ಗುವಾಹಟಿ: ರಾಜಸ್ಥಾನ ರಾಯಲ್ಸ್ ಬೌಲರ್ಗಳು ಮೋಡ ಮತ್ತು ಸೆಕೆಯ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಶುಭಾರಂಭ ಮಾಡಿತು.

ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ಸ್ ಬೌಲರ್ಗಳು ಆರಂಭದಿಂದಲೇ ಹಿಡಿತ ಸಾಧಿಸಿದರು.

ಮಳೆಯಿಂದಾಗಿ ಪಿಚ್ ಮೇಲೆ ಹೊದಿಕೆ ಹಾಕಲಾಗಿದ್ದು ತೇವಾಂಶವೂ ಇತ್ತು. ಟಾಸ್ ಗೆದ್ದು ಫೀಲ್ಡಿಂಗ್ ಮಾಡುವ ನಾಯಕ ರಿಯಾನ್ ಪರಾಗ್ ಅವರ ನಿರ್ಧಾರ ಸಮರ್ಥಿಸುವಂತೆ ಬೌಲರ್ಗಳು ಬೇಗನೇ ಯಶಸ್ಸು ಪಡೆದರು. ವೇಗದ ಬೌಲರ್ಗಳಾದ ಜೋಫ್ರಾ ಆರ್ಚರ್, ನಾಂಡ್ರೆ ಬರ್ಗರ್ ಮತ್ತು ರಾಯಲ್ಸ್ ತಂಡಕ್ಕೆ ಮರಳಿದ ಜಡೇಜ ತಲಾ ಎರಡು ವಿಕೆಟ್ಗಳನ್ನು ಪಡೆದರು.

ಟಿ20 ವಿಶ್ವಕಪ್ ಗೆಲುವಿನಲ್ಲಿ ಮಿಂಚಿದ್ದ ಸಂಜು ಸ್ಯಾಮ್ಸನ್ (6) ಅವರಿಗೆ ಸೂಪರ್ ಕಿಂಗ್ಸ್ ಪರ ಪದಾರ್ಪಣೆ ಸ್ಮರಣೀಯವಾಗಲಿಲ್ಲ. ಎರಡನೇ ಓವರಿನಲ್ಲೇ ದಕ್ಷಿಣ ಆಫ್ರಿಕಾದ ವೇಗಿ ಬರ್ಗರ್ ಅವರ ಎಕ್ಸ್ಪ್ರೆಸ್ ವೇಗದ ಎಸೆತವನ್ನು ಮಿಡ್ವಿಕೆಟ್ ಮೇಲೆ ಎತ್ತುವ ಭರದಲ್ಲಿ ಆಫ್ಸ್ಟಂಪ್ ಕಳೆದುಕೊಂಡರು. ನಾಯಕ ಋತುರಾಜ್ ಗಾಯಕವಾಡ ಅವರೂ ಪರದಾಡಿದರು. ಅವರನ್ನು ಮೂರನೇ ಓವರಿನಲ್ಲಿ ಆರ್ಚರ್ ಬೌಲ್ಡ್ ಮಾಡಿದರು.

ಯುವತಾರೆ ಆಯುಷ್ ಮ್ಹಾತ್ರೆ ಬಂದ ಹಾಗೆಯೇ, ಬರ್ಗರ್ ಬೌಲಿಂಗ್ನಲ್ಲಿ ವಿಕೆಟ್ಕೀಪರ್ಗೆ ಕ್ಯಾಚಿತ್ತಾಗ ಚೆನ್ನೈ ಮೊತ್ತ 3.1 ಓವರುಗಳಲ್ಲಿ 3 ವಿಕೆಟ್ಗೆ 19. ಬರ್ಗರ್ ಮತ್ತು ಆರ್ಚರ್ ಇಬ್ಬರೂ ಪವರ್ಪ್ಲೇ ಅವಧಿಯಲ್ಲಿ ಗಮನಸೆಳೆದರು. ಮೊದಲ 15 ಓವರುಗಳಲ್ಲಿ ಆಟ ಸಂಪೂರ್ಣವಾಗಿ ರಾಯಲ್ಸ್ ಹಿಡಿತದಲ್ಲಿತ್ತು.

ಎಂಟನೇ ಓವರಿನಲ್ಲಿ ದಾಳಿಗಿಳಿದ ರವೀಂದ್ರ ಜಡೇಜ (18ಕ್ಕೆ2), ಸರ್ಫರಾಜ ಖಾನ್ ಅವರನ್ನು ಎಲ್ಬಿ ಬಲೆಗೆ ಕೆಡವಿದರು. ಅದೇ ಓವರಿನಲ್ಲಿ ಅವರು ವಿಶ್ವಕಪ್ ತಾರೆ ಶಿವಂ ದುಬೆ (6, 4ಎ) ಅವರ ವಿಕೆಟ್ ಸಹ ಕಬಳಿಸಿದರು. ಆಗ ಮೊತ್ತ 57ಕ್ಕೆ6.

ಓವರ್ಟನ್ ಆಸರೆ: ಒಂದು ಹಂತದಲ್ಲಿ (94ಕ್ಕೆ9) ಸಿಎಸ್ಕೆ ತಂಡ ನೂರರ ಒಳಗೆ ಆಲೌಟ್ ಆಗುವಂತೆ ಕಂಡಿತ್ತು. ಆದರೆ ಇಂಗ್ಲೆಂಡ್ನ ವೇಗದ ಬೌಲಿಂಗ್ ಆಲ್ರೌಂಡರ್ ಜೇಮಿ ಓವರ್ಟನ್ (43, 36ಎ) ಅವರು ತಂಡದ ನೆರವಿಗೆ ಬಂದಿದ್ದರಿಂದ ನೂರು ದಾಟಲು ಸಾಧ್ಯವಾಯಿತು. ಅವರು ಅನ್ಶುಲ್ ಕಂಬೋಜ್ ಜೊತೆ ಕೊನೆಯ ವಿಕೆಟ್ಗೆ 33 ರನ್ ಸೇರಿಸಿದರು.

ಇನಿಂಗ್ಸ್ನಲ್ಲಿ ಎರಡು ಎಸೆತ ಬಾಕಿಯಿರುವಂತೆ ಓವರ್ಟನ್ ರನೌಟ್ ಆದರು. ಅವರು ಸೇರಿ ಮೂವರಷ್ಟೇ ಎರಡಂಕಿ ಮೊತ್ತ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.