ಬೆಂಗಳೂರು: ವಿರಾಟ್ ಕೊಹ್ಲಿ ಮತ್ತು ದೇವದತ್ತ ಪಡಿಕ್ಕಲ್ ಅವರು ಮಿಂಚಿನ ಅರ್ಧಶತಕಗಳ ಮೂಲಕ ತವರಿನ ಪ್ರೇಕ್ಷಕರಿಗೆ ಭರಪೂರ ರಸದೌತಣ ಉಣಬಡಿಸಿದರು. ಗುಜರಾತ್ ಟೈಟನ್ಸ್ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಬಿರುಸಿನ ಶತಕದ ಜೊತೆಯಾಟವಾಡಿದ ಈ ಜೋಡಿ, ಬೆಂಗಳೂರಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಅಭಿಮಾನಿಗಳಿಗೆ ಗೆಲುವಿನ ಉಡುಗೊರೆ ನೀಡಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಆರಂಭ ಆಟಗಾರ ಸಾಯಿ ಸುದರ್ಶನ್ (100, 58 ಎಸೆತ) ಅವರ ಆಕರ್ಷಕ ಶತಕದ ನೆರವಿನಿಂದ ಗುಜರಾತ್ ಟೈಟನ್ಸ್ 3 ವಿಕೆಟ್ಗೆ 205 ರನ್ಗಳ ಉತ್ತಮ ಮೊತ್ತ ಗಳಿಸಿತ್ತು. ಅದರೆ ಎದುರಿಸಿದ ಮೊದಲ ಎಸೆತದಲ್ಲೇ ಜೀವದಾನ ಪಡೆದಿದ್ದ ಕೊಹ್ಲಿ (81, 44 ಎಸೆತ) ಮತ್ತು ಸ್ಥಳೀಯ ಹೀರೊ ಪಡಿಕ್ಕಲ್ (55, 27 ಎಸೆತ, 4x2, 6x6) ಈ ಮೊತ್ತವನ್ನು ಸವಾಲೇ ಅಲ್ಲವೆಂಬಂತೆ ಆಡತೊಡಗಿದರು. 115 ರನ್ಗಳ ಈ ಜೊತೆಯಾಟ ಗೆಲುವಿಗೆ ಸೋಪಾನವಾಯಿತು.

ಇವರಿಬ್ಬರ ನಿರ್ಗಮನ ನಂತರ ನಾಯಕ ರಜತ್ ಪಾಟೀದಾರ್, ಜಿತೇಶ್ ಶರ್ಮಾ ಬೇಗ ನಿರ್ಗಮಿಸಿದರೂ ಗುರಿ ದೂರವಿರಲಿಲ್ಲ. ಎಲ್ಲರೂ ಅವಸರದಲ್ಲಿದ್ದಂತೆ ಕಂಡರು. ಕೊನೆಯಲ್ಲಿ ಟಿಮ್ ಡೇವಿಡ್ (ಅಜೇಯ 10) ಮತ್ತು ಕೃಣಾಲ್ ಪಾಂಡ್ಯ (ಔಟಾಗದೇ 23, 12 ಎಸೆತ) ಅವರು ಇನ್ನೂ ಏಳು ಎಸೆತಗಳಿರುವಂತೆ (5ಕ್ಕೆ 206) ತಂಡವನ್ನು ಗುರಿತಲುಪಿಸಿದರು. ಪಾಯಿಂಟ್ಸ್ ಪಟ್ಟಿಯಲ್ಲಿ ಆರ್ಸಿಬಿ ಎರಡನೇ ಸ್ಥಾನಕ್ಕೇರಿತು.

ಮೊಹಮದ್ ಸಿರಾಜ್ ಬೌಲಿಂಗ್ನಲ್ಲಿ ಮಿಡ್ ವಿಕೆಟ್ನಲ್ಲಿದ್ದ ವಾಷಿಂಗ್ಟನ್ ಸುಂದರ್ ಅವರು ಕೊಹ್ಲಿ ಅವರ ಕ್ಯಾಚ್ ಬಿಟ್ಟಿದ್ದು ದುಬಾರಿಯಾಯಿತು. ಆಗಿನ್ನೂ ಅವರು ಖಾತೆ ತೆರೆದಿರಲಿಲ್ಲ. ಮೊದಲ ಪಂದ್ಯ ಆಡುವ ಅವಕಾಶ ಪಡೆದ ಇಂಗ್ಲೆಂಡ್ನ ಯುವ ಬ್ಯಾಟರ್ ಜೇಕಬ್ ಬೆಥೆಲ್ ಅವರು ಸಿರಾಜ್ ಬೌಲಿಂಗ್ನಲ್ಲಿ ಪಾಯಿಂಟ್ನಲ್ಲಿ ಕ್ಯಾಚಿತ್ತರು. ನಂತರ ಕೊಹ್ಲಿ ಮತ್ತು ಪಡಿಕ್ಕಲ್ ಅವರ ಆಟದ ವೈಭವ ಭರ್ತಿಯಾಗಿದ್ದ ಪ್ರೇಕ್ಷಕರಿಗೆ ಮುದ ನೀಡಿತು.

ಕಗಿಸೊ ರಬಾಡ, ಪ್ರಸಿದ್ಧ ಕೃಷ್ಣ, ರಶೀದ್ ಖಾನ್ ಅವರೆಲ್ಲರನ್ನೂ ಈ ಇಬ್ಬರು ದಂಡಿಸಿದರು. ಇಬ್ಬರೂ ಪೈಪೋಟಿಯಲ್ಲಿ ಆಡಿದರು. ರಶೀದ್ ಖಾನ್ ಬೌಲಿಂಗ್ನಲ್ಲಿ ಸತತ ಎಸೆತಗಳಲ್ಲಿ ಸಿಕ್ಸರ್ಗಳನ್ನು ಸಿಡಿಸಿದ ದೇವದತ್ತ ಪಡಿಕ್ಕಲ್ ಮೊದಲು ಅರ್ಧ ಶತಕ ದಾಟಿದರು. ಮರು ಓವರಿನಲ್ಲಿ ಕೊಹ್ಲಿ ಸಹ ಅರ್ಧ ಶತಕ ದಾಟಿದರು.

ರಬಾಡ ಬೌಲಿಂಗ್ನಲ್ಲಿ ಫ್ಲಿಕ್ ಮಾಡುವ ಮೂಲಕ ಸಿಕ್ಸರ್ ಗಳಿಸಿದ ಕೊಹ್ಲಿ ಶತಕದ ಜೊತೆಯಾಟ ಪೂರೈಸಿದರು. ಆದರೆ ಇಬ್ಬರೂ ಅಲ್ಪಅಂತರದಲ್ಲಿ ನಿರ್ಗಮಿಸಿದರು. ಮೊತ್ತ 141 ರನ್ಗಳಾಗಿದ್ದಾಗ ರಶೀದ್ ಖಾನ್ ಅವರ ಗೂಗ್ಲಿ ಎಸೆತದಲ್ಲಿ ಮುನ್ನುಗ್ಗಿ ಹೊಡೆಯಲು ಯತ್ನಿಸಿದ ಪಡಿಕ್ಕಲ್ ಬೌಲ್ಡ್ ಆದರು. 13 ರನ್ಗಳ ತರುವಾಯ ಹೋಲ್ಡರ್ ಅವರ ಬೌನ್ಸರ್ನಲ್ಲಿ ಇನ್ಸೈಡ್ ಎಜ್ ಆಗಿ ಬೌಲ್ಡ್ ಆದರು. ಭೋರ್ಗರೆಯುತ್ತಿದ್ದ ಹರ್ಷೋದ್ಗಾರಗಳ ನಡುವೆ ತಂಡದ ಉತ್ಸಾಹಕ್ಕೆ ಅಡ್ಡಿಯಾಗಲಿಲ್ಲ.

ಮಿಂಚಿದ ಸಾಯಿ:

ಇದಕ್ಕೆ ಮೊದಲು, ಸಾಯಿ ಸುದರ್ಶನ್ ಅಮೋಘ ಆಟದ ನೆರವಿನಿಂದ ನೆರವಿನಿಂದ ಗುಜರಾತ್ ಟೈಟನ್ಸ್ ತಂಡ ಸವಾಲಿನ ಮೊತ್ತ ದಾಖಲಿಸಿತ್ತು. ಈ ಋತುವಿನಲ್ಲಿ ಸ್ವಲ್ಪ ಮಂಕಾಗಿದ್ದಂತೆ ಕಂಡಿದ್ದ ಬ್ಯಾಟರ್ ಸಾಯಿ ಈ ಪಂದ್ಯಕ್ಕೆ ಮೊದಲು ಆರು ಇನಿಂಗ್ಸ್ಗಳಲ್ಲಿ ಒಂದು ಅರ್ಧ ಶತಕ ಮಾತ್ರ ಗಳಿಸಿದ್ದರು. ಐಪಿಎಲ್ ಋತು ಅರ್ಧ ಹಾದಿ ಸಾಗುತ್ತಿರುವ ಹಂತದಲ್ಲಿ ಅವರು ಲಯಕ್ಕೆ ಮರಳಿದರು.

ಮೊದಲ ವಿಕೆಟ್ಗೆ ನಾಯಕ ಶುಭಮನ್ ಗಿಲ್ (32, 24 ಎಸೆತ) ಜೊತೆ 128 ರನ್ (76 ಎಸೆತ) ಸೇರಿಸಿ ಒಳ್ಳೆಯ ಬುನಾದಿ ಒದಗಿಸಿಕೊಟ್ಟರು. ಸುದರ್ಶನ್ ಲಯಕ್ಕೆ ಬರುತ್ತಿದ್ದಂತೆ ಗಿಲ್ ಬೆಂಬಲಿಗನ ಕೆಲಸವನ್ನಷ್ಟೇ ಮಾಡಿದರು. ಆಕರ್ಷಕ ಕಟ್, ಡ್ರೈವ್ ಮತ್ತು ಸ್ಕೂಪ್ಗಳ ಮೂಲಕ ರನ್ ಪೇರಿಸುತ್ತ ಹೋಗಿದ್ದು ಅವರ ವಿಶ್ವಾಸವನ್ನು ಸಾರಿತು. ಐದನೇ ಓವರಿನಲ್ಲಿ ಜೋಶ್ ಹ್ಯಾಜಲ್ವುಡ್ ಬೌಲಿಂಗ್ನಲ್ಲಿ ಕಟ್ ಮಾಡಿ ಬ್ಯಾಕ್ವರ್ಡ್ ಪಾಯಿಂಟ್ ಮೇಲೆ ಪಂದ್ಯದ ಮೊದಲ ಸಿಕ್ಸರ್ ಎತ್ತಿದರು.

ಆರನೇ ಓವರಿನಲ್ಲಿ (ರಸಿಕ್ ಸಲಾಂ ಧರ್) ಬೌಲಿಂಗ್ನಲ್ಲಿ ಲಾಂಗ್ ಆನ್ಗೆ ಬೌಂಡರಿ ಬಾರಿಸಿ ಅರ್ಧ ಶತಕ ಗಳಿಸಿದರು. ಪವರ್ಪ್ಲೇ ಮುಗಿದಾಗ ಮೊತ್ತ ವಿಕೆಟ್ ನಷ್ಟವಿಲ್ಲದೇ 57. ಕೃಣಾಲ್ ಪಾಂಡ್ಯ ಅವರ ‘ಬೌನ್ಸರ್’ ಒಂದನ್ನು ಬ್ಯಾಕ್ವರ್ಡ್ ಪಾಯಿಂಟ್ ಮೇಲೆ ಸಿಕ್ಸರ್ಗೆ ಎತ್ತಿದ ಸಾಯಿ ಐಪಿಎಲ್ನಲ್ಲಿ ಅತಿ ವೇಗವಾಗಿ 2000 ರನ್ ಪೂರೈಸಿದ ಶ್ರೇಯಕ್ಕೆ ಪಾತ್ರರಾದರು.

ಸುಯಶ್ ಶರ್ಮಾ ಕೊನೆಗೂ ಈ ಜೊತೆಯಾಟ ಮುರಿದರು. ಚೆಂಡನ್ನು ಲಾಂಗ್ಆನ್ ಮೇಲೆ ಆಡಲು ಹೋಗಿ ದೇವದತ್ತ ಪಡಿಕ್ಕಲ್ ಅವರಿಗೆ ಕ್ಯಾಚ್ ನೀಡಿದರು. ಆರ್ಸಿಬಿ ಅಭಿಮಾನಿಗಳ ಗಡಣ ಮೊದಲ ಬಾರಿ ಸಂಭ್ರಮಿಸಿತು.

ಸುಯಶ್ ಅವರ ಮರುಓವರಿನಲ್ಲಿ ಕವರ್ ಪಾಯಿಂಟ್ಗೆ ಆಡಿ ಒಂದು ರನ್ ಗಳಿಸಿದ ಸಾಯಿ ಐಪಿಎಲ್ನಲ್ಲಿ ಮೂರನೇ ಶತಕ ಪೂರೈಸಿ ಸಂಭ್ರಮಿಸಿದರು. ಆದರೆ ಮುಂದಿನ ಓವರಿನಲ್ಲಿ ಜೋಶ್ ಹ್ಯಾಜಲ್ವುಡ್ ಬೌಲಿಂಗ್ನಲ್ಲಿ ತಡವರಿಸಿ ಅವರಿಗೇ ರಿಟರ್ನ್ಕ್ಯಾಚ್ ನೀಡಿದರು.

ಜೋಸ್ ಬಟ್ಲರ್ (25, 16 ಎಸೆತ) ಕೂಡ ರನ್ ವೇಗ ಹೆಚ್ಚಿಸುವತ್ತ ಲಕ್ಷ್ಯ ನೀಡಿದರು. ಅವರು ಭುವನೇಶ್ವರ್ ಕುಮಾರ್ ಬೌಲಿಂಗ್ನಲ್ಲಿ ‘ರಿವರ್ಸ್ ಸ್ಕೂಪ್’ ಯತ್ನದಲ್ಲಿ ಶಾರ್ಟ್ ಥರ್ಡ್ಮ್ಯಾನ್ನಲ್ಲಿದ್ದ ಹ್ಯಾಜಲ್ವುಡ್ಗೆ ಸುಲಭ ಕ್ಯಾಚಿತ್ತರು.

ವಾಷಿಂಗ್ಟನ್ ಸುಂದರ್ (19, 12 ಎಸೆತ) ಜೊತೆಗೂಡಿದ ಜೇಸನ್ ಹೋಲ್ಡರ್ (23, 10ಎಸೆತ) ತಂಡದ ಮೊತ್ತ 200 ದಾಟಿಸಿದರು. ಮೊದಲ ಪಂದ್ಯ ಆಡುವ ಅವಕಾಶ ಪಡೆದ ಹೋಲ್ಡರ್, ಕೃಣಾಲ್ ಪಾಂಡ್ಯ ಮಾಡಿದ ಅಂತಿಮ ಓವರಿನಲ್ಲಿ ಒಂದು ಬೌಂಡರಿ, ಎರಡು ಸಿಕ್ಸರ್ಗಳು ಸೇರಿದಂತೆ 18 ರನ್ ಬಾಚಿದರು.

ಆರ್ಸಿಬಿಯ ಆರಂಭ ಆಟಗಾರ ಫಿಲ್ ಸಾಲ್ಟ್ ಗಾಯಾಳಾಗಿ ಪಂದ್ಯಕ್ಕೆ ಅಲಭ್ಯರಾಗಿದ್ದರು. ಹೀಗಾಗಿ ಜೇಕಬ್ ಬೆಥೆಲ್ ಅವಕಾಶ ಪಡೆದರು.

ವೇಗವಾಗಿ 2000 ರನ್ ದಾಟಿದ ಸಾಯಿ:

ಅಮೋಘ ಶತಕ ಬಾರಿಸಿದ ಸಾಯಿ ಸುದರ್ಶನ್ ಈ ಪಂದ್ಯದಲ್ಲಿ 2000 ರನ್ಗಳ ಮೈಲಿಗಲ್ಲನ್ನು ಅತಿ ವೇಗವಾಗಿ ದಾಟಿದ ಗೌರವಕ್ಕೆ ಪಾತ್ರರಾದರು. ಅವರಿಗೆ ಇದು 47ನೇ ಪಂದ್ಯ. ಈ ಪಂದ್ಯಕ್ಕೆ ಮೊದಲು ಅವರಿಗೆ ಈ ಮೈಲಿಗಲ್ಲು ತಲುಪಲು 72 ರನ್ಗಳ ಅಗತ್ಯವಿತ್ತು. ಆರ್ಸಿಬಿಯ ಕ್ರಿಸ್ ಗೇಲ್ 48 ಇನಿಂಗ್ಸ್ಗಳಲ್ಲಿ 2000 ರನ್ ದಾಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.