3)

ವಿಕೆಟ್ ಪತನ: 1–21 (ವೆಂಕಟೇಶ್ ಅಯ್ಯರ್, 1.6), 2–93 (ವಿರಾಟ್ ಕೊಹ್ಲಿ, 8.2), 3–94 (ದೇವದತ್ತ ಪಡಿಕ್ಕಲ್, 8.4), 4–189 (ಕೃಣಾಲ್ ಪಾಂಡ್ಯ, 16.1), 5–214 (ಟಿಮ್ ಡೇವಿಡ್, 17.6).

ಬೌಲಿಂಗ್: ಮೊಹಮ್ಮದ್ ಸಿರಾಜ್ 3–0–46–0; ಕಗಿಸೊ ರಬಾಡ 4–0–54–2; ಜೇಸನ್ ಹೋಲ್ಡರ್ 4–0–39–2; ರಶೀದ್ ಖಾನ್ 3–0–29–0; ಪ್ರಸಿದ್ಧ ಕೃಷ್ಣ 4–0–53–1; ಕುಲವಂತ ಖೆಜ್ರೋಲಿಯಾ 2–0–31–0

ಗುಜರಾತ್ ಟೈಟನ್ಸ್: 162 (19.3 ಓವರ್ಗಳಲ್ಲಿ)

ಸಾಯಿ ಹಿಟ್ವಿಕೆಟ್ ಬಿ ಡಫಿ 14 (9ಎ, 4x3)

ಶುಭಮನ್ ಬಿ ಭುವನೇಶ್ವರ್ 2 (7ಎ)

ಬಟ್ಲರ್ ಬಿ ಹೇಝಲ್ವುಡ್ 29 (11ಎ, 4x4, 6x2)

ನಿಶಾಂತ್ ಸಿ ಮತ್ತು ಬಿ ಸಲಾಂ 5 (3ಎ, 4x1)

ವಾಷಿಂಗ್ಟನ್ ಸಿ ಹೇಝಲ್ವುಡ್ ಬಿ ಡಫಿ 8 (8ಎ, 4x1)

ಹೋಲ್ಡರ್ ಸಿ ಹೇಝಲ್ವುಡ್ ಬಿ ಸಲಾಂ 0 (3ಎ)

ತೆವಾಟಿಯಾ ಸಿ ಪಾಟೀದಾರ್ ಬಿ ಭುವನೇಶ್ವರ್ 68 (43ಎ, 4x8, 6x4)

ರಶೀದ್ ಸಿ ಶರ್ಮಾ ಬಿ ಡಫಿ 8 (9ಎ, 6x1)

ರಬಾಡ ಸಿ ಕೊಹ್ಲಿ ಬಿ ಪಾಂಡ್ಯ 9 (5ಎ, 4x2)

ಸಿರಾಜ್ ಸಿ ಡೇವಿಡ್ ಬಿ ಕೃಣಾಲ್ 5 (13ಎ, 4x1)

ಪ್ರಸಿದ್ಧ ಕೃಷ್ಣ ಔಟಾಗದೇ 6 (7ಎ, 4x1)

ಇತರೆ: 8 (ಲೆಗ್ಬೈ 1, ನೋಬಾಲ್ 1, ವೈಡ್ 6)

ವಿಕೆಟ್ ಪತನ: 1–17 (ಸಾಯಿ ಸುದರ್ಶನ್, 2.3), 2–27 (ಶುಭಮನ್ ಗಿಲ್, 3.1), 3–51 (ಜೋಸ್ ಬಟ್ಲರ್, 4.5), 4–51 (ನಿಶಾಂತ್ ಸಿಂಧು, 5.1), 5–51 (ಜೇಸನ್ ಹೋಲ್ಡರ್, 5.4), 6–65 (ವಾಷಿಂಗ್ಟನ್ ಸುಂದರ್, 8.2), 7-78 (ರಶೀದ್ ಖಾನ್, 10.3), 8–88 (ಕಗಿಸೊ ರಬಾಡ, 11.2), 9–156 (ರಾಹುಲ್ ತೆವಾಟಿಯಾ, 18.1), 10–162 (ಮೊಹಮ್ಮದ್ ಸಿರಾಜ್, 19.3)

ಬೌಲಿಂಗ್: ಜೇಕಬ್ ಡಫಿ 4–0–39–3; ಭುವನೇಶ್ವರ್ ಕುಮಾರ್ 4–0–28–2; ಜೋಶ್ ಹೇಝಲ್ವುಡ್ 4–0–39–1; ರಸಿಕ್ ಸಲಾಂ 3–1–24–2; ಕೃಣಾಲ್ ಪಾಂಡ್ಯ 3.3–0–16–2; ರೊಮಾರಿರೊ ಶೆಫರ್ಡ್ 1–0–15–0

ಪಂದ್ಯದ ಆಟಗಾರ: ರಜತ್ ಪಾಟೀದಾರ್

ಆರೆಂಜ್ ಕ್ಯಾಪ್: ಸಾಯಿ ಸುದರ್ಶನ್ (ಜಿ ಟಿ, 652 ರನ್)

ಪರ್ಪಲ್ ಕ್ಯಾಪ್: ಭುವನೇಶ್ವರ್ ಕುಮಾರ್ (ಆರ್ಸಿಬಿ, 26 ವಿಕೆಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.