ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಉದ್ಘಾಟನಾ ಪಂದ್ಯದಲ್ಲಿ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶುಭಾರಂಭ ಮಾಡಿಕೊಂಡಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಎಸ್ಆರ್ಎಚ್, ನಾಯಕ ಇಶಾನ್ ಕಿಶನ್ ಅಬ್ಬರದೊಂದಿಗೆ (80 ರನ್) ಒಂಬತ್ತು ವಿಕೆಟ್ ನಷ್ಟಕ್ಕೆ 201 ರನ್ಗಳ ಸವಾಲಿನ ಮೊತ್ತ ಪೇರಿಸಿತು.

ಈ ಗುರಿ ಬೆನ್ನಟ್ಟಿದ ಆರ್ಸಿಬಿ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ (ಅಜೇಯ 69), ಸ್ಥಳೀಯ ಹೀರೊ ದೇವದತ್ತ ಪಡಿಕ್ಕಲ್ (61) ಹಾಗೂ ನಾಯಕ ರಜತ್ ಪಾಟೀದಾರ್ (31) ಬಿರುಸಿನ ಬ್ಯಾಟಿಂಗ್ ನೆರವಿನಿಂದ 15.4 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
.RCB vs SRH: ‘ಚಿನ್ನಸ್ವಾಮಿ’ಯಲ್ಲಿ ಆರ್ಸಿಬಿ ಶುಭಾರಂಭ.RCB ಹೆಸರು ಬದಲಾವಣೆ: ವದಂತಿಗಳಿಗೆ ಉತ್ತರಿಸಿದ ಅನನ್ಯಾ ಬಿರ್ಲಾ.
ದಾಖಲೆ ವೇಗದ ಚೇಸ್…

ಆ ಮೂಲಕ 200ಗಿಂತಲೂ ಹೆಚ್ಚು ರನ್ಗಳನ್ನು ದಾಖಲೆ ವೇಗದಲ್ಲಿ ಚೇಸ್ ಮಾಡಿದ ದಾಖಲೆಯನ್ನು ಆರ್ಸಿಬಿ ಬರೆಯಿತು. ಇನ್ನು 4.2 ಓವರ್ಗಳು ಬಾಕಿ ಇರುವಂತೆಯೇ ಆರ್ಸಿಬಿ ಗೆಲುವು ದಾಖಲಿಸಿತು. 2025ರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 15.5 ಓವರ್ಗಳಲ್ಲಿ ಚೇಸ್ ಮಾಡಿರುವುದು ಈವರೆಗಿನ ದಾಖಲೆಯಾಗಿತ್ತು. ಇನ್ನು 2024ರಲ್ಲಿ ಗುಜರಾತ್ ವಿರುದ್ಧವೇ ಆರ್ಸಿಬಿ 16 ಓವರ್ಗಳಲ್ಲಿ ಗುರಿ ಮುಟ್ಟಿತ್ತು.

4ನೇ ಸಲ 200 ಪ್ಲಸ್ ರನ್ ಚೇಸ್…

ಐಪಿಎಲ್ನಲ್ಲಿ ನಾಲ್ಕನೇ ಸಲ 200 ಅಥವಾ ಅದಕ್ಕಿಂತಲೂ ಹೆಚ್ಚು ರನ್ ಚೇಸ್ ಮಾಡಿದ ದಾಖಲೆಯನ್ನು ಆರ್ಸಿಬಿ ಬರೆಯಿತು.

ಇಲ್ಲಿದೆ ಪಟ್ಟಿ:

2026ರಲ್ಲಿ ಎಸ್ಆರ್ಎಚ್ ವಿರುದ್ಧ 201 ರನ್ ಚೇಸ್

2025ರಲ್ಲಿ ಲಖನೌ ವಿರುದ್ಧ 228 ರನ್ ಚೇಸ್

2024ರಲ್ಲಿ ಗುಜರಾತ್ ವಿರುದ್ಧ 201 ರನ್ ಚೇಸ್

2010ರಲ್ಲಿ ಪಂಜಾಬ್ ವಿರುದ್ಧ 204 ರನ್ ಚೇಸ್

ಚೇಸ್ ಮಾಸ್ಟರ್ ವಿರಾಟ್ ದಾಖಲೆ…

4027 - ಇದು ಐಪಿಎಲ್ ಇತಿಹಾಸದಲ್ಲಿ ಚೇಸಿಂಗ್ ವೇಳೆ ವಿರಾಟ್ ಕೊಹ್ಲಿ ಗಳಿಸಿದ ರನ್ಗಳು. ಆ ಮೂಲಕ ಚೇಸಿಂಗ್ನಲ್ಲಿ ವೈಯಕ್ತಿಕವಾಗಿ 4,000 ರನ್ಗಳ ಮೈಲಿಗಲ್ಲು ತಲುಪಿದ ಮೊದಲ ಬ್ಯಾಟರ್ ಎನಿಸಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ವಾರ್ನರ್ ಚೇಸ್ ವೇಳೆ 3,285 ರನ್ ಗಳಿಸಿದ್ದರು.

ಐಪಿಎಲ್ನಲ್ಲಿ 64ನೇ ಅರ್ಧಶತಕ…

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಖ್ಯಾತಿ ಹೊಂದಿರುವ ವಿರಾಟ್ ಕೊಹ್ಲಿ ಒಟ್ಟು 64 ಅರ್ಧಶತಕಗಳನ್ನು ಗಳಿಸಿದ್ದಾರೆ. ಎಂಟು ಶತಕಗಳು ಅವರ ಹೆಸರಿನಲ್ಲಿದೆ. ಎರಡನೇ ಸ್ಥಾನದಲ್ಲಿರುವ ಡೇವಿಡ್ ವಾರ್ನರ್ 62 ಅರ್ಧಶತಕಗಳನ್ನು ಗಳಿಸಿದ್ದರು.

ಈ ಪೈಕಿ ವಿರಾಟ್, ಏಳು ಅರ್ಧಶತಕಗಳನ್ನು ಎಸ್ಆರ್ಎಚ್ ವಿರುದ್ಧವೇ ಗಳಿಸಿದ್ದಾರೆ.

21 ಎಸೆತಗಳಲ್ಲಿ ದೇವದತ್ತ ಫಿಫ್ಟಿ…

ಕೇವಲ 21 ಎಸೆತಗಳಲ್ಲಿ ದೇವದತ್ತ ಪಡಿಕ್ಕಲ್ ಅರ್ಧಶತಕದ ಸಾಧನೆ ಮಾಡಿದ್ದಾರೆ. ಇದು ಐಪಿಎಲ್ನಲ್ಲಿ ಅವರ ವೇಗದ ಅರ್ಧಶತಕವಾಗಿದೆ. ಸ್ಥಳೀಯ ಪ್ರೇಕ್ಷಕರ ಮುಂದೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ದೇವದತ್ತ 26 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ 61 ರನ್ ಗಳಿಸಿದರು.

ಕೊಹ್ಲಿ-ಪಡಿಕ್ಕಲ್ ವೈಭವ…

ಐಪಿಎಲ್ ಚೇಸಿಂಗ್ ವೇಳೆ 500ಕ್ಕೂ ರನ್ಗಳ ಜೊತೆಯಾಟ ಗಳಿಸಿದ ಜೋಡಿಯನ್ನು ಗಮನಿಸಿದಾಗ ಕೊಹ್ಲಿ ಹಾಗೂ ಪಡಿಕ್ಕಲ್ 71.72ರ ಸರಾಸರಿಯನ್ನು ಕಾಪಾಡಿಕೊಂಡಿದ್ದಾರೆ. ಇದು ದಾಖಲೆಯಾಗಿದೆ.

ಜೇಕಬ್ ಡಫಿ ಪಂದ್ಯಶ್ರೇಷ್ಠ

ಆರ್ಸಿಬಿ ಪರ ಚೊಚ್ಚಲ ಪಂದ್ಯದಲ್ಲೇ ಮಿಂಚಿನ ಪ್ರದರ್ಶನ ನೀಡಿದ ವೇಗದ ಬೌಲರ್ ಜೇಕಬ್ ಡಫಿ, ಮೂರು ವಿಕೆಟ್ ಗಳಿಸುವ ಮೂಲಕ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಅನಿಕೇತ್ ಸಿಕ್ಸರ್

ಐಪಿಎಲ್ನಲ್ಲಿ ಭರವಸೆ ಮೂಡಿಸಿರುವ ಯುವ ಬ್ಯಾಟರ್ ಅನಿಕೇತ್ ವರ್ಮಾ ಈವರೆಗೆ ಎದುರಿಸಿರುವ 160 ಎಸೆತಗಳಲ್ಲಿ 24 ಸಿಕ್ಸರ್ಗಳ ಸಾಧನೆ ಮಾಡಿದ್ದಾರೆ. ಆರ್ಸಿಬಿ ವಿರುದ್ಧ 18 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ಮೂರು ಬೌಂಡರಿಗಳ ನೆರವಿನಿಂದ 43 ರನ್ ಗಳಿಸಿದ್ದರು.

233 ಪಂದ್ಯಗಳ ಬಳಿಕ ಐಪಿಎಲ್ಗೆ ಪದಾರ್ಪಣೆ…

ಎಸ್ಆರ್ಎಚ್ನ ಎಡಗೈ ವೇಗಿ ಡೇವಿಡ್ ಪೈನ್ 233 ಟಿ20 ಪಂದ್ಯಗಳ ಬಳಿಕ ಐಪಿಎಲ್ಗೆ ಪದಾರ್ಪಣೆ ಮಾಡಿದ್ದಾರೆ. ಇದು ಕೂಡ ದಾಖಲೆಯಾಗಿದೆ. ಅಲ್ಲದೆ ಟಿ20 ಕ್ರಿಕೆಟ್ನಲ್ಲಿ ಈವರೆಗೆ 304 ವಿಕೆಟ್ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.