ಬೆಂಗಳೂರು: ಹೋದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸಾವಿಗೀಡಾದ 11 ಅಭಿಮಾನಿಗಳ ಗೌರವಾರ್ಥ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮುಖ್ಯ ಕಟ್ಟಡದ ಬಳಿ ಸ್ಮಾರಕ ನಿರ್ಮಿಸಲಾಗಿದೆ.

ಕಪ್ಪು ಶಿಲೆಯಲ್ಲಿ ನಿರ್ಮಾಣ ಮಾಡಲಾಗಿರುವ ಸ್ಮಾರಕದಲ್ಲಿ ಬಿಳಿ ಬಣ್ಣದ ಇಂಗ್ಲಿಷ್ ಅಕ್ಷರಗಳಲ್ಲಿ ‘ಇನ್ ಮೆಮೊರಿ ಆಫ್ ಅವರ್ ಕ್ರಿಕೆಟ್ ಫ್ಯಾನ್ಸ್. 04 ಜೂನ್ 2025’ ಎಂದು ಉಲ್ಲೇಖಿಸಲಾಗಿದೆ.

ಬುಧವಾರ ಈ ಸ್ಮಾರಕ ಅನಾವರಣಗೊಳಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ, ‘ಹೋದ ವರ್ಷ ಈ ಕ್ರೀಡಾಂಗಣದ ಬಳಿ ದುರಂತ ನಡೆದಿತ್ತು. ಆಗ ಸರ್ಕಾರ, ಕೆಎಸ್ಸಿಎ ಬಹಳಷ್ಟು ಟೀಕೆಗಳಿಗೆ ಗುರಿಯಾಗಿದ್ದವು. ಆ ಸಂದರ್ಭದಲ್ಲಿ ಸರ್ಕಾರವು ಮಧ್ಯಪ್ರವೇಶ ಮಾಡಿ ಹಲವು ಕ್ರಮಗಳನ್ನು ಕೈಗೊಂಡಿತು. ಆ ಸಂದರ್ಭದಲ್ಲಿ ಮೃತಪಟ್ಟ ಯುವಕ, ಯುವತಿಯರ ಕುಟುಂಬಗಳಿಗೆ ಸರ್ಕಾರ, ಕೆಎಸ್ಸಿಎ ಮತ್ತು ಆರ್ಸಿಬಿ ಸಂತಾಪ ಸೂಚಿಸಿದ್ದವು. ಇಂತಹ ಘಟನೆ ಆಗಬಾರದಿತ್ತು. ಇದಕ್ಕೆ ಕಾರಣವಾದ ಲೋಪಗಳನ್ನು ಗುರುತಿಸಲು ನ್ಯಾಯಮೂರ್ತಿ ಡಿ ಕುನ್ಹಾ ಅವರ ನಿಯೋಗ ರಚಿಸಲಾಗಿತ್ತು. ಅವರು ನೀಡಿದ ಶಿಫಾರಸುಗಳನ್ನು ಜಾರಿಗೊಳಿಸಲು ಸೂಚಿಸಿದ್ದೆವು. ಅದರ ಪ್ರಕಾರ ಅಲ್ಪಾವಧಿ ಮತ್ತು ದೀರ್ಘಾವಧಿ ಶಿಫಾರಸುಗಳನ್ನು ಜಾರಿ ಮಾಡಲಾಗಿದೆ’ ಎಂದರು.

‘ಇದೇ 28ರಂದು ಐಪಿಎಲ್ ಇಲ್ಲಿ ಪಂದ್ಯ ಆಯೋಜನೆಗೊಳ್ಳಲಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಲ್ಲ ರೀತಿಯ ಕ್ರಮಗಳನ್ನು ಕೆಎಸ್ಸಿಎ, ಆರ್ಸಿಬಿ ಮತ್ತು ಪೊಲೀಸ್ ಇಲಾಖೆ ಸೇರಿದಂತೆ ಎಲ್ಲರೂ ತೆಗೆದುಕೊಂಡಿದ್ದಾರೆ. ಎಲ್ಲವೂ ಉತ್ತಮವಾಗಿ ನಡೆಯುವ ಭರವಸೆ ಇದೆ’ ಎಂದರು.

‘ಮುಂದಿನ ದಿನಗಳಲ್ಲಿ ಏನೇ ಆದರೂ ಕೆಎಸ್ಸಿಎ ಮತ್ತು ಆರ್ಸಿಬಿ ಇಬ್ಬರೂ ಬಾಧ್ಯಸ್ಥರು. ಪ್ರೇಕ್ಷಕರ ಸುರಕ್ಷತೆಗೆ ಆದ್ಯತೆ ನೀಡಬೇಕು’ ಎಂದೂ ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಎಂ.ಎ. ಹ್ಯಾರಿಸ್, ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಉಪಾಧ್ಯಕ್ಷ ಸುಜಿತ್ ಸೋಮಸುಂದರ, ಕಾರ್ಯದರ್ಶಿ ಸಂತೋಷ್ ಮೆನನ್ ಹಾಜರಿದ್ದರು.

ಸ್ಮಾರಕ ಅನಾವರಣಕ್ಕೂ ಮುನ್ನ ಹಿಂದೂ, ಮುಸ್ಲಿಂ, ಕ್ರೈಸ್ತ ಹಾಗೂ ಸಿಖ್ ಧರ್ಮಗುರುಗಳಿಂದ ಪ್ರಾರ್ಥನೆಗಳು ನಡೆದವು. ಬೆಳಿಗ್ಗೆ ಗಣಹೋಮ ಮತ್ತು ವಿಶೇಷ ಪೂಜೆಗಳು ನೆರವೇರಿದವು.

ಪಿ1 ಸ್ಟ್ಯಾಂಡ್ನಲ್ಲಿ 11 ಆಸನ ಖಾಲಿ

ಹೋದ ವರ್ಷ ಕಾಲ್ತುಳಿತದಲ್ಲಿ ಸಾವಿಗೀಡಾದವರ ಗೌರವಕ್ಕಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುವಾಗ 11 ಆಸನಗಳನ್ನು ಖಾಲಿ ಉಳಿಸಲು ನಿರ್ಧರಿಸಲಾಗಿದೆ. ಪಿ1 ಸ್ಟ್ಯಾಂಡ್ನಲ್ಲಿರುವ ಆಸನಗಳನ್ನು ಖಾಲಿ ಇಡಲಾಗುವುದು. ‘ಅದೊಂದು ದುರದೃಷ್ಟಕರ ಘಟನೆ. ಅದರಲ್ಲಿ ಮೃತರಾದವರಿಗೆ ನಮ್ಮ ಸಂಸ್ಥೆಯಿಂದ ಸಕಲ ರೀತಿಯಲ್ಲಿಯೂ ಗೌರವ ಸೂಚಿಸುತ್ತಿದೆ. ಅದರ ಭಾಗವಾಗಿ ಪಿ1 ಸ್ಟ್ಯಾಂಡ್ನಲ್ಲಿ 11 ಆಸನಗಳನ್ನು ಖಾಲಿ ಇಡಲಾಗುವುದು’ ಎಂದು ಕೆಎಸ್ಸಿಎ ವಕ್ತಾರ ವಿನಯ್ ಮೃತ್ಯುಂಜಯ ಸುದ್ದಿಗಾರರಿಗೆ ತಿಳಿಸಿದರು. ಬುಧವಾರ ನಡೆದ ಸ್ಮಾರಕ ಅನಾವರಣದ ಸಂದರ್ಭದಲ್ಲಿ ಮೃತರ ಕುಟುಂಬಗಳ ಅನುಪಸ್ಥಿತಿಯ ಕುರಿತು ಪ್ರತಿಕ್ರಿಯಿಸಿದ ಅವರು ‘ಸರಳ ಸಮಾರಂಭ ಮಾಡಿದ್ದೇವೆ. ಮೃತಪಟ್ಟ ಅಭಿಮಾನಿಗಳ ಪಾಲಕರ ಬಗ್ಗೆ ನಮಗೆ ಸಂಪೂರ್ಣ ಸಹಾನುಭೂತಿ ಇದೆ. ಅವರನ್ನು ಇಲ್ಲಿಗೆ ಕರೆಸುವ ಕುರಿತು ನಮ್ಮ ಸಮಿತಿಯಲ್ಲಿ ಬಹಳಷ್ಟು ಮಾತುಕತೆಯೂ ನಡೆಯಿತು. ಈ ಸಂದರ್ಭದಲ್ಲಿ ಕರೆಸುವುದರಿಂದ ಅವರಲ್ಲಿ ಮತ್ತೆ ನೋವು ಮರುಕಳಿಸುವ ಸಾಧ್ಯತೆಯಿದೆ. ಆದ್ದರಿಂದ ಈ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಲಿಲ್ಲ. ಮುಂದಿನ ದಿನಗಳಲ್ಲಿ ಸೂಕ್ತ ಸಮಯದಲ್ಲಿ ಆಹ್ವಾನಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.