ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ಸಾಧಿಸಿದೆ.

ಡೆಲ್ಲಿ ವಿರುದ್ಧ ಟಾಸ್ ಗೆದ್ದ ಆರ್ಸಿಬಿ, ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಭುವನೇಶ್ವರ್ ಕುಮಾರ್ (5ಕ್ಕೆ3) ಮತ್ತು ಜೋಶ್ ಹೇಝಲ್ವುಡ್ (12ಕ್ಕೆ4) ಅವರ ಸ್ವಿಂಗ್ ಮತ್ತು ವೇಗದ ದಾಳಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಗ್ರ ಬ್ಯಾಟರ್ಗಳು ತರಗೆಲೆಗಳಂತೆ ಉದುರಿದರು.

ಜೋಶ್ ಹೇಝಲ್ವುಡ್ ಪ್ರಮುಖ ನಾಲ್ಕು ವಿಕೆಟ್ ಪಡೆದರು

ಭುವನೇಶ್ವರ್ ಕುಮಾರ್ ಮೂರು ವಿಕೆಟ್ ಪಡೆದ ಮಿಂಚಿದರು

ರಜತ್ ಪಾಟೀದಾರ್ ಪಡೆಯು ಇದೇ 18ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನುಭವಿಸಿದ ಸೋಲಿಗೆ ಮುಯ್ಯಿ ತೀರಿಸಿಕೊಂಡಿತು.

ಗೆಲುವಿಗೆ ಬೇಕಿದ್ದ 75 ರನ್ಗಳನ್ನು ಹಾಲಿ ಚಾಂಪಿಯನ್ ತಂಡ 6.3 ಓವರುಗಳಲ್ಲೇ (1 ವಿಕೆಟ್ಗೆ 77) ಗಳಿಸಿತು. ‘ದೆಹಲಿಯ ಹುಡುಗ’ ವಿರಾಟ್ ಕೊಹ್ಲಿ (ಔಟಾಗದೇ 23, 15 ಎಸೆತ) ಮತ್ತು ದೇವದತ್ತ ಪಡಿಕ್ಕಲ್ (ಔಟಾಗದೇ 34, 13 ಎಸೆತ) ಔಪಚಾರಿಕತೆ ಪೂರೈಸಿದರು. ಜೇಕಬ್ ಬೆಥೆಲ್ (20) ಬೌಂಡರಿ ಲೈನ್ ಬಳಿ ನಟರಾಜನ್ ಹಿಡಿದ ಅಮೋಘ ಕ್ಯಾಚಿಗೆ ನಿರ್ಗಮಿಸಿದ್ದರು.

ಗೆಲುವಿಗೆ ಬೇಕಿದ್ದ 75 ರನ್ಗಳನ್ನು ಹಾಲಿ ಚಾಂಪಿಯನ್ ತಂಡ 6.3 ಓವರುಗಳಲ್ಲೇ (1 ವಿಕೆಟ್ಗೆ 77) ಗಳಿಸಿತು. ಇದರೊಂದಿಗೆ ಡೆಲ್ಲಿ ವಿರುದ್ಧ ಆರ್ಸಿಬಿ 9 ವಿಕೆಟ್ ಅಂತರದಿಂದ ಗೆಲುವು ಸಾಧಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.