ಬೆಂಗಳೂರು: ಬೇಸಿಗೆಯ ಕಾವಿಗೆ ಬಸವಳಿ ದಿದ್ದ ಬೆಂಗಳೂರಿನ ಅಭಿಮಾನಿಗಳ ಮನಗಳಿಗೆ ಜಮ್ಮು–ಕಾಶ್ಮೀರ ಕಣಿವೆಯ ರಸಿಕ್ ಸಲಾಮ್ ಡಾರ್ ಸಂತಸದ ಧಾರೆಯೆರೆದರು.

ಅವರ ಅಮೋಘ ಬೌಲಿಂಗ್ ಬಲದಿಂದ ರಾಯಲ್ ಚಾಲೆಂಜರ್ ಬೆಂಗಳೂರು ತಂಡವು ತವರಿನಂಗಳದಲ್ಲಿ
ಗೆಲುವಿನ ‘ಹ್ಯಾಟ್ರಿಕ್’ ಸಾಧಿಸಿತು. ಲಖನೌ ಸೂಪರ್ ಜೈಂಟ್ಸ್ 5 ವಿಕೆಟ್ಗಳಿಂದ ಸೋತಿತು. ರಜತ್ ಪಾಟೀದಾರ್ ಬಳಗವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಜಿಗಿಯಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ಸೇರಿದ್ದ 29 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರ ಸಮ್ಮುಖದಲ್ಲಿ ಆರ್ಸಿಬಿ, ಲಖನೌ ವಿರುದ್ಧ ಏಕಪಕ್ಷೀಯ ಜಯ ಸಾಧಿಸಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಆತಿಥೇಯ ಬಳಗವು ಎಲ್ಲ ವಿಭಾಗಗಳಲ್ಲಿಯೂ ಪಾರಮ್ಯ ಮೆರೆಯಿತು. ಲಖನೌ ತಂಡದ ಬ್ಯಾಟಿಂಗ್ ವಿಭಾಗದ ದೌರ್ಬಲ್ಯವನ್ನು ರಸಿಕ್ (4–0–24–4) ಅನಾವರಣಗೊಳಿಸಿದರು.
ಅವರ ನಿಖರ ದಾಳಿಗೆ ಬ್ಯಾಟರ್ಗಳು ಹೆಜ್ಜೆ ತಪ್ಪಿದರು. ಲಖನೌ ತಂಡವು 20 ಓವರ್ಗಳಲ್ಲಿ 146 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಅನುಭವಿ ವೇಗಿ ಭುವನೇಶ್ವರ್ ಕುಮಾರ್ (4–0–27–3) ಕೂಡ ಮಿಂಚಿದರು. ಸ್ಪಿನ್ನರ್ ಕೃಣಾಲ್ ಪಾಂಡ್ಯ (38ಕ್ಕೆ2) ಅವರು ಐಪಿಎಲ್ನಲ್ಲಿ 100 ವಿಕೆಟ್ ಪೂರ್ಣಗೊಳಿಸಿಕೊಂಡರು.

ಗುರಿ ಬೆನ್ನಟ್ಟಿದ ಆರ್ಸಿಬಿಯು 5 ವಿಕೆಟ್ ಕಳೆದುಕೊಂಡು 149 ರನ್ ಗಳಿಸಿತು. ಇನ್ನೂ 29 ಎಸೆತಗಳು ಬಾಕಿಯಿರುವಾಗಲೇ ಜಯಿಸಿತು. ಆದರೆ ಕೇವಲ ಒಂದು ರನ್ ಅಂತರದಿಂದ ವಿರಾಟ್ ಕೊಹ್ಲಿ (49; 34ಎ) ಅರ್ಧಶತಕ ಕೈತಪ್ಪಿಸಿಕೊಂಡರು.
ಅವರು ಈ ಪಂದ್ಯದಲ್ಲಿ ಫೀಲ್ಡಿಂಗ್ ಮಾಡಲಿಲ್ಲ. ಇಂಪ್ಯಾಕ್ಟ್ ಸಬ್ಸ್ಟಿಟ್ಯೂಟ್ ಆಗಿ ಬ್ಯಾಟಿಂಗ್ಗೆ ಮಾತ್ರ ಬಂದರು.

ರಜತ್ ಪಾಟೀದಾರ್ (27; 13ಎ), ಜಿತೇಶ್ ಶರ್ಮಾ (23; 9ಎ), ಟಿಮ್ ಡೇವಿಡ್ (ಔಟಾಗದೇ 14) ಮತ್ತು ರೊಮೆರಿಯೊ ಶೆಫರ್ಡ್ (ಔಟಾಗದೇ 14) ಕೂಡ ತಮ್ಮ ಕಾಣಿಕೆ ನೀಡಿದರು. ಲಖನೌ ತಂಡದ ಅನುಭವಿ ವೇಗಿ ಮೊಹಮ್ಮದ್ ಶಮಿ ಹಾಗೂ ಸ್ಪಿನ್ನರ್ ದಿಗ್ವೇಶ್ ಸಿಂಗ್ ರಾಠಿ ಅವರ ಮೋಡಿ ನಡೆಯಲಿಲ್ಲ. ಪ್ರಿನ್ಸ್ ಯಾದವ್ ಮತ್ತು ಆವೇಶ್ ಖಾನ್ ಅವರು ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್ ಪಡೆದರು.

ರಸಿಕ್ ದಾಳಿ: ಲಖನೌ ತಂಡದ ಆರಂಭಿಕ ಜೋಡಿ ಮಿಚೆಲ್ ಮಾರ್ಷ್ (40 ರನ್) ಮತ್ತು ಏಡನ್ ಮರ್ಕರಂ (12 ರನ್) ಅವರು ಜೋಶ್ ಹ್ಯಾಜಲ್ವುಡ್ ಮತ್ತು ಭುವನೇಶ್ವರ್ ಅವರ ದಾಳಿಯನ್ನು ಎಚ್ಚರಿಕೆಯಿಂದ ಎದುರಿಸಿ ಆಟಕ್ಕೆ ಕುದುರಿಕೊಂಡಿದ್ದರು.

ಆದರೆ ನಾಲ್ಕನೇ ಓವರ್ನಲ್ಲಿ ರಸಿಕ್ ಕೈಗೆ ಚೆಂಡು ಕೊಟ್ಟ ರಜತ್ ಪಾಟೀದಾರ್ ತಂತ್ರಗಾರಿಕೆ ಫಲ ನೀಡಿತು. ನಿಧಾನಗತಿಯ ಫುಲ್ ಟಾಸ್ ಎಸೆತವನ್ನು ಫ್ಲಿಕ್ ಮಾಡುವ ಮರ್ಕರಂ ಪ್ರಯತ್ನ ಕೈಕೊಟ್ಟಿತು. ಬ್ಯಾಟ್ ಮೇಲ್ಮೈಗೆ ಅಪ್ಪಳಿಸಿದ ಚೆಂಡು ಮೇಲಕ್ಕೆ ಚಿಮ್ಮಿತು. ಕವರ್ಸ್ನಲ್ಲಿದ್ದ ದೇವದತ್ತ ಪಡಿಕ್ಕಲ್ಗೆ ಸುಲಭ ಕ್ಯಾಚ್ ಆಯಿತು. ಅಲ್ಲಿಂದ ಲಖನೌ ತಂಡದ ಹಿನ್ನಡೆ ಆರಂಭವಾಯಿತು.

ನಿಕೊಲಸ್ ಪೂರನ್ ಲಯಕ್ಕೆ ಮರಳ ದಂತೆ ಹ್ಯಾಜಲ್ವುಡ್ ನೋಡಿಕೊಂಡರು. ಹ್ಯಾಜಲ್ವುಡ್ ಹಾಕಿದ ಐದನೇ ಓವರ್ನ ಎಸೆತವೊಂದನ್ನು ಆಡುವ ಭರದಲ್ಲಿ ರಿಷಭ್ ಪಂತ್ ಎಡಗೈ ಮೊಣಕೈಗೆ ಪೆಟ್ಟಾಯಿತು. ಚೆಂಡು ಬಡಿದ ರಭಸಕ್ಕೆ ರಿಷಭ್ ನೋವಿನಿಂದ ಮುಖ ಕಿವುಚಿಕೊಂಡರು. ಪ್ರಥಮ ಚಿಕಿತ್ಸೆ ನೀಡಿದ ಫಿಸಿಯೊ ಜೊತೆಗೆ ಡಗ್ಔಟ್ಗೆ ತೆರಳಿದರು. ಅವರು 16ನೇ ಓವರ್ನಲ್ಲಿ ಕ್ರೀಸ್ಗೆ ಮರಳುವ ಹೊತ್ತಿಗೆ ಇನಿಂಗ್ಸ್ ಮೇಲೆ ಆರ್ಸಿಬಿಯ ಹಿಡಿತ ಬಿಗಿಯಾಗಿತ್ತು. ಈ ಒತ್ತಡದಲ್ಲಿ ರಿಷಭ್ ಅವರಿಗೂ ಹೆಚ್ಚು ಹೊತ್ತು ಆಡಲು ಸಾಧ್ಯವಾಗಲಿಲ್ಲ. ಕೇವಲ ಒಂದು ರನ್ ಹೊಡೆದು ಭುವನೇಶ್ವರ್ ಅವರಿಗೆ ಕ್ಯಾಚಿತ್ತರು.

ಲಖನೌ ಮೊತ್ತ ಹೆಚ್ಚಿಸುವ ಪ್ರಯತ್ನದಲ್ಲಿದ್ದ ಆಯುಷ್ ಬಡೋನಿ (38; 24ಎ) ಅವರ ವಿಕೆಟ್ ರಸಿಕ್ ಪಾಲಾಗಿತ್ತು. 39 ರನ್ ಗಳಿಸಿದ ಮುಕುಲ್ ಚೌಧರಿಗೆ 20ನೇ ಓವರ್ನಲ್ಲಿ ರಸಿಕ್ ಪೆವಿಲಿಯನ್ ದಾರಿ ತೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.