ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 6 ವಿಕೆಟ್ ಅಂತರದ ಜಯ ಸಾಧಿಸಿತು.

ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ, ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 175 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಡೆಲ್ಲಿ, 19.5 ಓವರ್ಗಳಲ್ಲಿ 4 ವಿಕೆಟ್ಗೆ 179 ರನ್ ಬಾರಿಸಿ ಜಯದ ನಗೆ ಬೀರಿತು.

ಡೆಲ್ಲಿ ತಂಡದ ಆರಂಭ ಚೆನ್ನಾಗಿರಲಿಲ್ಲ. ಕೇವಲ 18 ರನ್ ಆಗುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್ಗಳು ಪತನಗೊಂಡವು. ಈ ಹಂತದಲ್ಲಿ ಜೊತೆಯಾದ ಕೆ.ಎಲ್. ರಾಹುಲ್ ಹಾಗೂ ಟ್ರಿಸ್ಟನ್ ಸ್ಟಬ್ಸ್ ಜವಾಬ್ದಾರಿಯುತ ಆಟವಾಡಿದರು. ನಾಲ್ಕನೇ ವಿಕೆಟ್ ಪಾಲುದಾರಿಕೆಯಲ್ಲಿ 79 ರನ್ ಕಲೆಹಾಕುವ ಮೂಲಕ ವಿಕೆಟ್ ಬೀಳದಂತೆ ಎಚ್ಚರ ವಹಿಸಿದರು.

ರಾಹುಲ್, 34 ಎಸೆತಗಳಲ್ಲಿ 57 ರನ್ ಗಳಿಸಿ ಔಟಾದ ನಂತರವೂ, ಸ್ಟಬ್ಸ್ ಚೆಂದದ ಬ್ಯಾಟಿಂಗ್ ಮುಂದುವರಿಸಿದರು. ಡೇವಿಡ್ ಮಿಲ್ಲರ್ (22) ಜೊತೆಗೂಡಿ ಜಯದ ರನ್ ಗಳಿಸುವ ಮೂಲಕ, ಡೆಲ್ಲಿ ಪಡೆಗೆ ಟೂರ್ನಿಯಲ್ಲಿ ಮೂರನೇ ಜಯ ತಂದುಕೊಟ್ಟರು.

ಒಟ್ಟು 47 ಎಸೆತಗಳನ್ನು ಎದುರಿಸಿದ ಅವರು, 60 ರನ್ ಗಳಿಸಿ ಅಜೇಯವಾಗಿ ಉಳಿದರು. ಅವರ ಇನಿಂಗ್ಸ್ನಲ್ಲಿ 1 ಸಿಕ್ಸ್ ಹಾಗೂ 4 ಬೌಂಡರಿಗಳಿದ್ದವು.

ಈ ಜಯದೊಂದಿಗೆ ಡೆಲ್ಲಿ ತಂಡ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.